Sorry ಅಮ್ಮ ಕಾಪಾಡಕಾಗ್ಲಿಲ್ಲ, ನಿಮ್ಗಿಂತ ಮುಂಚೆ ಹೋಗ್ತೀನಿ ಎಂದು ಹೋಗೇ ಬಿಟ್ಟ

First Published | Feb 9, 2021, 11:54 AM IST

'ಸಾರಿ ಅಮ್ಮ ನಿಮ್ಮನ್ನ ಕಾಪಾಡಾಕಾಗ್ಲಿಲ್ಲ.. ನಿಮ್ಗಿಂತ ಮುಂಚೆ ಹೋಗ್ತೀನಿ...' | ಅಮ್ಮನ ಉಳಿಸೋಕಾಗದ ಕೊರಗಲ್ಲಿ ಆತ್ಮಹತ್ಯೆ ಮಾಡಿಕೊಂಡ 30ರ ಯುವಕ 

ಅನಾರೋಗ್ಯದಲ್ಲಿದ್ದ ತಾಯಿಯನ್ನು ಉಳಿಸಲು ಸಾಧ್ಯವಾಗುತ್ತಿಲ್ಲ, ತಾಯಿಗಿಂತ ಮೊದಲು ತಾನೇ ಹೋಗುತ್ತೇನೆ ಎಂದು ಮೊಬೈಲ್ ನಲ್ಲಿ ಸ್ಟೇಟಸ್ ಹಾಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
undefined
ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ.
undefined
Tap to resize

ಅನಂತಾಡಿ ಪಂತಡ್ಕ ನಿವಾಸಿ ನೀರಜ್(30) ಆತ್ಮಹತ್ಯೆ ಮಾಡಿಕೊಂಡ ಯುವಕ. ಯುವಕನ ತಾಯಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿದ್ದು, ಇದರಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
undefined
'ಓ ಯಮ ದೇವನೇ ಹೆತ್ತ ತಾಯಿ ಸಾಯುವ ಮುನ್ನ ಕರೆದು ಕೋ ಒಮ್ಮೆ ನನ್ನ' ಎಂದು ಸ್ಟೇಟಸ್ ಹಾಕಿದ್ದಾನೆ ಯುವಕ.ಯುವಕ ರಾತ್ರಿ ನದಿಗೆ ಹಾರಿದ್ದು ಮಂಗಳವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.
undefined
ಸೋಮವಾರ ರಾತ್ರಿ ಹುಡುಕಾಡಿದರೂ, ಯುವಕನ ಸುಳಿವು ಪತ್ತೆಯಾಗಿರಲಿಲ್ಲ.
undefined
ಸ್ಥಳೀಯ ಈಜುಗಾರ ಮೊಹಮ್ಮದ್ ನಂದಾವರ ಹಾಗೂ ತಂಡ ಬಂಟ್ವಾಳ ಅಗ್ನಿಶಾಮಕ ದಳದ ತಂಡ ಹುಡುಕಾಟ ನಡೆಸಿತ್ತು. ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
undefined

Latest Videos

click me!