ಮಂಗಳೂರು(ಸೆ. 30) ಒಂದು ಕಡೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ಮಾಡಿ ಒಬ್ಬರಾದ ಮೇಲೆ ಒಬ್ಬರು ಡ್ರಗ್ಸ್ ಆರೋಪಿಗಳನ್ನು ಸೆರೆಹಿಡಿಯುತ್ತಿದ್ದರೆ ಇಲಾಖೆಯಲ್ಲೇ ಮಹತ್ವದ ಬದಲಾವಣೆಯೊಂದು ಆಗಿದೆ. ಮಂಗಳೂರು ಡ್ರಗ್ಸ್ ಜಾಲದ ತನಿಖೆ ನಡೆಸುತ್ತಿರುವ ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ದಿಢೀರ್ ವರ್ಗಾವಣೆ ಮಾಡಲಾಗಿದೆ. ಸಿಸಿಬಿ ಇನ್ ಸ್ಪೆಕ್ಟರ್ ಶಿವಪ್ರಕಾಶ್ ಸ್ಥಾನಕ್ಕೆ ಕಾಪು ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇಮಕ ಮಾಡಲಾಗಿದೆ. ನಿರೂಪಕಿ ಅನುಶ್ರೀ ಅವರ ವಿಚಾರಣೆ ನಂತರ ಮಂಗಳೂರಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ವಿಚಾರಗಳು ಒಂದೊಂದಾಗಿ ಬೆಳಕಿಗೆ ಬಂದವು. ಡ್ಯಾನ್ಸರ್ ಕಂ ಕೊರೊಯೋಗ್ರಾಫರ್ ಅನ್ನು ಬೆಂಗಳೂರಿಗೆ ಬಂದು ಬಂಧನ ಮಾಡಿದ್ದರು. ಮಂಗಳೂರು ಸಿಸಿಬಿ ಪೊಲೀಸರು ಚುರಿಕಿನ ಕಾರ್ಯಾಚರಣೆ ನಡೆಸುತ್ತಿದ್ದುದ್ದರ ನಡುವೆ ಈ ವರ್ಗಾವಣೆಗೆ ಕಾರಣ ಗೊತ್ತಾಗಿಲ್ಲ. Sandalwood Drugs case Mangalaluru CCB Inspector Sivaprakash transferred ಮಂಗಳೂರು ಡ್ರಗ್ಸ್ ಜಾಲ; ಇದ್ದಕ್ಕಿದಂತೆ ವರ್ಗಾವಣೆ ಮಾಡಿದ್ದು ಏಕೆ?