ಅಕ್ರಮ ಮರಳುಗಾರಿಕೆ ಕುರಿತ ಮಾಹಿತಿ ಮೇರೆಗೆ ಬುಧವಾರ ನಸುಕಿನ ಜಾವ ಅಡ್ಯಾರ್ ಸಮೀಪದ ಕಾಲೇಜು ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು.
2.30ರ ಸುಮಾರಿಗೆ ಅಡ್ಯಾರ್ ನೇತ್ರಾವತಿ ನದಿ ಹಾಗೂ ಮರಳು ಧಕ್ಕೆ ಕಡೆಯಿಂದ ರಾಷ್ಟ್ರೀಯ ಹೆದ್ದಾರಿ-73 ಕಡೆಗೆ ಟಿಪ್ಪರ್ ಲಾರಿಯೊಂದು ಬರುತ್ತಿತ್ತು. ಈ ವೇಳೆ ವಾಹನ ನಿಲ್ಲಿಸುವಂತೆ ಸೂಚಿಸಿದ್ದ ಪೊಲೀಸರು.
ಈ ವೇಳೆಗೆ ಟಿಪ್ಪರ್ ಲಾರಿಯ ಹಿಂದಿನಿಂದ ಮುಂದೆ ಬಂದ ಆಲ್ಟೋ ಕಾರೊಂದರಲ್ಲಿ ಬಂದು ಲಾರಿ ನಿಲ್ಲಿಸದಂತೆ ಚಾಲಕನಿಗೆ ಸೂಚಿಸಿದ ದುಷ್ಕರ್ಮಿಗಳು. ಈ ವೇಳೆ ಪೊಲೀಸರು ತಡೆಯಲು ಬಂದಾಗ ಅವರ ಮೇಲೆಯೇ ವಾಹನ ಹತ್ತಿಸುವ ರೀತಿಯಲ್ಲಿ ವೇಗವಾಗಿ ವಾಹನ ಚಲಾಯಿಸಿಕೊಂಡು ಪರಾರಿಯಾದ ಖದೀಮರು.
ಈ ಸಂಬಂಧ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರ ಸಹಕಾರದೊಂದಿಗೆ ಟಿಪ್ಪರ್ ಲಾರಿ ಚಾಲಕ ಅಬ್ದುಲ್ ಇಸಾಕ್, ಆಲ್ಟೋ ಕಾರು ಚಾಲಕ ಮೊಯಿದ್ದೀನ್ ಅಪ್ಸರ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.