ಕೋಲಾರದಲ್ಲಿ ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದು, ಪತಿಯ ಮನೆಯ ಮುಂದೆ ಶವವನ್ನಿಟ್ಟು ಮಹಿಳೆಯರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ. ಮಗಳ ಅಂತ್ಯ ಸಂಸ್ಕಾರವನ್ನು ಪತಿಯ ಮನೆಯ ಮುಂದೆಯೇ ಮಾಡಲು ಪೋಷಕರು ಪ್ರಯತ್ನಿಸಿದರು.
ಪತಿಯ ಮನೆಯವರ ವರದಕ್ಷಿಣೆ ಕಿರುಕುಳದಿಂದಾಗಿ ಕೋಲಾರದಲ್ಲಿ ನವವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದರ ಬೆನ್ನಲ್ಲಿಯೇ ಪತಿಯ ಮನೆಯ ಮುಂದೆ ಶವವನ್ನಿಟ್ಟು ಮಹಿಳೆಯರ ಪೋಷಕರು ಪ್ರತಿಭಟನೆ ನಡೆಸಿದ್ದಾರೆ.
211
ಕೋಲಾರ ತಾಲೂಕಿನ ತೂರಾಂಡಹಳ್ಳಿ ಗ್ರಾಮದಲ್ಲಿರುವ ಪತಿ ಉಲ್ಲಾಸ್ ಗೌಡ ಮನೆಯ ಎದುರು ಪತ್ನಿ ಮಾನಸ ಗೌಡ ಅವರ ಶವವನ್ನಿಟ್ಟು ಪ್ರತಿಭಟನೆ ಮಾಡಲಾಗಿದೆ.
311
24 ವರ್ಷದ ಮಾನಸ ಗೌಡ ಹಾಗೂ ತೂರಾಂಡಹಳ್ಳಿ ಗ್ರಾಮದ ಉಲ್ಲಾಸ್ ಗೌಡ ನಡುವೆ ಕಳೆದ ವರ್ಷ ಅದ್ದೂರಿಯಾಗಿ ಮದುವೆ ನಡೆದಿದ್ದು, ಮದುವೆಯ ಆಕರ್ಷಕ ಫೋಟೋಶೂಟ್ ಕೂಡ ಮಾಡಿಸಲಾಗಿತ್ತು.
411
ಆದರೆ, ಮದುವೆಯಾಗಿ ವರ್ಷ ಕಳೆಯುವಷ್ಟರಲ್ಲಿಯೇ ಉಲ್ಲಾಸ್ ಗೌಡ ಕುಟುಂಬದಿಂದ ವರದಕ್ಷಿಣೆ ಕಿರುಕುಳ ಶುರುವಾಗಿತ್ತು. ಇದರಿಂದಾಗಿ ಮನನೊಂದಿದ್ದ ಮಾನಸ ತವರು ಮನೆಗೆ ಬಂದಿದ್ದಳು.
511
ಶನಿವಾರ ರಾತ್ರಿ ಡೆತ್ ನೋಟ್ ಬರೆದಿಟ್ಟು ಮಾನಸ ಗೌಡ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಈ ವೇಳೆ ಪತಿ ಉಲ್ಲಾಸ್ ಗೌಡ ಮತ್ತು ಕುಟುಂಬಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ.
611
ಇನ್ನೊಂದೆಡೆ ಸಿಟ್ಟಿಗೆದ್ದಿದ್ದ ಮಾನಸ ಗೌಡ ಅವರ ಕುಟುಂಬ ಮಗಳ ಅಂತ್ಯ ಸಂಸ್ಕಾರವನ್ನು ಪತಿಯ ಮನೆಯ ಮುಂದೆಯೇ ಮಾಡಲು ಎಲ್ಲಾ ರೀತಿಯ ಸಿದ್ದತೆ ಮಾಡಿಕೊಂಡಿದ್ದರು.
711
ಆದರೆ, ಮನೆ ಮುಂದೆ ಅಂತ್ಯಸಂಸ್ಕಾರ ಮಾಡಲು ಪೊಲೀಸರು ಅಡ್ಡಿ ಮಾಡಿದ್ದಾರೆ.ಈ ವೇಳೆ ಪೋಷಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆ.
811
ಮಗಳ ಸಾವಿಗೆ ನ್ಯಾಯ ಒದಗಿಸುವಂತೆ ಪೋಷಕರು ಒತ್ತಾಯ ಮಾಡಿದ್ದಾರೆ. ವರದಕ್ಷಿಣೆ ಕಿರುಕುಳ ನೀಡಿ ಮಗಳ ಸಾವಿಗೆ ಉಲ್ಲಾಸ್ ಗೌಡ ಕುಟುಂಬ ಕಾರಣವಾಗಿದೆ ಎಂದು ದೂರಿದ್ದಾರೆ. ಇನ್ನು ಉಲ್ಲಾಸ್ ಗೌಡ ಅವರ ಕುಟುಂಬ ಸದ್ಯ ಬೆಂಗಳೂರಿನಲ್ಲಿ ವಾಸವಾಗಿದೆ.
911
ವರನ ಮನೆಯ ಬಾಗಿಲಲ್ಲೇ ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದ ಮೃತ ಮಾನಸ ಪೋಷಕರಿಗೆ ಸಮಾಧಾನ ಮಾಡುವಲ್ಲಿ ಪೊಲೀಸರು ಕೊನೆಗೆ ಯಶ ಕಂಡಿದ್ಬದಾರೆ. ಬಳಿಕ ಮನೆಯ ಕೈತೋಟದಲ್ಲಿಯೇ ಅಂತ್ಯ ಸಂಸ್ಕಾರ ನೆರವೇರಿದೆ.
1011
ಪೊಲೀಸರ ಸಮ್ಮುಖದಲ್ಲೇ ಮನೆಯ ಕೈತೋಟದಲ್ಲಿ ಗುಂಡಿ ತೋಡಿದ ಪ್ರತಿಭಟನಾಕಾರರು ಅಲ್ಲಿಯೇ ಮಾನಸ ಮೃತದೇಹವನ್ನು ಸಮಾಧಿ ಮಾಡಿದ್ದಾರೆ.
1111
ನಿನ್ನೆ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದ ಮಾನಸ. ಇಂದು ಮುಂಜಾನೆಯಿಂದ ಉಲ್ಲಾಸಗೌಡ ಮನೆ ಎದುರು ಶವವಿಟ್ಟು ಮನೆ ಎದುರು ಅಂತ್ಯಸಂಸ್ಕಾರಕ್ಕೆ ಮಾನಸ ಪೋಷಕರು ಮುಂದಾಗಿದ್ದರು.