ಪಣಜಿ(ನ. 05) ಈ ಪೂನಂ ಪಾಂಡೆ ಅವತಾರಗಳಿಗೆ ಕೊನೆಯೇ ಇಲ್ಲ... ಒಮ್ಮೆ ಗಂಡನ ಮೇಲೆ ಕೇಸ್ ಹಾಕ್ತಾರೆ.. ಅದಾದ ಮೇಲೆ ನಾನು ನೀನು ಜೋಡಿ ಅಂತಾರೆ. ಗೋವಾದಲ್ಲಿ ನೆಲೆಯೂರಿರುವ ಪೂನಂ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದಾರೆ. ಗೋವಾ ಸರ್ಕಾರಕ್ಕೆ ಸೇರಿದ ಪ್ರದೇಶದಲ್ಲಿ ಬೆತ್ತಲೆ ಪೋಟೋ ಶೂಟ್ ಮಾಡಿಸಿಕೊಳ್ಳುತ್ತಿದ್ದ ಪೂನಂ ಪಾಂಡೆ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಅತಿಕ್ರಮಣ ಪ್ರದೇಶವೂ ಅಲ್ಲದೇ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪ ಪೂನಂ ಮೇಲೆ ಇದೆ. ಗೋವಾದ ಕೆನಕೋನಾ ಟೌನ್ ನಲ್ಲಿನ ಸರ್ಕಾರಿ ಜಾಗದಲ್ಲಿ ಪೂನಂ ಬೆತ್ತಲೆ ಲೋಕ ತೆರೆಯುವ ಯತ್ನ ಮಾಡುತ್ತಿದ್ದರು. ಕೆನಕೋನಾದ ನಾಗರಿಕರು ಈ ಬಗ್ಗೆ ದೂರು ನೀಡಿದ್ದು ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಪೂನಂ ಪಾಂಡೆಯನ್ನು ರಕ್ಷಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಸಹ ಸ್ಥಳೀಯರು ಆಗ್ರಹಿಸಿದ್ದರು. ಪೂನಂ ಪಾಂಡೆ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ನಲ್ಲಿ ಬೆತ್ತಲೆ ವಿಡಿಯೋ ಶೇರ್ ಮಾಡಿಕೊಲ್ಳುವುದಕ್ಕೆ ಹೆಸರುವಾಸಿ ಗೋವಾ ತೀರದಲ್ಲಿ ಪೂನಂ ಬೆತ್ತಲೆ ಅವತಾರಕ್ಕೆ ಬ್ರೇಕ್ ಹಾಕಿದ ಪೊಲೀಸರು Actress Poonam Pandey Arrested by Goa Police After FIR For Shooting an Obscene Video in Beach