ಅಪ್ಪಿಕೊಂಡು, ಮುದ್ದಾಡುತ್ತಲೇ ಗರ್ಭಿಣಿ ಗರ್ಲ್‌ಫ್ರೆಂಡ್ ಕತ್ತು ಕೊಯ್ದ ಪ್ರೇಮಿ!

First Published | Mar 9, 2021, 4:59 PM IST

ಗರ್ಭಿಣಿಯಾದ ಗರ್ಲ್‌ಫ್ರೆಂಡ್‌ಗೆ ಅಬಾರ್ಷನ್ ಮಾಡಿಸಲು ಹತ್ತು ಸಾವಿರ ರೂಪಾಯಿ ಹಣ ಹೊಂದಿಸಲು ಸಾಧ್ಯವಾಗದ ಪ್ರೇಮಿಯೊಬ್ಬ ಶಾಕಿಂಗ್ ಹೆಜ್ಜೆ ಇರಿಸಿದ್ದಾನೆ. ತನ್ನೊಬ್ಬನ ಗೆಳೆಯನ ಸಹಾಯದಿಂದ ತನ್ನ ನಂಬಿದ ಪ್ರಿಯತಮೆಯನ್ನೇ ಕೊಲೆಗೈದಿದ್ದಾನೆ. ಇನ್ನು ತನ್ನ ಪ್ರೇಯಸಿಯನ್ನು ಸಾಯಿಸುವ ಕೆಲ ಕ್ಷಣದ ಹಿಂದಷ್ಟೇ ಆತ ಅಪ್ಪಿಕೊಂಡು ಮುದ್ದಾಡಿದ್ದ. ಸದ್ಯ ಪೊಲೀಸರು ಸೋಮವಾರದಂದು ಈ ಪ್ರಕರಣ ಬೇಧಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಜಾರ್ಕಂಡ್‌ನ ಹುಸೈನಾಬಾದ್‌ನಲ್ಲಿ ಈ ಘಟನೆ ನಡೆದಿದೆ.
 

ಕೆಲ ದಿನಗಳ ಹಿಂದೆ ಇಲ್ಲಿನ ಬಡೇಪುರ ಬಾಲೂಘಾಟ್‌ನಲ್ಲಿ ಅಪ್ರಾಪ್ತ ಬಾಲಕಿಯ ಶವವೊಂದು ಪತ್ತೆಯಾಗಿತ್ತು. ಮಣ್ಣಿನಲ್ಲಿ ಹೂತಿಟ್ಟ ಶವ ಪತ್ತೆಯಾದ ಬೆನ್ನಲ್ಲೇ, ಈ ಬಾಲಕಿಯ ಮನೆಯವರು ಆಸ್ತಿ ವಿಚಾರವಾಗಿ ಎದುರಾದ ವಿವಾದದಿಂದ ಬಾಲಕಿಯನ್ನು ಅಪಹರಿಸಿ, ಹತ್ಯೆಗೈದಿರುವ ಆರೋಪ ಮಾಡಿದ್ದರು. ಆದರೆ ತನಿಖೆ ವೇಳೆ ಮಾತ್ರ ಶಾಕಿಂಗ್ ರಹಸ್ಯ ಬಯಲಾಗಿತ್ತು.
ಪಲಾಮೂನ ಎಸ್‌ಪಿ ಸಂಜೀವ್ ಕುಮಾರ್ ಪ್ರಕರಣ ಸಂಬಂಧ ಮಾಹಿತಿ ನೀಡುತ್ತಾ, ಈ ಅಪ್ರಾಪ್ತ ಬಾಲಕಿಯನ್ನು ಆಕೆಯ ಪ್ರಿಯತಮ ಓಂ ಪ್ರಕಾಶ್ ಸಿಂಗ್ ಕೊಲೆಗೈದಿದ್ದಾನೆಂದು ತಿಳಿಸಿದ್ದಾರೆ. ಈ ಹತ್ಯೆಯನ್ನು ಓಂ ಪ್ರಕಾಶ್ ತನ್ನ ಗೆಳೆಯ ನೀರಜ್ ಕುಮಾರ್ ಜೊತೆಗೂಡಿ ನಡೆಸಿದ್ದಾನೆಂದೂ ತಿಳಿಸಿದ್ದಾರೆ.
Tap to resize

ಮರಣೋತ್ತರ ಪರೀಕ್ಷೆಯಲ್ಲಿ ಬಾಲಕಿ ಗರ್ಭಿಣಿಯಾಗಿದ್ದಳೆಂಬ ವಿಚಾರ ಬಯಲಾಗಿದೆ. ಹೀಗಾಗಿ ಆಕೆ ಓಂ ಪ್ರಕಾಶ್‌ಗೆ ತನ್ನನ್ನು ಮದುವೆಯಾಗುವಂತೆ ಒತ್ತಾಯಿಸಲಾರಂಭಿಸಿದ್ದಾಳೆ. ಇನ್ನು ಇಬ್ಬರೂ ಅಬಾರ್ಷನ್ ಮಾಡಿಸಲೂ ಯೋಜನೆ ರೂಪಿಸಿದ್ದರು. ಆದರೆ ಇದಕ್ಕೆ ಹತ್ತು ಸಾವಿರ ರೂಪಾಯಿ ಬೇಕಿತ್ತು.
ಹಣ ಹೊಂದಿಸಲಾಗದಓಂ ಪ್ರಕಾಶ್ ಬಾಲಕಿಯನ್ನು ಸಾಯಿಸಲು ಪ್ಲಾನ್ ಮಾಡಿದ್ದ. ತನ್ನ ಯೋಜನೆಯನ್ವಯ ಫೆಬ್ರವರಿ 21 ರಂದು ಹಳ್ಳಿಯ ಶಾಲೆ ಬಳಿ ತನ್ನನ್ನು ಭೇಟಿಯಾಗಲು ಆತ ಬಾಲಕಿಗೆ ತಿಳಿಸಿದ್ದ. ಇದರಂತೆ ಬಾಲಕಿಯೂ ಅಲ್ಲಿಗೆ ತಲುಪಿದ್ದಳು. ಆಕೆಯನ್ನು ಸಮಾಧಾನಪಡಿಸುವ ನೆಪದಿಂದ ಅಪ್ಪಿಕೊಂಡು, ಮುದ್ದಾಡಿದ್ದ. ಬಳಿಕ ನೋಡ ನೋಡುತ್ತಿದ್ದಂತೆಯೇ ಆಕೆಯ ಕತ್ತು ಕೊಯ್ದಿದ್ದಾನೆ.

Latest Videos

click me!