Published : Nov 06, 2026, 01:16 PM ISTUpdated : Nov 06, 2026, 03:01 PM IST
ಮಂಡ್ಯದ ವಿಸಿ ಫಾರಂ ರೈಲ್ವೆ ಗೇಟ್ ಬಳಿ ಬೆಂಗಳೂರು ಮೂಲದ ವಿವಾಹಿತ ಮಹಿಳೆ ಮತ್ತು ಯುವಕ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾರೆ. ರೈಲ್ವೆ ಪೊಲೀಸರು ಮೃತದೇಹಗಳನ್ನು ಮಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು, ಸಾವಿಗೆ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದಾರೆ.
ಮಂಡ್ಯ ನಗರದ ಹೊರವಲಯದಲ್ಲಿರುವ ವಿಸಿ ಫಾರಂ ರೈಲ್ವೆ ಗೇಟ್ ಬಳಿ ಇಂದು ಬೆಳಿಗ್ಗೆ ವಿವಾಹಿತ ಮಹಿಳೆ ಹಾಗೂ ಯುವಕ ರೈಲಿಗೆ ಸಿಲುಕಿ ಭೀಕರವಾಗಿ ಸಾವಿಗೆ ಶರಣಾಗಿದ್ದಾರೆ.
27
ಮೃತರನ್ನು ಬೆಂಗಳೂರು ಮೂಲದ ಸಹನ ಹಾಗೂ ರಾಹುಲ್ ಎಂದು ಗುರುತಿಸಲಾಗಿದೆ. 8 ವರ್ಷಗಳ ಹಿಂದೆ ವಿರೇಶ್ ಎಂಬ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದ ಸಹನಾ (25) ಅವರಿಗೆ ಇಬ್ಬರು ಮುದ್ದಾದ ಮಕ್ಕಳಿದ್ದು (6 ವರ್ಷದ ಹೆಣ್ಣು, 2 ವರ್ಷದ ಗಂಡು), ವಾಸವಿದ್ದ ಬಿಲ್ಡಿಂಗ್ನಲ್ಲೇ ಇದ್ದ ಯುವಕ ರಾಹುಲ್ (23) ಜೊತೆ ಸೃಷ್ಟಿಯಾದ ಅಕ್ರಮ ಸಂಬಂಧವೇ ಈ ದುರಂತಕ್ಕೆ ಕಾರಣವಾಗಿದೆ.
37
ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿದ್ದ ದಂಪತಿ ನಡುವೆ ಅಕ್ರಮ ಸಂಬಂಧದ ವಿಚಾರ ತಿಳಿದು ಜಗಳವಾಗುತ್ತಿತ್ತು. ಹಲವು ಬಾರಿ ಹಿರಿಯರ ಸಮ್ಮುಖದಲ್ಲಿ ಪಂಚಾಯಿತಿ ನಡೆಸಿ ಬುದ್ಧಿ ಹೇಳಿದ್ದರೂ ಸಹನಾ, ರಾಹುಲ್ ಸಾಹಸ ಬಿಟ್ಟಿರಲಿಲ್ಲ.
ಕಳೆದ ಸೋಮವಾರವೂ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ತೀವ್ರ ಜಗಳವಾಗಿದ್ದು, "ನಾನು ರಾಹುಲ್ ಜೊತೆಯೇ ಬಾಳುತ್ತೇನೆ" ಎಂದಿದ್ದ ಸಹನಾಗೆ, "ನಿಮ್ಮಿಬ್ಬರನ್ನು ಬಾಳಲು ಬಿಡಲ್ಲ" ಎಂದು ಗಂಡ ವಿರೇಶ್ ಗದರಿದ್ದರು. ಗಂಡನ ಗದರಿಕೆಯ ಬಳಿಕ ಮಂಗಳವಾರ ಬೆಂಗಳೂರಿನ ಮನೆಯಿಂದ ಹೊರಟಿದ್ದ ಸಹನಾ, ಮಂಡ್ಯದ ಗುನ್ನಾಯಕನಹಳ್ಳಿಯಲ್ಲಿರುವ ತನ್ನ ಅಜ್ಜಿ ಮನೆಗೆ ಬಂದು ತಂಗಿದ್ದಳು.
57
ಗುರುವಾರ ಮಂಡ್ಯದ ಗುನ್ನಾಯಕನಹಳ್ಳಿಗೆ ಬಂದಿದ್ದ ರಾಹುಲ್, ಸಹನಾಳನ್ನು ಪಿಕ್ ಮಾಡಿಕೊಂಡು ಗಂಡ ವಿರೇಶ್ ವಿರುದ್ಧ ದೂರು ನೀಡಲು ಇಬ್ಬರೂ ತೀರ್ಮಾನಿಸಿದ್ದರು. ಆದರೆ "ಗಂಡ ವಿರೇಶ್ ನಮ್ಮನ್ನು ನೆಮ್ಮದಿಯಿಂದ ಬಾಳಲು ಬಿಡುವುದಿಲ್ಲ" ಎಂದು ತೀವ್ರ ಮನನೊಂದ ಭಗ್ನಪ್ರೇಮಿಗಳು ಅಂತಿಮವಾಗಿ ಪ್ರಾಣ ತ್ಯಾಗ ಮಾಡಲು ನಿರ್ಧರಿಸಿದ್ದರು.
67
ಇಂದು ಬೆಳಿಗ್ಗೆ ಮಂಡ್ಯದ ವಿಸಿ ಫಾರಂ ರಸ್ತೆಯ ರೈಲ್ವೆ ಟ್ರ್ಯಾಕ್ ಬಳಿ ಚಲಿಸುವ ರೈಲಿಗೆ ಇಬ್ಬರೂ ತಲೆಕೊಟ್ಟು ಭೀಕರವಾಗಿ ಸಾವಿಗೆ ಶರಣಾಗಿದ್ದಾರೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಮಂಡ್ಯ ರೈಲ್ವೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
77
ರೈಲ್ವೆ ಪೊಲೀಸರು ಸ್ಥಳದಲ್ಲಿದ್ದ ಮೃತದೇಹಗಳನ್ನು ವಶಕ್ಕೆ ಪಡೆದು, ಮರಣೋತ್ತರ ಪರೀಕ್ಷೆಗಾಗಿ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಯ ಶವಗಾರಕ್ಕೆ ರವಾನಿಸಿದ್ದಾರೆ. ಮೃತರ ಕಡೆಯವರಿಗೆ ಘಟನೆಯ ಕುರಿತು ಮಂಡ್ಯ ರೈಲ್ವೆ ಪೊಲೀಸರು ಈಗಾಗಲೇ ಮಾಹಿತಿ ರವಾನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ