ಚೆನ್ನೈನ ನುಂಗಾಬಾಕಮ್ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ನಟ ಶ್ಯಾಮ್ ಜೂಜಾಟ ಆಯೋಜಿಸಿದ್ದು ಪೊಲೀಸರು ದಾಳಿ ಮಾಡಿದ್ದಾರೆ.
ಅಭಿನಯದ ಜತೆ ಸಿನಿಮಾ ನಿರ್ಮಾಣದಲ್ಲಿಯೂ ತೊಡಗಿಕೊಂಡಿದ್ದ ಶ್ಯಾಮ್ ಕನ್ನಡದ ತನನಂ ತನನಂ ಮತ್ತು ಸಂತು ಸ್ಟ್ರೇಟ್ ಫಾರ್ವಡ್ ಚಿತ್ರದಲ್ಲಿಯೂ ಶ್ಯಾಮ್ ನಟಿಸಿದ್ದರು.
ಜೂಜಾಟಕ್ಕೆ ಹಣದ ರೂಪದಲ್ಲಿ ಟೋಕನ್ ಬಳಸಿಕೊಳ್ಳಲಾಗುತ್ತಿತ್ತು.
ಕೊರೋನಾ ಲಾಕ್ ಡೌನ್ ನಂತರ ತಮಿಳುನಾಡಿನಲ್ಲಿ ಜೂಜಾಟ ಹೆಚ್ಚಿಕೊಂಡಿದೆ.
ಯುವಕನೊಬ್ಬ ಇಪ್ಪತ್ತು ಸಾವಿರ ಹಣ ಕಳೆದುಕೊಂಡು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದ.
ತಮಿಳುನಾಡಿನ ಮಧುರೈನ ಶ್ಯಾಮ್ ವಿದ್ಯಾಭ್ಯಾಸದ ಸಲುವಾಗಿ ಬೆಂಗಳೂರಿನಲ್ಲಿ ಇದ್ದರು. 2006ರಲ್ಲಿ ಕವಿತಾ ಲಂಕೇಶ್ ನಿರ್ದೇಶನ ಮಾಡಿದ್ದ 'ತನನಂ ತನನಂ' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಿದರು.
ಅರ್ಜುನ್ ಸರ್ಜಾ ಜೊತೆ 'ಗೇಮ್' ಹಾಗೂ ರಾಕಿಂಗ್ ಸ್ಟಾರ್ ಯಶ್ ಜೊತೆ 'ಸಂತು ಸ್ಟ್ರೇಟ್ ಫಾರ್ವರ್ಡ್' ಚಿತ್ರಗಳಲ್ಲೂ ಶ್ಯಾಮ್ ಕಾಣಿಸಿಕೊಂಡಿದ್ದರು.
ತೆಲುಗಿನ 'ಕಿಕ್' ಹಾಗೂ 'ರೇಸುಗುರ್ರಂ' ಶ್ಯಾಮ್ ಅವರಿಗೆ ಜನಪ್ರಿಯತೆ ತಂದುಕೊಟ್ಟ ಚಿತ್ರಗಳು. ಜೂಜಾಟ ವಿಚಾರ ಗಂಭೀರವಾಗಿ ಪರಿಗಣಿಸಿರುವ ನ್ಯಾಯಾಲಯ ಆನ್ ಲೈನ್ ಜೂಜಾಟದ ಗೇಮ್ ಗಳ ಮೇಲೆಯೂ ನಿಗಾ ವಹಿಸಲು ತಿಳಿಸಿದೆ.