ಮೈಮಾಟದಿಂದ ಅಧಿಕಾರಿಗಳು ಬುಟ್ಟಿಗೆ, ಸ್ವಪ್ನಾ ಅಕ್ರಮ ಚಿನ್ನ ಸಾಗಣೆಗೆ ಬಳಸಿಕೊಂಡಿದ್ದ ಮಾರ್ಗ!
First Published | Jul 16, 2020, 5:22 PM ISTಜು.5ರಂದು ತಿರುವನಂತಪುರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರಾಜತಾಂತ್ರಿಕ ಬ್ಯಾಗೇಜ್‌ವೊಂದು ಸಿಕ್ಕಿತ್ತು. ತಿರುವನಂತಪುರದ ಯುಎಇ ರಾಯಭಾರ ಕಚೇರಿಯ ವಿಳಾಸ ಹೊಂದಿದ್ದ ಆ ಬ್ಯಾಗ್ ಅನ್ನು ಪಡೆಯಲು ಯಾರೂ ಬಂದಿರಲಿಲ್ಲ. ಸೀಮಾಸುಂಕ ಅಧಿಕಾರಿಗಳು ಪರಿಶೀಲಿಸಿದಾಗ, ಸ್ನಾನಗೃಹ ಸಾಧನಗಳ ಒಳಗೆ 30 ಕೆ.ಜಿ. ಚಿನ್ನ ದೊರೆತಿತ್ತು. ತನಿಖೆ ನಡೆಸಿದಾಗ ಯುಎಇ ರಾಯಭಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸರಿತ್ ಎಂಬಾತನ ಬಂಧನವಾಗಿತ್ತು. ಪ್ರಕರಣವನ್ನು ಮತ್ತಷ್ಟುತನಿಖೆಗೆ ಒಳಪಡಿಸಿದಾಗ ಈ ಹಿಂದೆ ಯುಎಇ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಸ್ವಪ್ನಾ ಸುರೇಶ್ ಹೆಸರು ಕೇಳಿ ಬಂದಿತ್ತು. ಆದರೀಗ ಸಿಕ್ಕಿಬಿದ್ದ ಸ್ವಪ್ನಾ ಕುರಿತಾಗಿ ದಿನೇ ದಿನೇ ಶಾಕಿಂಗ್ ಮಾಹಿತಿಗಳು ಲಭ್ಯವಾಗಲಾರಂಭಿಸಿವೆ.