15 ವರ್ಷದ ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ್ದ 25 ವರ್ಷದ ಶಿಕ್ಷಕನನ್ನು ಜೈಲಿಗಟ್ಟಲಾಗಿದೆ.
ಇಬ್ಬರ ನಡುವೆ ಪ್ರೀತಿ ಇತ್ತೆಂದು ವಕೀಲ ವಾದಿಸಿದರೂ ವಿದ್ಯಾರ್ಥಿನಿ ಅಪ್ರಾಪ್ತಳಾಗಿದ್ದುದರಿಂದ ಶಿಕ್ಷಕನನ್ನು ಜೈಲಿಗಟ್ಟಲಾಗಿದೆ.
ಈ ಪ್ರಕರಣ 2014 ರಲ್ಲಿ ಇಂಗ್ಲೆಂಡ್‌ನ ಆಕ್ಸ್‌ಫರ್ಡ್‌ಶೈರ್‌ನ ವಾಲಿಂಗ್‌ಫೋರ್ಡ್‌ನಲ್ಲಿ ನಡೆದಿದ್ದಾಗಿದೆ.
ತನ್ನ ಮಿಲಿಟರಿ ತರಬೇತಿಯ ಭಾಗವಾಗಿ ಪ್ರವಾಸದ ಸಮಯದಲ್ಲಿ ಶಿಕ್ಷಕನೊಂದಿಗೆ ನಿಕಟ ಸಂಬಂಧ ಹೊಂದಿದ್ದೆ ಎಂದು 22 ವರ್ಷದ ವಿದ್ಯಾರ್ಥಿನಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ತಾನು ಮುಂಜಾನೆ ತರಬೇತಿಗಾಗಿ ಬಂದಾಗ ದೈಹಿಕ ಅನ್ಯೋನ್ಯತೆ ಬೆಳೆದಿದೆ. ಬಳಿಕ ರಜಾದಿನಗಳಲ್ಲಿ, ಶಿಕ್ಷಕರ ಸ್ನೇಹಿತನ ಮನೆಗೆ ಹೋಗಿ ಮೊದಲ ಬಾರಿಗೆ ಲೈಂಗಿಕ ಸಂಬಂಧ ಬೆಳೆಸಿದ್ದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಬಳಿಕ ಶಿಕ್ಷಕ ಹಾಗೂ ವಿದ್ಯಾರ್ಥಿನಿ ನಡುವಿನ ಈ ಸಂಬಂಧ ಮುಂದುವರೆದಿದೆ ಎನ್ನಲಾಗಿದೆ.
ಇನ್ನು ವಿದ್ಯಾರ್ಥಿನಿ ಅಲ್ಲಿಂದ ಬೇರೆಡೆ ತೆರಳಲು ಮುಂದಾದಾಗ ಶಿಕ್ಷಕ ತನ್ನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ ಎಂದೂ ಆಕೆ ತಿಳಿಸಿದ್ದಾಳೆ.
ಶಿಕ್ಷಕರ ಭಾವನಾತ್ಮಕ ಸಮಸ್ಯೆಗಳು ಮತ್ತು ವೈಯಕ್ತಿಕ ಒತ್ತಡ ವಿದ್ಯಾರ್ಥಿನಿಯ ಜೀವನದ ಮೇಲೆ ಒತ್ತಡವನ್ನುಂಟುಮಾಡುತ್ತವೆ ಎಂದು ತಿಳಿಸಲಾಗಿದೆ.