ಪ್ರಿ ವೆಡ್ಡಿಂಗ್ ಪೋಟೋ ಶೂಟ್ ದುರಂತಕ್ಕೆ ಇದೆ ಕಾರಣ, ಎಚ್ಚರಿಕೆ ಕೊಟ್ಟ ಅವಘಡ!

First Published | Nov 11, 2020, 9:14 PM IST

ಮೈಸೂರು( ನ. 11)  ಈ ರೀತಿ ತಮ್ಮ ಬದುಕು ಕೊನೆಯಾಗುತ್ತದೆ ಎಂದು ಅವರು ಊಹಿಸಿ ಇರಲು ಸಾಧ್ಯವಿಲ್ಲ.  ಮಾಡಿಕೊಂಡ ಒಂದು ಸಣ್ಣ ಎಡವಟ್ಟು ಹೊಸ ಬದುಕಿಗೆ ಕಾಲಿಡಬೇಕಿದ್ದ ಜೋಡಿಯನ್ನೇ ಬಲಿಪಡೆದುಕೊಂಡಿದ್ದು ದುರ್ದೈವ.

ಕಾವೇರಿ ನದಿಯಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ವಧು-ವರ ನೀರು ಪಾಲಾಗಿದ್ದರು.
ಮುಡುಕುತೊರೆ ನಿಸರ್ಗಧಾಮ ರೆಸಾರ್ಟ್ ಬಳಿನಡೆದ ಅವಘಡ ಹಲವಾರು ಪ್ರಶ್ನೆಗಳನ್ನು ಎತ್ತಿತ್ತು.
Tap to resize

ಅವಘಡ ನಡೆಯಲು ಏನು ಕಾರಣ ಎಂಬುದುಈಗ ಬಹಿರಂಗವಾಗಿದೆ.
ಮೈಸೂರು ಜಿಲ್ಲೆ ಟಿ.ನರಸೀಪುರ ತಾಲೂಕಿನ ಮುಡುಕುತೊರೆಯಲ್ಲಿಅವಘಡ ನಡೆದಿತ್ತು.
ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಪೋಟೋ ಶೂಟ್ ಮಾಡಲಾಗುತ್ತಿತ್ತು.ಈ ವೇಳೆ ಆಯತಪ್ಪಿ ಹುಡುಗಿ ಆಯತಪ್ಪಿ ನದಿಗೆ ಬಿದ್ದು ಚಂದ್ರು (28),ಶಶಿಕಲಾ (20)ನೀರುಪಾಲಾಗಿದ್ದರು.
ವಧು ಹೈ ಹೀಲ್ಡ್ ಧರಿಸಿದ್ದು ತೆಪ್ಪ ಏರುವಾಗಲೂ ಅದನ್ನು ಹಾಕಿಕೊಂಡಿದ್ದರು.ಹೈಹೀಲ್ಡ್ ಕಾರಣಕ್ಕೆ ಬ್ಯಾಲೆನ್ಸ್ ತಪ್ಪಿದೆ. ಯುವತಿ ನೀರಿಗೆ ಬಿದ್ದಿದ್ದಾಳೆ.
ಮೈಸೂರು ಪೊಲೀಸರು ತನಿಖೆ ಆರಂಭಿಸಿದ್ದು ಅವಘಡಕ್ಕೆ ಇದೆ ಕಾರಣ ಎಂಬುದು ಗೊತ್ತಾಗಿದೆ.
ನಿಜಕ್ಕೂ ಇದೊಂದು ಎಚ್ಚರಿಕೆ ಘಂಟೆಯಾಗಿದ್ದು ಎಲ್ಲರೂ ಪಾಠ ಕಲಿತುಕೊಳ್ಳಬೇಕಾಗಿದೆ.
ನದಿ ನೋಡಿ ಪೋಟೋ ತೆಗೆಸಿಕೊಳ್ಳಲು ಬಯಸಿದ ಜೋಡಿ ದುರಂತ ಅಂತ್ಯ ಕಂಡಿದ್ದಾರೆ.
ಹೈ ಹೀಲ್ಡ್ ಚಪ್ಪಲಿ ಜತೆ ಭಾರದ ಡ್ರೆಸ್ ಧರಿಸಿದ್ದು ಜೋಡಿಗೆ ಮಾರಕವಾಗಿದೆ.
ಹೀಲ್ಡ್ ಧರಿಸಿದ್ದ ವಧು ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೆ ನದಿಗೆ ಬಿದ್ದಿದ್ದಾರೆ.
ಕೂಡಲೆ ಭಾವಿ ಪತ್ನಿಯನ್ನು ರಕ್ಷಣೆ ಮಾಡಲು ಯುವಕ ಸಹ ನೀರಿಗೆ ಧುಮುಕಿದ್ದಾನೆ.
ದುರದೃಷ್ಟಾವಶಾತ್ ಇಬ್ಬರಿಗೂ ಈಜು ಬರುತ್ತಿರಲಿಲ್ಲ.
ತೆಪ್ಪ ನಡೆಸುವವರ ಮೇಲೆ ಕಣ್ಣಿಡಲಾಗಿದ್ದು ಇಂಥ ಘಟನೆಗಳಿಗೆ ಹೇಗೆ ಅವಕಾಶ ಸಿಕ್ಕಿದೆಯೋ ಗೊತ್ತಿಲ್ಲ ಎಂದು ಮೈಸೂರು ಪೊಲೀಸರು ಹೇಳಿದ್ದಾರೆ.
ಪರಿಸರ ನೋಡಿ ನದಿಯನ್ನು ಆಸ್ವಾದಿಸಿ ಹೊಸ ಜೀವನದ ಕಡೆ ಹೆಜ್ಜೆ ಹಾಕಿದ್ದ ಕುಟುಂಬದಲ್ಲೀಗ ಸೂತಕದ ಛಾಯೆ.

Latest Videos

click me!