'ಡ್ರಗ್ಸ್ ತೆಗೆದುಕೊಂಡಿದ್ದರೆ ಕಂಗನಾಗೂ ವಿಚಾರಣೆಯಾಗಲಿ' ಬಿಜೆಪಿ ನಾಯಕ!

First Published | Sep 24, 2020, 9:57 PM IST

ಮುಂಬೈ (ಸೆ. 24)  ಕಂಗನಾ ರಣಾವತ್ ಬಿಜೆಪಿ ಪರವಾಗಿದ್ದಾರೆ, ಬಿಜೆಪಿ ಪರವಾಗಿ ಮಾತನಾಡುತ್ತಾರೆ, ಅವರಿಗೆ  ಬೇಕು ಎಂದೇ ಕೇಂದ್ರ ಸರ್ಕಾರ ಭದ್ರತೆ ನೀಡಿದೆ ಎಂಬೆಲ್ಲ ಆರೋಪಗಳ ನಡುವೆ ಬಿಜೆಪಿ ಮುಖಂಡರೊಬ್ಬರೆ ಕಂಗನಾ ವಿರುದ್ಧ ಮಾತನಾಡಿದ್ದಾರೆ.

ನಟಿ ಕಂಗನಾ ರಣಾವತ್ ಕಾನೂನನ್ನೂ ಮೀರಿದವರಲ್ಲ. ಒಂದು ವೇಳೆ ಅವರೇನಾದರೂ ತಾನು ಮಾದಕ ವ್ಯಸನಿ ಎಂದು ಹೇಳಿದ್ದರೆ ಅವರನ್ನು ಎನ್‌ಸಿಬಿ ತನಿಖೆ ನಡೆಸಬೇಕು ಎಂದು ಮಹಾರಾಷ್ಟ್ರ ಬಿಜೆಪಿ ಮುಖಂಡ ಪ್ರವೀಣ್ ದಾರೇಕರ್ ಹೇಳಿಕೆ ನೀಡಿದ್ದಾರೆ.
ಕಂಗನಾ ಅವರು ನಾನು ಮಾದಕ ವ್ಯಸನಿ ಎಂದು ಹೇಳಿದರೆ ಎನ್‌ಸಿಬಿ ತನಿಖೆ ನಡೆಸಬೇಕು. ನಮ್ಮ ದೇಶದಲ್ಲಿ ಎಲ್ಲರಿಗೂ ಕಾನೂನು ಒಂದೇ. ಅವೆರನ್ನು ಹಾಗೆ ಬಿಡಲು ಸಾಧ್ಯವಿಲ್ಲ ಎಂದಿದ್ದಾರೆ.
Tap to resize

ಶಿವಸೇನೆ ಸರ್ಕಾರ ಮುಂಬೈ ನಾಗರಿಕರನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದು ಮಳೆ ಅವಾಂತರಕ್ಕೆ ಪರಿಹಾರ ಕಂಡುಹಿಡಿಯುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.
ಕಂಗನಾ ರಣಾವತ್‌ ಡ್ರಗ್ಸ್ ಸೇವಿಸುತ್ತಾರೆ ಎಂದು ನಟ ಶೇಖರ್ ಸುಮನ್ ಅವರ ಪುತ್ರ ಅಧ್ಯಾಯನ್ ಸುಮನ್ ಆರೋಪ ದೊಡ್ಡ ಸುದ್ದಿಯಾಗಿತ್ತು.
ಈ ಬಗ್ಗೆ ತನಿಖೆಯಾಗಬೇಕು ಎಂದು ಶಿವಸೇನೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮುಂಬೈ ಪೊಲೀಸರಿಗೆ ತಿಳಿಸಿದೆ.
ಇದೆಲ್ಲದರ ನಡುವೆ ಬಿಜೆಪಿ ನಾಯಕರೆ ಕಂಗನಾ ಅವರನ್ನು ತನಿಖೆಗೆ ಒಳಪಡಿಸಿ ಎಂದು ಹೇಳಿದ್ದಾರೆ. ಸುಶಾಂತ್ ಸಿಂಗ್ ಸಾವಿನ ನಂತರ ಬಾಲಿವುಡ್ ಗೆ ಡ್ರಗ್ಸ್ ಘಾಟು ಆವರಿಸಿದೆ. ಸುಶಾಂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ಪೊಲೀಸರ ವಶದಲ್ಲಿದ್ದು ವಿಚಾರಣೆ ಎದುರಿಸುತ್ತ ಇದ್ದಾರೆ.
ಇನ್ನೊಂದು ಕಡೆ ಎನ್‌ಸಿಬಿ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ , ರಾಕುಲ್ ಪ್ರೀತ್ ಸಿಂಗ್ ಮತ್ತು ನಟಿ ಶ್ರದ್ಧಾ ಕಪೂರ್‌ ಗೂ ನೋಟಿಸ್ ನೀಡಿದ್ದು ವಿಚಾರಣೆ ಬನ್ನಿ ಎಂದು ಹೇಳಿದೆ.

Latest Videos

click me!