ಈ ಒಂದು ರೂಲ್ಸ್ ಫಾಲೋ ಮಾಡಿದ್ರೆ ಮನೆ ಕಳ್ಳತನ ಆಗೋದೇ ಇಲ್ಲ

Published : Feb 27, 2026, 11:24 AM IST

ಮನೆಯಲ್ಲಿ ಬೆಳ್ಳಿ ಬಂಗಾರ ಮಾತ್ರವಲ್ಲ ಇರೋ ಬರೋ ಪಾತ್ರೆಯನ್ನೂ ಕಳ್ಳರು ಕದ್ದೊಯ್ತಾರೆ. ಎರಡು ದಿನ ಮನೆ ಬೀಗ ಹಾಕಿದ್ರೆ ಕಥೆ ಮುಗಿದಂತೆ. ಕಳ್ಳರ ಕಾಟ ಮನೆಗೆ ಇರ್ಬಾರದು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ.

PREV
16
ಕಳ್ಳರ ಭಯ

ನಾಲ್ಕೈದು ದಿನ ಮನೆ ಮಂದಿಯೆಲ್ಲ ಹೊರಗೆ ಹೋಗ್ಬೇಕು ಅಂದಾಗ ಕಳ್ಳರ ಭಯ ಸಾಮಾನ್ಯ. ಮನೆಗೆ ಎರಡು ದಿನಗಳಿಂದ ಬೀಗ ಜಡಿದಿದೆ ಅನ್ನೋದು ಗೊತ್ತಾದ್ರೆ ಕಳ್ಳರು ಆಕ್ಟಿವ್ ಆಗ್ತಾರೆ. ಮನೆಯಲ್ಲಿರುವ ಎಲ್ಲ ಸಾಮಾನು ದೋಚಿ ಪರಾರಿಯಾಗ್ತಾರೆ. ಬೆಳ್ಳಿ, ಬಂಗಾರದ ಬೆಲೆ ಗಗನಕ್ಕೇರಿರೋದ್ರಿಂದ ಕಳ್ಳತನದ ಸಂಖ್ಯೆ ಕೂಡ ಹೆಚ್ಚಾಗ್ತಿದೆ. ಇದೇ ಭಯಕ್ಕೆ ಮನೆ ಮಂದಿಯೆಲ್ಲ ಒಟ್ಟಿಗೆ ಟ್ರಿಪ್ ಅಥವಾ ಊರಿಗೆ ಹೋಗಲು ಹೆದರ್ತಿದ್ದಾರೆ. ನಿಮಗೆ ಮನೆ ಕಳ್ಳತನವಾಗುತ್ತೆ ಎಂಬ ಟೆನ್ಷನ್ ಬೇಡ. ಒಂದೆರಡು ದಿನ ಅಲ್ಲ ಒಂದು ವಾರ ನೀವು ಮನೆಯಲ್ಲಿಲ್ಲ ಅಂದ್ರೂ ಕಳ್ಳತನ ಆಗೋದಿಲ್ಲ. ನಿಮ್ಮ ಮನೆಯಲ್ಲಿರುವ ಎಲ್ಲ ವಸ್ತು ಸುರಕ್ಷಿತವಾಗಿರುತ್ತೆ. ಅದಕ್ಕೆ ನೀವು ಒಂದು ರೂಲ್ಸ್ ಫಾಲೋ ಮಾಡಿದ್ರೆ ಸಾಕು.

26
ಲಾಕ್ ಹೌಸ್ ಮಾನಿಟರಿಂಗ್ ಸಿಸ್ಟಂ

ನೀವು ಒಂದು ವಾರ ಇಲ್ಲ ನಾಲ್ಕು ದಿನ ಮನೆ ಮಂದಿಯೆಲ್ಲ ಊರಿಗೆ ಹೋಗ್ತಿದ್ದೀರಿ, ಮನೆಗೆ ಬೀಗ ಹಾಕ್ಬೇಕಾಗಿದೆ ಎಂದಾಗ ಟೆನ್ಷನ್ ಮಾಡ್ಕೊಳ್ಬೇಕಾಗಿಲ್ಲ. ಯಾರಿಗೆ ಮನೆ ಕಾಯುವ ಜವಾಬ್ದಾರಿ ನೀಡ್ಬೇಕು ಅಂತ ಹುಡುಕಾಟ ನಡೆಸ್ಬೇಕಾಗಿಲ್ಲ. ಲಾಕ್ ಹೌಸ್ ಮಾನಿಟರಿಂಗ್ ಸಿಸ್ಟಂ ಮೊರೆ ಹೋಗ್ಬಹುದು. ಆಗ ಪೊಲೀಸರೇ ನಿಮ್ಮ ಮನೆಗೆ ಭದ್ರತೆ ನೀಡ್ತಾರೆ. ಯಾವ್ದೆ ಭಯವಿಲ್ದೆ ನೀವು ರಜೆ ಮಜಾ ಅನುಭವಿಸ್ಬಹುದು.

36
ಲಾಕ್ ಹೌಸ್ ಮಾನಿಟರಿಂಗ್ ಸಿಸ್ಟಂ ಅಂದ್ರೇನು?

ಲಾಕ್ ಹೌಸ್ ಮಾನಿಟರಿಂಗ್ ಸಿಸ್ಟಂ, ಪೊಲೀಸ್ ಇಲಾಖೆ ಜಾರಿಗೆ ತಂದ ಪ್ಲಾನ್. ಇದ್ರಲ್ಲಿ ಪೊಲೀಸರೇ ನಿಮ್ಮ ಮನೆಗೆ ಬಂದು ಕ್ಯಾಮರಾ ಅಳವಡಿಸ್ತಾರೆ. ನೀವು ಮನೆಗೆ ವಾಪಸ್ ಬರುವವರೆಗೂ ನಿಮ್ಮ ಮನೆಯನ್ನು ಮಾನಿಟರ್ ಮಾಡ್ತಾರೆ. ಒಂದ್ವೇಳೆ ಕಳ್ಳತನದ ಮುನ್ಸೂಚನೆ ಸಿಕ್ಕಿದ್ರೆ ತಕ್ಷಣ ಅಲರ್ಟ್ ಆಗ್ತಾರೆ. ಇದು ಉಚಿತ ಸೇವೆ ಅನ್ನೋದು ಇನ್ನೊಂದು ವಿಶೇಷ.

46
ಹೇಗೆ ಕೆಲ್ಸ ಮಾಡುತ್ತೆ ಲಾಕ್ ಹೌಸ್ ಮಾನಿಟರಿಂಗ್ ಸಿಸ್ಟಂ

ನೀವು ಪ್ರವಾಸಕ್ಕೆ ಹೋಗುವ ಪ್ಲಾನ್ ಮಾಡಿದ್ದರೆ ಮೊದಲು ಪೊಲೀಸರಿಗೆ ಮಾಹಿತಿ ನೀಡ್ಬೇಕು. ಅದಕ್ಕೆ ನೀವು 112 ಅಥವಾ ಕಂಟ್ರೋಲ್ ರೂಮ್ ಗೆ ಕರೆ ಮಾಡ್ಬಹುದು. ಪೊಲೀಸ್ ಠಾಣೆಗೆ ಹೋಗಿಯೂ ನೀವು ಮಾಹಿತಿ ನೀಡ್ಬಹುದು. ನಾವು ಪ್ರವಾಸಕ್ಕೆ ಹೋಗ್ತಿದ್ದು, ಮನೆಗೆ ಭದ್ರತೆ ಅಗತ್ಯವಿದೆ ಅಂದ್ರೆ ಪೊಲೀಸರು ಕಾರ್ಯಪ್ರವೃತ್ತರಾಗ್ತಾರೆ. ಯೋಜನೆ ಅಡಿ, ಗುಪ್ತ ಕ್ಯಾಮರಾಗಳನ್ನು ಪೊಲೀಸ್ ಸಿಬ್ಬಂದಿ ಮನೆಗೆ ಅಳವಡಿಸ್ತಾರೆ. ಮನೆಯ ಮುಖ್ಯ ಬಾಗಿಲು ಕಾಣಿಸುವಂತೆ ಕ್ಯಾಮರಾ ಅಳವಡಿಸಲಾಗುತ್ತದೆ.

56
ಪ್ರತಿ ಜಿಲ್ಲೆಯಲ್ಲೂ ಜಾರಿಯಲ್ಲಿದೆ ಯೋಜನೆ

ಪ್ರತಿ ಜಿಲ್ಲೆಗೆ ಒಂದಿಷ್ಟು ಕ್ಯಾಮರಾ ನೀಡಲಾಗಿದೆ. ಈ ಕ್ಯಾಮರಾ ಆಡಿಯೋ ವಿಡಿಯೋ ಎರಡನ್ನು ಹೊಂದಿದೆ. 24 ಗಂಟೆ ಕ್ಯಾಮರಾ ವರ್ಕ್ ಆಗ್ತಿರುತ್ತದೆ. ಕಂಟ್ರೋಲ್ ರೂಮು ಹಾಗೂ ಮನೆ ಮಾಲೀಕರಿಗೆ ಇದ್ರ ಎಕ್ಸೆಸ್ ಇರುತ್ತದೆ. ಅವರು ಮನೆಯಲ್ಲಿ ಏನಾಗ್ತಿದೆ ಅನ್ನೋದನ್ನು ನೋಡ್ಬಹುದು. ಅನುಮಾನಾಸ್ಪದ ಕೃತ್ಯ ಕಂಡು ಬಂದ್ರೆ ಕಂಟ್ರೋಲ್ ರೂಮ್ ಸಿಬ್ಬಂದಿ ಅಲರ್ಟ್ ಆಗ್ತಾರೆ. ಅಕ್ಕ ಪಕ್ಕದ ಮನೆಯವರಿಗೆ ಮಾಹಿತಿ ನೀಡಿ, ಕೆಲವೇ ನಿಮಿಷದಲ್ಲಿ ಮನೆ ಬಳಿ ಪೊಲೀಸರು ಬರ್ತಾರೆ.

66
ಸಾರ್ವಜನಿಕರಿಗೆ ಮಾಹಿತಿ

ಸಾರ್ವಜನಿಕರಿಗೆ ಲಾಕ್ ಮಾನಿಟರಿಂಗ್ ಸಿಸ್ಟಂ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಸದ್ಯ ಪೊಲೀಸರ್ ಅಧಿಕಾರಿಗಳು ಜನರಿಗೆ ಇದ್ರ ಬಗ್ಗೆ ಮಾಹಿತಿ ನೀಡುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಇದ್ರ ಲಾಭ ಪಡೆದು, ಕಳ್ಳತನದಿಂದ ಮನೆಯನ್ನು ಸುರಕ್ಷಿತವಾಗಿಡುವಂತೆ ಮನವಿ ಮಾಡ್ತಿದ್ದಾರೆ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Photos on
click me!

Recommended Stories