Renukaswamy Case: ಕಮರಿಹೋಯ್ತಾ ಪವಿತ್ರಾ ಗೌಡ ಮತ್ತೊಮ್ಮೆ ಕಂಡ ಈ ಹೊಸ ಕನಸು?

Published : Aug 15, 2025, 01:40 PM IST

ಜೈಲಿನಿಂದ ಹೊರಕ್ಕೆ ಬಂದ ಮೇಲೆ ಎಂಟು ತಿಂಗಳಿನಿಂದ ಮುಚ್ಚಿದ್ದ ತಮ್ಮ ರೆಡ್​ ಕಾರ್ಪೆಟ್​ ಅಂಗಡಿಯನ್ನು ರೀ ಓಪನ್​ ಮಾಡಿಸಿದ್ದರು ಪವಿತ್ರಾ ಗೌಡ. ಆದರೆ ಈಗ ಮತ್ತೆ ಜೈಲು ಪಾಲಾಗಿದ್ದಾರೆ. ಅದರ ಗತಿಯೇನು? 

PREV
17
ಕೋರ್ಟ್​ ಕೈಯಲ್ಲಿ ಎಲ್ಲರ ಭವಿಷ್ಯ

ರೇಣುಕಾ ಸ್ವಾಮಿ ಕೊ*ಲೆ ಕೇಸ್​ನಲ್ಲಿ ನಿನ್ನೆಯಷ್ಟೇ ನಟ ದರ್ಶನ್​, ಅವರ ಸ್ನೇಹಿತೆ ಪವಿತ್ರಾ ಗೌಡ ಸೇರಿದಂತೆ ಇನ್ನಿತರರ ಜಾಮೀನು ರದ್ದಾಗಿರುವ ಕಾರಣ, ಎಲ್ಲರೂ ಸದ್ಯ ಜೈಲಿನಲ್ಲಿ ಇದ್ದಾರೆ. ಕೇಸ್​ ವಿಚಾರಣೆ ಮುಂದುವರೆದರೆ ಸಾಕ್ಷ್ಯಾಧಾರಗಳ ಮೇಲೆ ಶಿಕ್ಷೆ ಆಗತ್ತಾ, ಬಿಡುಗಡೆಯಾಗುತ್ತಾ ಎನ್ನುವುದು ಸದ್ಯ ಕೋರ್ಟ್​ ಕೈಯಲ್ಲಿದೆ.

27
ಶಿಕ್ಷೆಯ ಬಗ್ಗೆ ಚರ್ಚೆ

ಸಂಪೂರ್ಣ ಸಾಕ್ಷ್ಯಾಧಾರಗಳು ಇವರ ವಿರುದ್ಧವಾಗಿಯೇ ಇದ್ದರೆ, ಜೀವಾವಧಿ ಶಿಕ್ಷೆಯೂ ಆಗಬಹುದು ಎನ್ನುತ್ತಿದ್ದಾರೆ ವಕೀಲರು. ಅದೇ ಇನ್ನೊಂದೆಡೆ ಇವರೇ ಕೊ*ಲೆ ಮಾಡಿದ್ದಾರೆ ಎನ್ನುವುದಕ್ಕೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್​ ವಿಫಲವಾದರೆ ಕಡಿಮೆ ಶಿಕ್ಷೆಯಾಗಬಹುದು ಇಲ್ಲವೇ ಸಂಪೂರ್ಣವಾಗಿ ಆರೋಪಮುಕ್ತಗೊಂಡು ಬಿಡುಗೆಯಾಗಬಹುದು. ಒಟ್ಟಿನಲ್ಲಿ ಇವರ ಭವಿಷ್ಯವೇನು ಎನ್ನುವುದನ್ನು ಕೋರ್ಟ್​ ನಿರ್ಧರಿಸಬೇಕಿದೆ.

37
ಫ್ಯಾಷನ್ ಡಿಸೈನ್ ಶೋರೂಂ ರೆಡ್ ಕಾರ್ಪೆಟ್​ ಸ್ಟುಡಿಯೋ

ಅದರ ನಡುವೆಯೇ, ಇದೀಗ ಪವಿತ್ರಾ ಗೌಡ ಅವರ ರೆಡ್​ ಕಾರ್ಪೆಟ್​ ಅಂಗಡಿ ಮತ್ತೆ ಮುನ್ನೆಲೆಗೆ ಬಂದಿದೆ. ಪವಿತ್ರಾ ಗೌಡ (Actress Pavithra Gowda) ಅವರ ಒಡೆತನದ ಫ್ಯಾಷನ್ ಡಿಸೈನ್ ಶೋರೂಂ ರೆಡ್ ಕಾರ್ಪೆಟ್​ ಸ್ಟುಡಿಯೋ (Red Carpet Studio 777) ಕಥೆ ಏನು ಎನ್ನುವ ಚರ್ಚೆ ಶುರುವಾಗಿದೆ. ಎರಡೂವರೆ ವರ್ಷಗಳ ಹಿಂದೆ ಆರಂಭ ಆಗಿದ್ದ ರೆಡ್ ಕಾರ್ಪೆಟ್ ಸ್ಟುಡಿಯೋ, ದರ್ಶನ್ ಮನೆಯಿಂದ ಎರಡು ಕೀ. ಮೀ. ದೂರದಲ್ಲಿದೆ. ಇದೊಂದು ಬಟ್ಟೆ ಅಂಗಡಿ, ಆದರೆ ಹೈ ಫ್ಯಾಷನ್‌ ಬಟ್ಟೆಗಳು ಇಲ್ಲಿ ದೊರೆಯುತ್ತವೆ.

47
ದರ್ಶನ್ ವಾಸವಿರುವ ಮನೆ ಸಮೀಪ ಅಂಗಡಿ

ಪವಿತ್ರಾ ಗೌಡ ನಟ ದರ್ಶನ್ ವಾಸವಿರುವ ಆರ್‌ಆರ್‌ ನಗರದಲ್ಲೇ ಬಟ್ಟೆ ಅಂಗಡಿ ತೆರೆದಿದ್ದಾರೆ. ಅಷ್ಟಕ್ಕೂ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಜೊತೆ ಪೈಪೋಟಿಗೆ ಬಿದ್ದು ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆದಿದ್ರು ಪವಿತ್ರಾ ಗೌಡ ಎನ್ನುವುದು ಅವರ ಸಮೀಪದ ಮೂಲಗಳು ಹೇಳಿವೆ.

57
ಪವಿತ್ರಾ ಗೌಡರಿಂದ ಮಳಿಗೆ ಓಪನ್​

ಕಾರಣ, 2021 ರಲ್ಲಿ 'ಮೈ ಫ್ರೆಶ್ ಬಾಸ್ಕೆಟ್' ಅನ್ನೋ ಆನ್ ಲೈನ್ ಶಾಪಿಂಗ್ ಮಾರುಕಟ್ಟೆ ತೆರೆದಿದ್ದರು ವಿಜಯಲಕ್ಷ್ಮಿ. ಇದರ ಮೂಲಕ ಗ್ರಾಹಕರಿಗೆ ನೇರವಾಗಿ ಫ್ರೆಶ್ ತರಕಾರಿಗಳನ್ನ ಸೇಲ್ ಮಾಡೋ ಬ್ಯುಸಿನೆಸ್ ಶುರು ಮಾಡಿದ್ರು. ಇದನ್ನ ನೋಡಿ ಮರು ವರ್ಷವೇ ರೆಡ್ ಕಾರ್ಪೆಟ್ ಸ್ಟುಡಿಯೋ ತೆರೆದಿದ್ದ ಪವಿತ್ರಾ ಗೌಡ. ಹೀಗಾಗಿ, ದರ್ಶನ್ ಪತ್ನಿಗೆ ತಾನೇನೂ ಕಮ್ಮಿ ಇಲ್ಲ ಎಂದು ತೋರಿಸಲು ಪವಿತ್ರಾ ಗೌಡ ಹೀಗೆ ಮಾಡಿದ್ದಾರೆ ಎಂದೇ ಸೋಷಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗಿತ್ತು.  ಇದರ ಸತ್ಯಾಸತ್ಯತೆ ಮಾತ್ರ ತಿಳಿದಿಲ್ಲ. 

67
ಭರ್ಜರಿ ರೀ ಓಪನ್​ ಆಗಿತ್ತು ಮಳಿಗೆ

ಈ ಹಿಂದೆ ಪವಿತ್ರಾ ಅವರು ಜೈಲುಪಾಲಾದ ಮೇಲೆ ಅಂಗಡಿ ಕೆಲ ಕಾಲ ನಡೆದು, ಅದನ್ನು ಮುಚ್ಚಲಾಗಿತ್ತು. ಕೊನೆಗೆ ಪವಿತ್ರಾ ಗೌಡ ಅವರು ಜಾಮೀನಿನ ಮೇಲೆ ಹೊರಗಡೆ ಬಂದಾಗ, ಎಂಟು ತಿಂಗಳಿಂದ ಮುಚ್ಚಿದ್ದ ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋವನ್ನು ರೀಲಾಂಚ್ ಮಾಡಿದ್ದರು. ಆನ್​ಲೈನ್​ ಮೂಲಕವೂ ವಿತರಣೆ ಶುರು ಮಾಡಿ, ಸ್ಟುಡಿಯೋಗೆ ಮರುಚಾಲನೆ ನೀಡಿದ್ದರು.

77
ಭರ್ಜರಿ ರೀ ಓಪನ್​ ಮಾಡಿದ್ದ ಪವಿತ್ರಾ ಗೌಡ

ಸ್ಟುಡಿಯೋಗೆ ಪವಿತ್ರಾ ಗೌಡ ರೇಂಜ್ ರೋವರ್ ಕಾರ್‌ನಲ್ಲಿ ಬಂದು ಗಮನ ಸೆಳೆದು ಅದನ್ನು ಪುನರಾರಂಭಿಸಿದ್ದರು. ಸ್ಟುಡಿಯೋದಲ್ಲಿ ಗಣಹೋಮ, ಕಾರ್ಯಸಿದ್ಧಿ ಹೋಮ ಮಾಡಿಸಿದ್ದರು. ಆದರೆ ಈಗ ಮತ್ತೆ ಜೈಲು ಪಾಲಾಗಿರೋ ಕಾರಣ, ಇದರ ಭವಿಷ್ಯ ಏನು ಎನ್ನುವುದು ಗೊತ್ತಿಲ್ಲ!

Read more Photos on
click me!

Recommended Stories