ರಿಜಿಸ್ಟ್ರೇಶನ್ ಉಚಿತ, 25% ರೋಡ್ ಟ್ಯಾಕ್ಸ್ ಕಡಿತ; ವಾಹನ ಸ್ಕ್ರಾಪ್ ನೀತಿ ಪ್ರಕಟಿಸಿದ ಗಡ್ಕರಿ!

First Published Mar 18, 2021, 3:36 PM IST

ಸ್ಕ್ರಾಪ್ ಪಾಲಿಸಿ ಅಥವಾ ವಾಹನ ಗುಜುರಿ ನೀತಿಯ ಗೊಂದಲಕ್ಕೆ ತೆರೆ ಬಿದ್ದಿದೆ. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಇದೀಗ ಸ್ಕ್ರಾಪ್ ನೀತಿ ಪ್ರಕಟಿಸಿದ್ದಾರೆ. ಇದರಲ್ಲಿ ಹಳೇ ವಾಹನ ಗುಜುರಿಗೆ ಹಾಕಿ ಹೊಸ ವಾಹನ ಖರೀದಿಸುವವರಿಗೆ ಭರ್ಜರಿ ಆಫರ್ ನೀಡಲಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿವೆ.

ದೇಶದಲ್ಲಿ ಸಾಕಷ್ಟು ಚರ್ಚೆಗೆ ಒಳಗಾಗಿರುವ ನೀತಿಗಳ ಪೈಕಿ ಸ್ಕ್ರಾಪ್ ಪಾಲಿಸಿಕೂಡ ಒಂದು. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನ, 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನ ಗುಜುರಿಗೆ ಹಾಕುವ ಸ್ಕ್ರಾಪ್ ಪಾಲಿಸಿಯನ್ನು ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿತ್ತು.
undefined
ಇದೀಗ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ವಾಹನ ಗುಜುರಿ ನೀತಿಯನ್ನು ಪ್ರಕಟಿಸಿದ್ದಾರೆ. ಈ ಪಾಲಿಸಿ ಪ್ರಕಾರ ಹಳೆ ವಾಹನ ಗುಜುರಿಗೆ ಹಾಕಿ ಹೊಸ ವಾಹನ ಖರೀದಿಸುವ ಮಾಲೀಕರಿಗೆ ಭರ್ಜರಿ ಆಫರ್ ನೀಡಲಾಗಿದೆ.
undefined
ಹಳೇ ವಾಹನ ಗುಜುರಿಗೆ ಹಾಕಿ ಸ್ಕ್ರಾಪ್ ಸರ್ಟಿಫಿಕೇಟ್ ಹಿಡಿದು ಹೊಸ ವಾಹನ ಖರೀದಿಸಿದರೆ, ರಿಡಿಸ್ಟ್ರೇಶನ್ ಉಚಿತ(ಕೆಲ ನಿಬಂಧನೆಗಳಿವೆ) ಮಾಡಲಾಗಿದೆ. ವಾಹನ ಸ್ಕ್ರಾಫ್ ಮಾಡಿ ಎಲೆಕ್ಟ್ರಿಕ್ ವಾಹನ ಖರೀದಿಸಿದರೆ ರಿಜಿಸ್ಟ್ರೇಶನ್ ಸಂಪೂರ್ಣ ಉಚಿತವಾಗಲಿದೆ.
undefined
ಸ್ಕ್ರಾಪ್ ಸರ್ಟಿಫಿಕೇಟ್ ಹಿಡಿದು ಹೊಸ ವಾಹನ ಖರೀದಿಸುವ ಮಾಲೀಕರಿಗೆ ಖಾಸಗಿ ವಾಹನವಾದರೆ ಶೇಕಡಾ 25 ರಷ್ಟು ರೋಡ್ ಟ್ಯಾಕ್ಸ್ ಕಡಿತ ಮಾಡಲಾಗಿದೆ. ಇನ್ನು ವಾಣಿಜ್ಯ ವಾಹನಕ್ಕೆ ಶೇಕಡಾ 15 ರಷ್ಟು ರೋಡ್ ಟ್ಯಾಕ್ಸ್ ಕಡಿತ ಮಾಡಲಾಗಿದೆ.
undefined
ಇಷ್ಟೇ ಅಲ್ಲ ಸ್ಕ್ರಾಪ್ ಸರ್ಟಿಫಿಕೇಟ್ ಹಿಡಿದು ಹೊಸ ವಾಹನ ಖರೀದಿಸಲು ಶೋ ರೋಂಗೆ ತೆರಳಿದರೆ, ನಿಮಗೆ ಹೊಸ ವಾಹನದ ಮೇಲೆ ಶೇಕಡಾ 5 ರಷ್ಟು ರಿಯಾಯತಿ ಸಿಗಲಿದೆ. ಈ ಹಳೇ ವಾಹನ ಸ್ಕ್ರಾಪ್ ಮಾಡಿ, ಹೊಸ ವಾಹನ ಖರೀದಿಸಿದರೆ ಭರ್ಜರಿ ಡಿಸ್ಕೌಂಟ್ ಸಿಗಲಿದೆ.
undefined
ಸ್ಕ್ರಾಪ್ ಮಾಡುವ ವಾಹನದ ಮೌಲ್ಯದ ಶೇಕಡಾ 4 ರಿಂದ 6ರಷ್ಟು ವಾಹನ ಮಾಲೀಕರಿಗೆ ನೀಡಲಾಗುತ್ತದೆ. ಜೊತೆಗೆ ಸ್ಕ್ರಾಪ್ ಮಾಡಿದ ಬಳಿಕ ಸ್ಕ್ರಾಪ್ ತೂಕಕ್ಕೆ ಅನುಸರಿಸಿ ಆ ಮೌಲ್ಯ ಕೂಡ ಮಾಲೀಕರಿಗೆ ಸಿಗಲಿದೆ.
undefined
15-20 ವರ್ಷಕ್ಕಿಂತ ಮೇಲ್ಪಟ್ಟ ವಾಹನಗಳನ್ನು ಉಳಿಸಿಕೊಳ್ಳಬೇಕಾದರೆ ಹೆಚ್ಚುವರಿ ಗ್ರೀನ್ ಟ್ಯಾಕ್ಸ್, ಹೊಸ ರಿಜಿಸ್ಟ್ರೇಶನ್, ಫಿಟ್ನೆಸ್ ಸರ್ಟಿಫಿಕೇಶನ್ ಮೊತ್ತ ಪಾವತಿಸಬೇಕು. ಇದು ಅತ್ಯಂತ ದುಬಾರಿಯಾಗಲಿದೆ.
undefined
ರಿ ರಿಜಿಸ್ಟ್ರೇಶನ್ ಮೊತ್ತ 8 ಪಟ್ಟು ದುಬಾರಿಯಾಗಲಿದೆ. ಸದ್ಯ ದ್ವಿಚಕ್ರ ವಾಹನ ರಿ ರಿಜಿಸ್ಟ್ರೇಶನ್ ಮೊತ್ತ 300 ರೂಪಾಯಿ. ಆದರೆ ಹೊಸ ನೀತಿಯಿಂದ ಇದರ ಬೆಲೆ 1,000 ರೂಪಾಯಿ ಆಗಲಿದೆ. ಆಮದು ಮಾಡಿಕೊಂಡ ವಾಹನ ರಿ ರಿಜಿಸ್ಟ್ರೇಶನ್ ಬೆಲೆ 40,000 ರೂಪಾಯಿ ಆಗಲಿದೆ. ವಾಣಿಜ್ಯ ವಾಹನ ರಿ ರಿಜಿಸ್ಟ್ರೇಶನ್ ಕೂಡ ದುಬಾರಿಯಾಗಲಿದೆ.
undefined
click me!