ಇಡಿ ವಿಚಾರಣೆಗೆ ಬಂದ ನೋರಾ.. 200 ಕೋಟಿ ರೂ. ಪ್ರಕರಣ ಕಂಡ್ರಾ!

Published : Oct 14, 2021, 09:42 PM IST

ನವದೆಹಲಿ(ಅ.14) ಸದಾ ಹಾಟ್ ಅವತಾರಗಳಿಂದಲೇ ಸದ್ದು ಮಾಡುವ ರೂಪದರ್ಶಿ(Modal), ಡ್ಯಾನ್ಸರ್, ನಟಿ(Bollywood Actress) ನೋರಾ ಫತೇಹಿ (Nora Fatehi) ಮೇಲೆ ಜಾರಿ ನಿರ್ದೇಶನಾಲಯದ (Enforcement Directorate)ಕಣ್ಣು ಬಿದ್ದಿದೆ. 

PREV
17
ಇಡಿ ವಿಚಾರಣೆಗೆ ಬಂದ ನೋರಾ.. 200 ಕೋಟಿ ರೂ. ಪ್ರಕರಣ ಕಂಡ್ರಾ!

ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ED) ಕ್ರಮ ಕೈಗೊಂಡಿದ್ದು ಬಾಲಿವುಡ್ ನಟಿ ನೋರಾ ಫತೇಹಿ ಅವರನ್ನು ವಿಚಾರಣೆಗೆ ಇಡಿ ಕಚೇರಿಗೆ ಕರೆಸಲಾಗಿದೆ. 

27

200 ಕೋಟಿ ರೂಪಾಯಿಗಳ ಹಣದ ವರ್ಗಾವಣೆ ಪ್ರಕರಣದಲ್ಲಿ ಈ ವಿಚಾರಣೆ ನಡೆಯುತ್ತಿದೆ. ಕಳೆದ ತಿಂಗಳು ಇದೇ ಪ್ರಕರಣದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್(Jacqueline Fernandez) ಅವರನ್ನು  ವಿಚಾರಣೆ ನಡೆಸಲಾಗಿತ್ತು.

37

ದೆಹಲಿಯ ಕಚೇರಿಯಲ್ಲಿ ನಾಲ್ಕು ಗಂಟೆಗಳ ಕಾಲ ವಿಚಾರಣೆ ನಡೆಸಿ ಅವರ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳಾದ  ಸುಕೇಶ್ ಚಂದ್ರಶೇಖರ್ ಗೆ  ಮತ್ತು ಆತನ ಹೆಂಡತಿ ಲೀನಾ ಪೌಲ್ ಅವರನ್ನು  ಇಡಿ ವಶಕ್ಕೆ ಪಡೆದುಕೊಂಡಿದೆ.

47

ಈ ಹಿಂದೆ, ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಪ್ರಕರಣದ ಸಾಕ್ಷಿಯಾಗಿ ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ನವದೆಹಲಿಯಲ್ಲಿ 6 ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. 

57

ಜೈಲಿನೊಳಗೆ ಕುಳಿತು ಸುಕೇಶ್ 200 ಕೋಟಿ ರೂಪಾಯಿ ಮೊತ್ತದ ವಸೂಲಿ ನಡೆಸಿದ್ದಾರೆ ಎಂಬ ಆರೋಪವಿದೆ.  ಸುಕೇಶ್ ಜೈಲಿನಿಂದ ಪ್ರಸಿದ್ಧ ಉದ್ಯಮಿಯ ಪತ್ನಿಯಿಂದ 50 ಕೋಟಿ ಸುಲಿಗೆಗೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವೂ ಇದೆ.

67

ಸುಖೇಶ್ ಮೇಲೆ 21  ಪ್ರಕರಣಗಳಿದ್ದು ದೆಹಲಿ ಜೈಲಿನಲ್ಲಿದ್ದಾನೆ. ಜೈಲಿನಲ್ಲಿಯೇ ಕುಳಿತುಕೊಂಡು ಹಣಕ್ಕೆ ಬೇಡಿಕೆ ಇಟ್ಟಿದ್ದು ಪ್ರಸಿದ್ಧ ವ್ಯಕ್ತಿಗಳ ಮೂಲಕ ಟ್ರಾನ್ಸ್ ಫರ್ ಮಾಡಿಸಿಕೊಂಡಿದ್ದಾನೆ ಎಂಬ ಆರೋಪ ಬಂದಿದೆ.

77

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುವ ನೋರಾ  ಅಭಿಮಾನಿಗಳ ಎದೆಯಲ್ಲಿ ಬಿಸಿ ಹೆಚ್ಚಿಸುವುದರಲ್ಲಿ ಎತ್ತಿದ ಕೈ. ಇತ್ತೀಚೆಗೆ ಅವರು ಕಾಣಿಸಿಕೊಂಡಿದ್ದ ಎರಡು ಅವತಾರಗಳು ವೈರಲ್ ಆಗಿದ್ದವು. 

click me!

Recommended Stories