ಶಿಕ್ಷಕಿಯ ಭೀಕರ ಅಂತ್ಯ: ಛಿದ್ರವಾದ ದೇಹ, ಕ್ಷಣಾರ್ಧದಲ್ಲಿ ಕನಸುಗಳೆಲ್ಲಾ ನುಚ್ಚುನೂರು!

Published : Apr 05, 2021, 04:10 PM IST

ರಾಜಸ್ಥಾನದ ನಾಗೌರ್‌ನಲ್ಲಿ ಸೋಮವರಾದ ಬೆಳಗ್ಗೆ ಭಯಾನಕ ಅಪಘಾತ ಸಂಭವಿಸಿದೆ. ಇದನ್ನು ಕಂಡವರೆಲ್ಲಾ ಬೆಚ್ಚಿ ಬಿದ್ದಿದ್ದಾರೆ. ಇಲ್ಲೊಬ್ಬ ಮುಖ್ಯ ಶಿಕ್ಷಕಿಗೆ ಮೇಲೆ ಡಂಪರ್ ಹಾದು ಹೋಗಿದೆ. ಚಕ್ರದಡಿ ಸಿಲುಕಿದ ಶಿಕ್ಷಕಿ ಕ್ಷಣಾರ್ಧದಲ್ಲಿ ಪ್ರಾಣ ಬಿಟ್ಟಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ಡಂಪರ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಮೃತದೇಹವನ್ನು ಕೊಂಡೊಯ್ದು ಶವಾಗಾರದಲ್ಲಿರಿಸಿದ್ದಾರೆ.  

PREV
14
ಶಿಕ್ಷಕಿಯ ಭೀಕರ ಅಂತ್ಯ: ಛಿದ್ರವಾದ ದೇಹ, ಕ್ಷಣಾರ್ಧದಲ್ಲಿ ಕನಸುಗಳೆಲ್ಲಾ ನುಚ್ಚುನೂರು!

ಈ ಘಟನೆ ಸೋಮವಾರ ನಾಗೌರ್‌ ಜಿಲ್ಲಾ ಮುಖ್ಯ ಕಚೇರಿ ಎದುರು ಬೆಳಗ್ಗೆ ಏಳು ಗಂಟೆಗೆ ಜೋಧ್‌ಪುರ್ ಹೈವೇಯಲ್ಲಿ ಸಂಭವಿಸಿದೆ. ಇಲ್ಲಿ ಮೋನಾ ಜಾಂಗಿಡ್‌ ಹೆಸರಿನ ಶಿಕ್ಷಕಿ ಎಂದಿನಂತತೆ ತಮ್ಮ ಸ್ಕೂಟಿಯಲ್ಲಿ ಶಾಲೆಗೆ ತೆರಳುತ್ತಿದ್ದರು. ಆದರೆ ಈ ಸ್ಥಳಕ್ಕಾಗಮಿಸುತ್ತಿದ್ದಂತೆಯೇ ಹಿಂಬದಿಯಿಂದ ವೇಗವಾಗಿ ಬಂದ ಡಂಪರ್‌ ಸ್ಕೂಟಿಗೆ ಡಿಕ್ಕಿ ಹೊಡೆದು ಮುಂದೆ ಸಾಗಿದೆ. ಅತ್ತ ಸ್ಕೂಟಿ ದೂರಕಲ್ಕೋಗಿ ಬಿದ್ದರೆ, ಶಿಕ್ಷಕಿ ಚಕ್ರದ ಕೆಳಗೆ ಸಿಲುಕಿದ್ದಾರೆ. 

24

ಅತ್ಯಂತ ಮೇಧಾವಿಯಾಗಿದ್ದ ಮೋನಾಗೆ ಅನೇಕ ಸರ್ಕಾರಿ ಉದ್ಯೋಗದ ಆಫರ್ ಸಿಕ್ಕಿತ್ತು. ಸದ್ಯ ಅವರು ರಾಜಕೀಯ ಉಚ್ಛ ಪ್ರಾಥಮಿಕ ವಿದ್ಯಾಲಯ ಗೋವಾ ಖುರ್ದದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಇದರೊಂದಿಗೆ ಅವರು ಆರ್‌ಎಎಸ್‌ಗೆ ತಯಾರಿ ನಡೆಸುತ್ತಿದ್ದರು.

34

ಈ ಭಯಾನಕ ಅಪಘಾತ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಈ ದೃಶ್ಯಗಳನ್ನು ಸಂಗ್ರಹಿಸಿದ್ದಾರೆ. ಇದನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ಚಾಲಕನ ವಿರುದ್ಧ ಕ್ರಮ ಕೈಗೊಳ್ಳಲಿದ್ದಾರೆ. ಈ ಘಟನೆಯಲ್ಲಿ ಚಾಲಕನ ನಿರ್ಲಕ್ಷ್ಯತನ ಬೆಳಕಿಗೆ ಬಂದಿದೆ.
 
44

ಮೋನಾರ ತಂದೆ ದೈಹಿಕ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇತ್ತೀಚೆಗಷ್ಟೇ ಅವರು ನಿವೃತ್ತರಾಗಿದ್ದರು. ಘಟನೆ ಬೆನ್ನಲ್ಲೇ ಶಾಲೆಯ ಶಿಕ್ಷಕರು, ಮುಖ್ಯ ಶಿಕ್ಷಕಿಯ ಹತ್ಯೆ ಕೇಸ್‌ ನೀಡಿದ್ದಾರೆ. 

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories