ರನ್ ಔಟ್ ವಿವಾದ, 21 ವರ್ಷದ ಅಂಪೈರ್ ಚಾಕುವಿನಿಂದ ಇರಿದು ಬರ್ಬರ ಹತ್ಯೆ!

Published : Apr 07, 2026, 09:34 AM IST

ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ದುರಂತ ಸಂಭವಿಸಿದೆ. ರನ್ ಔಟ್ ವಿಚಾರಕ್ಕೆ ನಡೆದ ಜಗಳದಲ್ಲಿ 21 ವರ್ಷದ ಯುವ ಅಂಪೈರ್ ಅಜಿತ್ ಬಾಬು ಬರ್ಬರವಾಗಿ ಕೊಲೆಯಾಗಿದ್ದಾರೆ. ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

PREV
14
ರನ್ ಔಟ್ ವಿವಾದ.. ಅಂಪೈರ್‌ನನ್ನು ಚಾಕುವಿನಿಂದ ಇರಿದು ಕೊಂದ ದುಷ್ಕರ್ಮಿ
ದೇಶದೆಲ್ಲೆಡೆ ಐಪಿಎಲ್ ಸಂಭ್ರಮ ಮನೆ ಮಾಡಿರುವಾಗ, ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ನಡೆದ ಕ್ರಿಕೆಟ್ ಪಂದ್ಯವೊಂದರಲ್ಲಿ ರಕ್ತ ಹರಿದಿದೆ. ಸಣ್ಣ ರನ್ ಔಟ್ ವಿವಾದವು 21 ವರ್ಷದ ಅಂಪೈರ್ ಡೋಲಾ ಅಜಿತ್ ಬಾಬು ಅವರ ಪ್ರಾಣ ತೆಗೆದಿದೆ. ಈ ಘಟನೆ ಕ್ರೀಡಾ ಜಗತ್ತನ್ನೇ ಬೆಚ್ಚಿಬೀಳಿಸಿದೆ.
24
ರನ್ ಔಟ್ ತೀರ್ಮಾನದಿಂದ ಶುರುವಾದ ಜಗಳ
ಭಾನುವಾರ ಸಂಜೆ ವಿಶಾಖಪಟ್ಟಣದಲ್ಲಿ ಮೂರು ಸ್ಥಳೀಯ ತಂಡಗಳ ನಡುವೆ ಕ್ರಿಕೆಟ್ ಪಂದ್ಯ ನಡೆಯುತ್ತಿತ್ತು. ಈ ವೇಳೆ ಅಂಪೈರ್ ಅಜಿತ್ ಬಾಬು ನೀಡಿದ ರನ್ ಔಟ್ ತೀರ್ಮಾನದ ಬಗ್ಗೆ ಆಟಗಾರರು ಮತ್ತು ಪ್ರೇಕ್ಷಕರು ಅಸಮಾಧಾನ ವ್ಯಕ್ತಪಡಿಸಿದರು. ಇದೇ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ.
34
ಪಕ್ಕಾ ಪ್ಲಾನ್ ಮಾಡಿ ಅಂಪೈರ್ ಮೇಲೆ ದಾಳಿ
ಪಂದ್ಯ ಮುಗಿದ ನಂತರ, ಆರೋಪಿ ಕಾಂತ ಕಿಶೋರ್ (26) ಅಂಪೈರ್‌ಗಳನ್ನು ಮಾತುಕತೆಗೆಂದು ಕರೆದು ವಾಗ್ವಾದಕ್ಕಿಳಿದಿದ್ದಾನೆ. ಕುಡಿದ ಮತ್ತಿನಲ್ಲಿದ್ದ ಆತ, ತನ್ನ ಬಳಿ ಇದ್ದ ಚಾಕುವಿನಿಂದ ಅಜಿತ್ ಬಾಬು ಅವರ ಎದೆಗೆ ಇರಿದು ಕೊಲೆ ಮಾಡಿದ್ದಾನೆ.
44
ಪ್ರಾಣ ಉಳಿಸುವ ಪ್ರಯತ್ನ ವಿಫಲ
ತೀವ್ರವಾಗಿ ಗಾಯಗೊಂಡಿದ್ದ ಅಜಿತ್ ಬಾಬು ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ದಾರಿ ಮಧ್ಯೆಯೇ ಅವರು ಮೃತಪಟ್ಟರು. ಆರೋಪಿಗಾಗಿ ಪೊಲೀಸರು ವಿಶೇಷ ತಂಡಗಳನ್ನು ರಚಿಸಿ ಹುಡುಕಾಟ ನಡೆಸುತ್ತಿದ್ದಾರೆ. ಗಾಯಾಳು ಚಿರಂಜೀವಿ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories