ದಿನಭವಿಷ್ಯ: ಬುಧಾದಿತ್ಯ, ಶಂಖ, ವಜ್ರದಂತಹ ಶುಭ ಯೋಗ; 4 ರಾಶಿಯವರಿಗೆ ಅತಿದೊಡ್ಡ ಗುಡ್‌ನ್ಯೂಸ್

Published : May 25, 2026, 06:45 AM IST

ಸೋಮವಾರ, 25ನೇ ಮೇ 2026 ರಂದು ಗಂಗಾ ದಸರಾ ಆಚರಣೆಯ ಜೊತೆಗೆ ಬುಧಾದಿತ್ಯ, ಶಂಖ, ವಜ್ರದಂತಹ ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಈ ಯೋಗಗಳ ಪ್ರಭಾವದಿಂದ ನಾಲ್ಕು ರಾಶಿಯವರಿಗೆ ವಿಶೇಷ ಅದೃಷ್ಟ ಮತ್ತು ಶುಭಫಲಗಳು ಕಾದಿವೆ.

PREV
113
ಸೋಮವಾರ, 25ನೇ ಮೇ 2026

ಇಂದು ಸೋಮವಾರ, 25ನೇ ಮೇ 2026 ಆಗಿದ್ದು, ಗಂಗಾ ದಸರಾ ಆಚರಣೆ ಮಾಡಲಾಗುತ್ತದೆ. ಈ ದಿನವೂ ಅಪಾರ ಶುಭ ಮತ್ತು ಅದೃಷ್ಟವನ್ನು ನೀಡುತ್ತದೆ. ಪ್ರಸಿದ್ಧ ಜ್ಯೋತಿಷಿ ಡಾ. ಅನೀಶ್ ವ್ಯಾಸ್ ಪ್ರಕಾರ, ಬುಧಾದಿತ್ಯ, ಶಂಖ, ವಜ್ರ, ವಶಿ ಮತ್ತು ಸುನಫ ಯೋಗಗಳು ರಾಶಿ ಮೇಲೆ ಪರಿಣಾಮ ಬೀರುತ್ತದೆ. ಈ ಯೋಗಗಳು ನಾಲ್ಕು ರಾಶಿಗೆ ಅದೃಷ್ಟವನ್ನುಂಟು ಮಾಡುತ್ತವೆ. ಹಾಗೆಯೇ ರುಚಕ್ ಯೋಗದ ಲಾಭವೂ ಸಿಗಲಿದೆ. ಇಂದು ಬೆಳಗ್ಗೆ 9.07ಕ್ಕೆ ಚಂದ್ರ ಕನ್ಯಾರಾಶಿಗೆ ಸಾಗಲಿದೆ.

213
ಮೇಷ ರಾಶಿ

ಖಾಸಗಿ ಉದ್ಯೋಗಿಗಳು ಉನ್ನತ ಸ್ಥಾನಕ್ಕೇರುತ್ತಾರೆ. ವೃತ್ತಿಜೀವನದಲ್ಲಿ ಗಮನಾರ್ಹ ಮತ್ತು ಸಕಾರಾತ್ಮಕ ಬದಲಾವಣೆಗಳು ಕಂಡು ಬರಲಿವೆ. ವ್ಯಾಪಾರ ಉದ್ದೇಶಗಳಿಂದ ದೂರದ ಪ್ರಯಾಣ ಮಾಡುವ ಅವಕಾಶಗಳು ಬರಲಿವೆ. ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ.

  • ಅದೃಷ್ಟ ಬಣ್ಣ: ಕೆಂಪು
  • ಅದೃಷ್ಟ ಸಂಖ್ಯೆ: 9
313
ವೃಷಭ ರಾಶಿ

ಆಧ್ಯಾತ್ಮಿಕ ಕೆಲಸಗಳಲ್ಲಿ ತೊಡಗಿರೋದರಿಂದ ಹೆಚ್ಚಿನ ಗೌರವ ಲಭ್ಯವಾಗುತ್ತದೆ. ವೆಚ್ಚಗಳಿಗೆ ಹೋಲಿಸಿದ್ರೆ ಆದಾಯದ ಕಡಿಮೆಯಾಗಿರುತ್ತದೆ. ಸಂಗಾತಿ ನಡವಳಿಕೆಯಲ್ಲಿನ ಬದಲಾವಣೆಯಿಂದಾಗಿ ಮನಸ್ತಾಪಗಳು ಉಂಟಗುವ ಸಾಧ್ಯತೆಗಳಿರುತ್ತವೆ. ಸೋದರಿ ಮದುವೆಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ.

  • ಅದೃಷ್ಟ ಬಣ್ಣ: ಬಿಳಿ
  • ಅದೃಷ್ಟ ಸಂಖ್ಯೆ: 2
413
ಮಿಥುನ ರಾಶಿ

ಇಂದು ಇಡೀ ದಿನ ನೀವು ತುಂಬಾ ಸಕ್ರಿಯರಾಗಿರುತ್ತೀರಿ. ಹೊಸ ಜವಾಬ್ದಾರಿಗಳು ನಿಮ್ಮಲ್ಲಿನ ಆತ್ಮವಿಶ್ವಾಸ ಹೆಚ್ಚಳವಾಗುತ್ತದೆ. ವಿದ್ಯಾರ್ಥಿಗಳು ಬಯಸಿದ ಫಲಿತಾಂಶ ಲಭ್ಯವಾಗುತ್ತದೆ. ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗುತ್ತದೆ. ಕೆಲವರು ನಿಮ್ಮ ಮೇಲೆ ದೂರುಗಳನ್ನು ಮೇಲಾಧಿಕಾರಿಗಳಿಗೆ ಸಲ್ಲಿಕೆ ಮಾಡಬಹುದು.

  • ಅದೃಷ್ಟ ಬಣ್ಣ: ಹಸಿರು
  • ಅದೃಷ್ಟ ಸಂಖ್ಯೆ: 5
513
ಕರ್ಕಾಟಕ

ಇಂದು ಇಡೀ ದಿನ ಕರ್ಕಾಟಕ ರಾಶಿಯವರಿಗೆ ಆನಂದಮಯವಾಗಿರುತ್ತದೆ. ರಿಯಲ್ ಎಸ್ಟೇಟ್‌ಗೆ ಸಂಬಂಧಿಸಿದ ನ್ಯಾಯಾಲಯದ ವ್ಯಾಜ್ಯಗಳು ನಿಮ್ಮ ಪರವಾಗಿ ಪರಿಣಮಿಸಬಹುದು. ಯಾವುದೇ ಸ್ಪರ್ಧೆಯಲ್ಲಿಯೂ ನಿಮಗೆ ಗೆಲುವು ಸಿಗುತ್ತದೆ. ಜಯಲಕ್ಷ್ಮೀ ನಿಮ್ಮ ಪರವಾಗಿ ಇರಲಿದೆ. ಮಕ್ಕಳ ಬೇಡಿಕೆ ಈಡೇರೋದರಿಂದ ಮನೆಯಲ್ಲಿ ಸಂತಸದ ವಾತಾವರಣ ನಿರ್ಮಾಣವಾಗುತ್ತದೆ. ಪ್ರಯಾಣದ ವೇಳೆ ನಿಮ್ಮ ವಸ್ತುಗಳ ಬಗ್ಗೆ ಕಾಳಜಿ ಇರಲಿ.

  • ಅದೃಷ್ಟ ಬಣ್ಣ: ಹಾಲಿನ ಬಿಳಿ
  • ಅದೃಷ್ಟ ಸಂಖ್ಯೆ: 7
613
ಸಿಂಹ ರಾಶಿ

ಇಂದು ಸಿಂಹ ರಾಶಿಯವರು ಆರೋಗ್ಯ ಮತ್ತು ಹಿತಶತ್ರುಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಹೊಸ ಹೂಡಿಕೆ ಅಥವಾ ವ್ಯವಹಾರ ಆರಂಭಿಸಲು ಶುಭ ದಿನವಾಗಿದೆ. ಆದ್ರೆ ಇಂದು ನಿಮ್ಮ ಸೋಮಾರಿತನದಿಂದ ಕೆಲಸಗಳು ವಿಳಂಬವಾಗಬಹುದು. ಸಣ್ಣ ಆರೋಗ್ಯ ಸಮಸ್ಯೆಗಳನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ

  • ಅದೃಷ್ಟ ಬಣ್ಣ: ಚಿನ್ನ
  • ಅದೃಷ್ಟ ಸಂಖ್ಯೆ: 1
713
ಕನ್ಯಾ ರಾಶಿ

ಇಂದು ನಿಮಗೆ ಸಾಮಾನ್ಯ ದಿನವಾಗಿದ್ದು, ಕೌಟುಂಬಿಕ ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನ ಮಾಡುತ್ತಿರುತ್ತೀರಿ. ಈ ಸಮಸ್ಯೆಗಳಿಂದಾಗಿ ಒಳ್ಳೆಯ ಯೋಜನೆಗಳನ್ನು ಕಳೆದುಕೊಳ್ಳುತ್ತೀರಿ. ಇದರಿಂದ ನಿಮ್ಮ ಮಾನಸಿಕ ಒತ್ತಡ ಹೆಚ್ಚಳವಾಗುತ್ತದೆ. ಕುಟುಂಬ ಸದಸ್ಯರ ಅನಾರೋಗ್ಯದಿಂದ ಖರ್ಚುಗಳು ಅಧಿಕವಾಗುತ್ತವೆ. ಸಂಗಾತಿಯಿಂದ ಭವಿಷ್ಯದ ಆರ್ಥಿಕ ಯೋಜನೆಗಳ ಚರ್ಚೆ ಮಾಡಿ.

  • ಅದೃಷ್ಟ ಬಣ್ಣ: ಗಾಢ ಹಸಿರು
  • ಅದೃಷ್ಟ ಸಂಖ್ಯೆ: 6
813
ತುಲಾ ರಾಶಿ

ಇಂದು ನಿಮಗೆ ಮನಸ್ಸಿನ ಶಾಂತಿ ಮತ್ತು ಕೌಟುಂಬಿಕ ಸಂತೋಷ ಲಭ್ಯವಾಗುತ್ತದೆ. ಯಾವುದೇ ಪರೀಕ್ಷೆಗಳನ್ನು ಬರದಿದ್ರೆ ಇಂದು ನಿಮಗೆ ಉತ್ತಮ ಫಲಿತಾಂಶ ಲಭ್ಯವಾಗುತ್ತದೆ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಸಮಸ್ಯೆಗೆ ಸಮಾಧಾನಕರ ಸುದ್ದಿ ಸಿಗುತ್ತದೆ. ಮಕ್ಕಳು ಮತ್ತು ಸಂಗಾತಿಯಿಂದ ಬೆಂಬಲ ಸಿಗಲಿದೆ.

  • ಅದೃಷ್ಟ ಬಣ್ಣ: ತಿಳಿ ನೀಲಿ
  • ಅದೃಷ್ಟ ಸಂಖ್ಯೆ: 8
913
ವೃಶ್ಚಿಕ ರಾಶಿ

ವಾಹನ ಖರೀದಿ ಭಾಗ್ಯ ನಿಮ್ಮದಾಗಲಿದೆ. ವ್ಯವಹಾರ ಸ್ಥಳ ಬದಲಾಯಿಸುವ ಸಮಯ ಬರಲಿದೆ. ಬುದ್ಧಿವಂತಿಕೆ ಮತ್ತು ವಿವೇಚನೆಯಿಂದ ಹೊಸ ಹೂಡಿಕೆಗಳನ್ನು ಮಾಡಿಕೊಳ್ಳಿ. ಮನೆಯಲ್ಲಿ ಸೌಕರ್ಯಗಳು ಮತ್ತು ಸೌಕರ್ಯಗಳು ಹೆಚ್ಚಾಗುತ್ತವೆ. ಸಹೋದ್ಯೋಗಿಗಳ ಸಲಹೆಯ ಲಾಭ ಪಡೆದುಕೊಳ್ಳಿ.

  • ಅದೃಷ್ಟ ಬಣ್ಣ: ಕೆಂಗಂದು
  • ಅದೃಷ್ಟ ಸಂಖ್ಯೆ: 3
1013
ಧನು ರಾಶಿ

ಇಂದು ಈ ಧನು ರಾಶಿಯವರಿಗೆ ಸಾಲದಿಂದ ಪರಿಹಾರ ಸಿಗಲಿದೆ. ಬ್ಯಾಂಕ್ ಅಥವಾ ಸಹಕಾರ ಸಂಸ್ಥೆಗಳಲ್ಲಿ ಪಡೆದುಕೊಂಡ ಸಾಲದಿಂದ ಮುಕ್ತರಾಗುತ್ತೀರಿ. ಸಾಲ ಪರಿಹಾರದಿಂದ ನಿಮ್ಮ ಮಾನಸಿಕ ಹೊರೆ ಕಡಿಮೆ ಮಾಡುತ್ತದೆ. ಮಕ್ಕಳ ಯಶಸ್ಸು ಮನೆಯಲ್ಲಿ ಸಂತೋಷವನ್ನುಂಟು ಮಾಡುತ್ತದೆ. ವಿಷ್ಯಕ್ಕಾಗಿ ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿ.

  • ಅದೃಷ್ಟ ಬಣ್ಣ: ಹಳದಿ
  • ಅದೃಷ್ಟ ಸಂಖ್ಯೆ: 4
1113
ಮಕರ ರಾಶಿ

ಇಂದು ಮಕರ ರಾಶಿಯವರ ಆರ್ಥಿಕ ಪರಿಸ್ಥಿತಿ ಬಲವಾಗುತ್ತದೆ. ಬುದ್ಧಿವಂತ ಮತ್ತು ವಿವೇಕಯುತ ನಿರ್ಧಾರಗಳು ವ್ಯವಹಾರಗಳಲ್ಲಿ ಲಾಭ ತಂದು ಕೊಡುತ್ತವೆ. ವೈವಾಹಿಕ ಜೀವನದಲ್ಲಿ ಸಣ್ಣ ಮನಸ್ತಾಪಗಳುಂಟಾಗಬಹುದು. ಪೋಷಕರು ಅಥವಾ ಮನೆಯಲ್ಲಿ ಹಿರಿಯರಿಂದ ಆಶೀರ್ವಾದ ಪಡೆದುಕೊಳ್ಳಿ.

  • ಅದೃಷ್ಟ ಬಣ್ಣ: ಕಪ್ಪು
  • ಅದೃಷ್ಟ ಸಂಖ್ಯೆ: 10
1213
ಕುಂಭ ರಾಶಿ

ಈ ದಿನ ನಿಮಗೆ ಮಿಶ್ರ ಫಲಿತಾಂಶಗಳನ್ನು ತರಲಿದೆ. ವೈಯಕ್ತಿಕ ಕೆಲಸಗಳಲ್ಲಿ ಬ್ಯುಸಿಯಾಗಿ ಶಾಪಿಂಗ್ ಮಾಡುತ್ತೀರಿ. ಸರ್ಕಾರಿ ಉದ್ಯೋಗಗಳ ಆದಾಯ ಹೆಚ್ಚಳವಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಳವಾಗಿ ಗೌರವ ಲಭಿಸುತ್ತದೆ.ವಿದ್ಯಾರ್ಥಿಗಳು ಅಧ್ಯಯನದಲ್ಲಿ ಏಕಾಗ್ರತೆಯನ್ನು ಕಾಪಾಡಿಕೊಳ್ಳಬೇಕು. ಸಂಬಂಧಿಗಳ ಜೊತೆ ಯೋಚಿಸಿ ಮಾತನಾಡಿ.

  • ಅದೃಷ್ಟ ಬಣ್ಣ: ನೀಲಿ
  • ಅದೃಷ್ಟ ಸಂಖ್ಯೆ: 11
1313
ಮೀನ ರಾಶಿ

ಇಂದು ಯಾವುದೇ ವ್ಯವಹಾರಗಳಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನವಾಗಿದೆ. ಹೊಸ ಮತ್ತು ಹಳೆಯ ಆದಾಯ ಮೂಲಗಳಿಂದ ಹಣದ ಹರಿವು ಹೆಚ್ಚಳವಾಗುತ್ತದೆ. ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದಲ್ಲಿರುವ ಜನರಿಗೆ ಗೌರವ ಸಿಗಲಿದ್ದು, ಇದರಿಂದ ಪ್ರತಿಷ್ಠೆ ಹೆಚ್ಚಳವಾಗುತ್ತದೆ. ತಂದೆ ಜೊತೆ ದೀರ್ಘವಾಗಿ ಮಾತುಕತೆ ನಡೆಸುತ್ತೀರಿ.

  • ಅದೃಷ್ಟ ಬಣ್ಣ: ಕೇಸರಿ
  • ಅದೃಷ್ಟ ಸಂಖ್ಯೆ: 12
Read more Photos on
click me!

Recommended Stories