ಮದುವೆಯಾದ ಗೆಳತಿಗೆ ಸಹಕರಿಸುವಂತೆ ಕಿರುಕುಳ ಕೊಟ್ಟ ಕ್ಲಾಸ್‌ಮೇಟ್ಸ್; ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣು

First Published | Aug 2, 2024, 10:11 AM IST

ಬೆಂಗಳೂರು (ಆ.02): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗೃಹಿಣಿಯೊಬ್ಬಳು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದುರ್ಘಟನೆ ನಡೆದಿದೆ. ಮೃತ ಗೃಹಿಣಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ ಇಬ್ಬರು ಯುವಕರ ಹೆಸರನ್ನು ಬರೆದಿಟ್ಟಿದ್ದಾರೆ.

ಪ್ರತಿನಿತ್ಯ ಗಂಡ ಕೆಲಸಕ್ಕೆ ಹೋದರೆ ಸಂಜೆಯೇ ಮನೆಗೆ ಬರುತ್ತಿದ್ದನು. ಆದರೆ, ಗಂಡ ಡ್ಯೂಟಿಗೆ ಹೋದ ನಂತರ ಮನೆಯಲ್ಲಿದ್ದ ಪತ್ನಿ ನೇಣಿಗೆ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾಳೆ. ಮೃತ ಗೃಹಿಣಿತನ್ನು ಮಮತಾ (31) ಎಂದು ಗುರುತಿಸಲಾಗಿದೆ. ಬಾಗಲಗುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಸಿಡೇದಹಳ್ಳಿಯ ಮನೆಯಲ್ಲಿ ಈ ಘಟನೆ ನಡೆದಿದೆ.

ಇನ್ನು ಡ್ಯೂಟಿಗೆ ಹೋದ ಗಂಡ ಸಂಜೆ ಮನೆಗೆ ಬಂದಾಗ ಎಷ್ಟೇ ಬಾಗಿಲು ಬಡಿದರೂ ಹೆಂಡತಿ ಬಂದು ಬಾಗಿಲು ತೆರೆಯಲಿಲ್ಲ. ನಂತರ, ತನ್ನ ಬಳಿ ಇದ್ದ ಮತ್ತೊಂದು ಕೀ ಮೂಲಕ ಬಾಗಿಲು ತೆಗೆದು ಒಳಗೆ ಹೋಗಿ ನೋಡಿದರೆ ಅಲ್ಲಿ ಹೆಂಡತಿ ಕಿಟಕಿಗೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

Tap to resize

ಈ ಬಗ್ಗೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಈ ಘಟನೆ ಬುಧವಾರ ಸಂಜೆ ವೇಳೆ ನಡೆದಿದ್ದು, ಬಾಗಲಗುಂಟೆ ಠಾಣೆ ಪೊಲೀಸರು ಬಂದು ಸ್ಥಳ ಪರಿಶೀಲನೆ ಮಾಡಿದ್ದಾರೆ. ನಂತರ ಪ್ರಾಥಮಿಕ ಸಾಕ್ಷ್ಯಗಳನ್ನು ಹಾಗೂ ಮಾಹಿತಿಗಳನ್ನು ಕಲೆ ಹಾಕಿದ ಪೊಲೀಸರು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ಮಾಡಿಸಿ ಮೃತದೇಹವನ್ನು ಪೊಲೀಸರು ಕುಟುಂಬ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ.

ಇನ್ನು ಗೃಹಿಣಿ ಮೃತದೇಹ ಪತ್ತೆಯಾದ ಸ್ಥಳದಲ್ಲಿ ಪೊಲೀಸರಿಗೆ ಡೆತ್ ನೋಟ್ ಪತ್ತೆಯಾಗಿದೆ. ಅದನ್ನು ಪರಿಶೀಲನೆ ಮಾಡಿದ ಪೊಲೀಸರಿಗೆ ಅದರಲ್ಲಿ ಇಬ್ಬರು ಯುವಕರ ಹೆಸರನ್ನು ಉಲ್ಲೇಖ ಮಾಡಿರುವುದು ತಿಳಿದುಬಂದಿದೆ. ಆಕೆಯ ಸ್ಕೂಲ್ ಕ್ಲಾಸ್ ಮೇಟ್ಸ್ ಗಳು ಅಶ್ಲೀಲ ಮೆಸೇಜಸ್ ಮಾಡಿರೋ ಆರೋಪ ಕೇಳಿಬಂದಿದೆ. ಅಶೋಕ್ ಹಾಗೂ ಗಣೇಶ್ ಎಂಬ ಯುವಕರ ವಿರುದ್ದ ಡೆತ್ ನೋಟ್ ಬರೆದ ಮೃತ ಮಮತಾ.
 

ಡೆತ್‌ನೋಟ್‌ನಲ್ಲಿ ಏನಿದೆ?
ನನ್ನ ಬಗ್ಗೆ ಕೆಟ್ಟದ್ದಾಗಿ ಏನಾದ್ರು ಬಂದರೆ ನೀವೆ ಹೊಣೆ ಎಂದು ಇಬ್ಬರು ಯುವಕರಾದ ಗಣೇಶ್ ಹಾಗೂ ಅಶೋಕ್ ಹೆಸರು ಬರೆದಿಟ್ಟು ಮಮತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೀನು ನನ್ನ ಜೊತೆ ಸಹಕರಿಸು, ನೈಟ್ ಔಟ್ ಹೋಗೋಣವೆಂದು ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದರು. ನೀನು ನೈಟ್ ಔಟ್ ಬರದೇ ಇದ್ರೆ, ನಿನ್ನನ್ನು ಸುಮ್ಮನೇ ಬಿಡೋಲ್ಲ. ನಿನ್ನ ಸಂಸಾರವನ್ನು ಹಾಳು‌ ಮಾಡುತ್ತೇವೆಂದು ಅಶ್ಲೀಲ ಸಂದೇಶಗಳು ರವಾನೆ ಮಾಡಿದ್ದರು. ಇದನ್ನೆಲ್ಲ ಡೆತ್‌ನೋಟ್‌ನಲ್ಲಿ ಉಲ್ಲೇಖ ಮಾಡಿದ್ದಾರೆ.

ಇನ್ನು ಈ ರೀತಿ ಅಶ್ಲೀಲ ಮೆಸೇಜ್ ಮಾಡಿವರು ಮೃತ ಮಮತಾಳ ಸ್ಕೂಲ್‌ಮೆಟ್ಸ್ ಆಗಿದ್ದಾರೆ. ಇನ್ನು ಆರೋಪಿಗಳ ಕಿರುಕುಳಕ್ಕೆ ಹೆದರಿದ ಮಮತಾ ಮನೆಯ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮಮತಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಆರೋಪಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಸದ್ಯ ಬಾಗಲುಗುಂಟೆ ಪೊಲೀಸ್ ಠಾಣೆಯಲ್ಲಿ ಮೃತ ಮಮತಾ ಪತಿ ಲೋಕೇಶ್ ದೂರು ನೀಡಿದ್ದಾರೆ. ಪೊಲೀಸರು ಡೆತ್ ನೋಟ್ ಆಧರಿಸಿ ಎಫ್.ಐ.ಆರ್ ದಾಖಲು ಮಾಡಿಕೊಂಡಿದ್ದಾರೆ.

Latest Videos

click me!