ಕೊರೋನಾ ವೈರಸ್ ಮತ್ತೆ ಹರಡುತ್ತಿದೆ. ಎರಡನೇ ಅಲೆ ಭೀತಿ ಎದುರಾಗಿದೆ. ಹೀಗಾಗಿ ಒಂದೊಂದೆ ನಿರ್ಬಂಧಗಳು ಜಾರಿಯಾಗುತ್ತಿದೆ. ಇದರ ನಡುವೆ ವಾಹನ ದಾಖಲೆ ಮಾನ್ಯತೆ ಅವಧಿಯನ್ನು ಕೇಂದ್ರ ಸರ್ಕಾರ ಮತ್ತೆ ವಿಸ್ತರಿಸಿದೆ.
ಕಳದ ವರ್ಷ ಲಾಕ್‌ಡೌನ್, ಕೊರೋನಾ ಕಾರಣ ಡ್ರೈವಿಂಗ್ ಲೆಸೆನ್ಸ್, ಸ್ಟೇಟ್ ಪರ್ಮಿಟ್, ಫಿಟ್ನೆಸ್, ರಿ ರಿಜಿಸ್ಟ್ರೇಶನ್ ಸೇರಿದಂತೆ ವಾಹನ ದಾಖಲೆ ಪತ್ರಗಳ ಅವಧಿಯನ್ನು ಹಂತ ಹಂತವಾಗಿ ವಿಸ್ತರಿಸುತ್ತಲೇ ಬಂದಿತ್ತು. ಇದೀಗ ಮತ್ತೆ ವಾಹನ ದಾಖಲೆ ಮಾನ್ಯತೆ ಅವಧಿಯನ್ನು ಜೂನ್ 30ರ ವರೆಗೆ ವಿಸ್ತರಿಸಿದೆ
2020ರ ಫೆಬ್ರವರಿ 1 ನಂತರ ಅವಧಿ ಮುಗಿದಿರುವ ವಾಹನ ದಾಖಲೆ ಪತ್ರಗಳ ಅವಧಿ ಇದೀಗ 2021ರ ಜೂನ್ 30ರ ವರೆಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
ಕೊರೋನಾ ವೈರಸ್ ಕಾರಣ ವಾಹನ ಮಾಲೀಕರು, ಚಾಲಕರು ದಾಖಲೆ ಪತ್ರಕ್ಕಾಗಿ ಆರ್‌ಟಿಒ ಕಚೇರಿಗೆ ಮುಗಿ ಬಿದ್ದರೆ ಕೊರೋನಾ ಮತ್ತೆ ವ್ಯಾಪಕವಾಗಿ ಹರಡು ಭೀತಿ ಇದೆ. ಹೀಗಾಗಿ ಕೇಂದ್ರ ಮತ್ತೆ ಅವಧಿಯನ್ನು ವಿಸ್ತರಿಸಿದೆ.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಭಾರತದಲ್ಲಿ ಲಾಕ್‌ಡೌನ್ ಘೋಷಿಸಲಾಗಿತ್ತು. ಹೀಗಾಗಿ ವಾಹನ ದಾಖಲೆ ಪತ್ರಗಳ ಮಾನ್ಯತೆ ಅವಧಿಯನ್ನು ಹಂತ ಹಂತವಾಗಿ ವಿಸ್ತರಿಸುತ್ತಲೇ ಬಂದಿತ್ತು.
ಲಾಕ್‌ಡೌನ್ ಹಾಗೂ ಕೊರೋನಾ ಭೀತಿ ಹೆಚ್ಚಾಗಿದ್ದ ಕಾರಣ ಹಲವು ಸರ್ಕಾರಿ ಕಚೇರಿಗಳು ಬಂದ್ ಆಗಿತ್ತು. ಹೀಗಾಗಿ ವಾಹನ ದಾಖಲೆ ಪತ್ರ ನವೀಕರಿಸುವುದು ಕಷ್ಟಕರ ಮಾತಾಗಿತ್ತು.
ಇದೀಗ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇದೀಗ ಕೋಟ್ಯಾಂತರ ವಾಹನ ಮಾಲೀಕರು, ಸಾರಿಗೆ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿರುವ ಸೇರಿದಂತೆ ವಾಹನ ಮೂಲಕ ಕಾಯಕ ನಿರ್ವಹಿಸುತ್ತಿರುವ ಹಲವರಿಗ ಲಾಭವಾಗಿದೆ.