ಒಬ್ಬ ಯುವತಿಯ ದೇಹಕ್ಕೆ ಒಂದು ಸಾವಿರ ರೂ.: ಫಾರ್ಮ್ ಹೌಸ್‌ನಲ್ಲಿ ನಡೆಯುತ್ತಿತ್ತು ಕೆಟ್ಟ ದಂಧೆ!
First Published | Jul 26, 2020, 5:24 PM ISTಕೊರೋನಾತಂಕ ಇತ್ತ ದೇಶವನ್ನೇ ಕಂಗೆಡಿಸಿದ್ದರೆ, ಅತ್ತ ಸೆಕ್ಸ್ ರಾಕೆಟ್ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಸದ್ಯ ತಾಜ್ ನಗರಿ ಎಂದೇ ಕರೆಯಲಾಗುವ ಆಗ್ರಾದಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ಸಿಂಕಂದರಾ ಪೊಲಿಸರು ಫಾರ್ಮ್‌ಹೌಸ್ ಮೇಲೆ ದಾಳಿ ನಡೆಸಿದ್ದು, ಅಡೆ ತಡೆ ಇಲ್ಲದೇ ನಡೆಯುತ್ತಿದ್ದ ಸೆಕ್ಸ್ ರಾಕೆಟ್‌ನ್ನು ಬಯಲುಗಿಳಿಸಿದೆ. ಫಾರ್ಮ್ ಹೌಸ್ ಮಾಲೀಕ ಹಾಗೂ ಮೂವರು ಯುವತಿಯರು ಸೇರಿ ಒಟ್ಟು ಹನ್ನೆರಡು ಮಂದಿಯನ್ನು ಬಂಧಿಸಲಾಗಿದ್ದು, ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ. ಪೊಲೀಸರ ಅನ್ವಯ ಒಂದರಿಂದ ಎರಡು ಸಾವಿರಕ್ಕೆ ಯುವತಿಯರ ದೇಹ ವ್ಯಾಪಾರ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.