ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಘಾಟು ಕಳೆದ ಒಂದು ವಾರದಿಂದ ಚರ್ಚೆಯಾಗುತ್ತಿರುವ ವಿಚಾರ.
ನಟ, ನಿರ್ದೇಶಕ ಇಂದ್ರಜಿತ್ ಮಾಡಿದ ಆರೋಪಗಳ ನಂತರ ಒಂದೊಂದೆ ವಿಚಾರಗಳು ಹೊರಬರಲು ಆರಂಭಿಸಿದವು.
ಸಿಸಿಬಿ ಎದುರು ಇಂದ್ರಜಿತ್ ಲಂಕೇಶ್ 15 ಹೆಸರುಗಳನ್ನು ಹೇಳಿದ್ದಾರೆ ಎನ್ನುವುದು ಆರಂಭಿಕ ಮಾಹಿತಿಯಾಗಿತ್ತು.
ವಿಚಾರಣೆ ಎದುರಿಸುತ್ತಿರುವ ರಾಹುಲ್ ಮೊಬೈಲ್ ನಲ್ಲಿ ಸ್ಪೋಟಕ ಮಾಹಿತಿಗಳು ಪತ್ತೆಯಾಗಿದೆ ಎನ್ನಲಾಗಿದೆ.
ಸಿಸಿಬಿ ಎಲ್ಲ ಕಡೆಯಿಂದ ಮಾಹಿತಿ ಕಲೆ ಹಾಕಿ ವಿಚಾರಣೆ ಮಾಡುತ್ತಿದೆ
ಇಂದ್ರಜಿತ್ ಲಂಕೇಶ್ ಅವರ ಬಳಿ ಮತ್ತಷ್ಟು ದಾಖಲೆ ಪಡೆದುಕೊಂಡಿದೆ.
ಸಂಜನಾ ಮತ್ತು ರಾಹುಲ್ ನಡುವಿನನ ಕ್ಲೋಸ್ ಚಾಟ್ ಮೆಸೇಜ್ ಗಳು ಲಭ್ಯ
ಈ ಮೊಬೈಲ್ ಒಂದೇ ಸಾಕು ಸಂಜನಾ ಅವರನ್ನು ವಿಚಾರಣೆಗೆ ಕರೆತರಲು ಎಂದು ಹೇಳಲಾಗಿದೆ
ನಟಿ ರಾಗಿಣಿ ಗೆಳೆಯನನ್ನು ಸಿಸಿಬಿ ಮೊದಲು ವಿಚಾರಣೆಗೆ ಕರೆದುಕೊಂಡು ಬಂದಿತು.
ಇದಾದ ಮೇಲೆ ಸಂಜನಾ ಆಪ್ತ ರಾಹುಲ್ ಅವರನ್ನು ಸಿಸಿಬಿ ವಿಚಾರಣೆಗೆ ಕರೆದೊಯ್ದಿದೆ.
ಗಂಡ-ಹೆಂಡತಿ ಸಿನಿಮಾದ ಮೂಲಕ ಹೆಸರು ಮಾಡಿದ್ದ ಸಂಜನಾ ಸ್ಯಾಂಡಲ್ ವುಡ್ ಡ್ರಗ್ಸ್ ವಿಚಾರ ನನಗೆ ಏನೂ ಗೊತ್ತಿಲ್ಲ ಎಂದು ಹೇಳಿದ್ದಾರೆ.
ರಾಹುಲ್ ಗೆ ಹುಡುಕಾಟ ಜಾಸ್ತಿ ಎಂದು ಸಂಜನಾ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ರಾಹುಲ್ ಜಾಸ್ತಿ ಆಕ್ಟೀವ್ ಇದ್ದಾರೆ ಎಂದು ಸಂಜನಾ ಹೇಳಿದ್ದಾರೆ. ಸುಶಾಂತ್ ಸಿಂಗ್ ಸಂಶಯಾಸ್ಪದ ಸಾವಿನ ನಂತರ ತೆರೆದುಕೊಂಡ ತನಿಖೆ ಸ್ಯಾಂಡಲ್ ವುಡ್ ಗೆ ಬಂದು ನಿಂತಿದೆ.
ಅನಿಕಾ ಎಂಬುವರನ್ನು ಬಂಧಿಸಿದ ನಂತರ ಒಂದೊಂದೆ ವಿಚಾರಗಳು ತೆರೆದುಕೊಂಡವು. ಕನ್ನಡ ಚಿತ್ರರಂಗ ಎಂದು ದಯವಿಟ್ಟು ಹೆಸರು ಹಾಳುಮಾಡಬೇಡಿ ಎಂದು ಸಂಜನಾ ಮನವಿ ಮಾಡಿಕೊಂಡಿದ್ದಾರೆ.
ಯಾರೋ ಒಬ್ಬರು ಮಾಡಿದ ಕೆಲಸಕ್ಕೆ ಇಡೀ ಚಿತ್ರರಂಗವನ್ನೇ ಹಾಳು ಮಾಡಬೇಡಿ ಎಂದು ಸಂಜನಾ ಪ್ರಶ್ನೆ ಮಾಡಿದ್ದಾರೆ. ಯುವನಟರು ಡ್ರಗ್ಸ್ ದಾಸರಾಗಿದ್ದಾರೆ ಎಂದು ಇಂದ್ರಜಿತ್ ಹೇಳಿದ ನಂತರ ಕಿಡಿ ಮತ್ತಷ್ಟು ಹೆಚ್ಚಾಗಿದೆ.
ನಾನು ಬೆಂಗಳೂರಿನಲ್ಲಿ ಮನೆಯಲ್ಲೇ ಇದ್ದೇನೆ ಎಂದು ಸಂಜನಾ ಹೇಳಿದ್ದಾರೆ. ರಾಹುಲ್ ಅವರನ್ನು ಪೊಲೀಸರು ಯಾಕೆ ಕರೆದುಕೊಂಡು ಹೋಗಿದ್ದಾರೆ ಎನ್ನುವುದೇ ಗೊತ್ತಿಲ್ಲ ಎಂದು ಸಂಜನಾ ಹೇಳಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮ ಮಾಡಿಕೊಂಡಿರುವ ರಾಹುಲ್ ನನಗೆ ಪರಿಚಯ ಎಂದು ಹೇಳಿದ್ದಾರೆ.