ಅಮರ್ ಉಜಾಲಾ ವರದಿಯನ್ವಯ ವಿಕಾಸ್ ದುಬೆ ವಿಚಾರಣೆ ವೇಳೆ ರಾಜಕೀಯ ನಾಯಕರೊಂದಿಗಿನ ಸಂಬಂಧದ ಕುರಿತು ಮಾಹಿತಿ ನೀಡಿದ್ದಾರೆ. ಪೊಲೀಸರು ನೀಡಿದ ಮಾಹಿತಿ ಅನ್ವಯ ಜುಲೈ 2 ರಂದು ನಡೆದ ಘಟನೆಗೆ ಸಚಿವರೊಬ್ಬರು ಆತನಿಗೆ ಸಾಥ್ ನೀಡಿದ್ದರು. ಇವರು ವಿಕಾಸ್ ದುವೆಗೆ ಕಾಪಾಡುವುದಾಗಿ ಮಾತು ಕೊಟ್ಟಿದ್ದರು.
ಈ ವಿಚಾರದಲ್ಲಿ ಓರ್ವ ವಕೀಲ ಕೂಡಾ ದುಬೆ ಸಾಥ್ ನೀಡಿದ್ದ. ಹೀಗಾಗೇ ಅವರ ನಿರ್ದೇಶನದಂತೆ ದುಬೆ ತಪ್ಪಿಸಿಕೊಂಡು ಓಡಾಡುತ್ತಿದ್ದ. ಇವೆಲ್ಲದರೊಂದಿಗೆ ಮಧ್ಯಪ್ರದೇಶದ ಓರ್ವ ಮದ್ಯ ಉದ್ಯಮಿಯೂ ರಕ್ಷಣೆ ನೀಡುವ ಭರವಸೆ ಕೊಟ್ಟಿದ್ದರು.
ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದ ಸಚಿವ: ಪೊಲೀಸರ ಮಾಹಿತಿ ಅನ್ವಯ ಮಂತ್ರಿ ದುಬೆಗೆ ಎನ್‌ಕೌಂಟರ್‌ನಿಂದ ರಕ್ಷಿಸುವುದಾಗಿ ಮಾತು ಕೊಟ್ಟಿದ್ದರು. ಇದಕ್ಕಾಗೇ ನ್ಯಾಯಾಲಯ ಅಥವಾ ಸಾರ್ವಜನಿಕವಾಗಿ ಶರಣಾಗತಿಯಾಗಲು ಸೂಚಿಸಲಾಗಿತ್ತು. ಈ ಮೂಲಕ ಮಾಧ್ಯಮದೆದುರು ಕಾಣಿಸಿಕೊಳ್ಳಲು ಸೂಚಿಸಲಾಗಿತ್ತು.
ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಸೆರೆಂಡರ್: ವಿಕಾಸ್ ದುಬೆಗೆ ಸಚಿವ, ವಕೀಲ ಹಾಗೂ ಮದ್ಯ ಉದ್ಯಮಿ ಶರಣಾಗಲು ಉತ್ತರ ಪ್ರದೇಶ ಬಿಟ್ಟು ಬೇರೆ ರಾಜ್ಯದಲ್ಲಿ ಆಗಲು ಸೂಚಿಸಿದ್ದರು. ಇದೇ ಕಾರಣಕ್ಕಾಗಿ ಆತ ಮಧ್ಯಪ್ರದೇಶ ಆಯ್ಕೆ ಮಾಡಿಕೊಂಡಿದ್ದ. ಮಧ್ಯಪ್ರದೇಶದಲ್ಲಿ ಈ ಸಚಿವರ ಪ್ರಾಬಲ್ಯ ಇದೆ ಎನ್ನಲಾಗಿದೆ. ಹೀಗಾಗೇ ಯೋಜನೆಯನ್ವಯ ದುಬೆ ಸಿಸಿಟಿವಿಯಿಂದ ಸುತ್ತುವರೆದಿದ್ದ ಮಂದಿರದ ಆವರಣದಲ್ಲಿ ಶರಣಾಗಿದ್ದ.
ಒಂದು ದಿನ ಹಿಂದಷ್ಟೇ ಬದಲಾಗಿದ್ರು ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್: ಇನ್ನು ವರದಿಗಳನ್ವಯ ದುಬೆ ಯಾವ ಠಾಣೆ ವ್ಯಾಪ್ತಿಯಲ್ಲಿ ಸರೆಂಡರ್ ಆಗಿದ್ದನೋ ಅಲ್ಲಿನ ಠಾಣಾಧಿಕಾರಿ ಹಾಗೂ ಸರ್ಕಲ್ ಇನ್ಸ್‌ಪೆಕ್ಟರ್ ಒಂದು ದಿನದ ಹಿಂದಷ್ಟೇ ಬದಲಾಗಿದ್ದರು. ಇವೆಲ್ಲವೂ ಯೋಜನೆಯನ್ವಯ ನಡೆದಿದೆ ಎಂಬುವುದು ಪೊಲೀಸರಿಂದ ಲಭ್ಯವಾದ ಮಾಹಿತಿ.
ಉಜ್ಜಯನಿಯಲ್ಲಿ ಅರೆಸ್ಟ್, ಕಾನ್ಪುರದಲ್ಲಿ ಎನ್‌ಕೌಂಟರ್: ವಿಕಾಸ್‌ನನ್ನು ಗುರುವಾರ ಉಜ್ಜಯನಿಯಲ್ಲಿ ಅರೆಸ್ಟ್ ಮಾಡಲಾಗಿತ್ತು. ಈಗಾಗಿ ರಸ್ತೆ ಮೂಲಕ ಆತನನ್ನು ಕಾನ್ಪುರಕ್ಕೆ ಕರೆತರಲಾಗುತ್ತಿತ್ತು. ಆದರೆ ಗಡಿ ದಾಟಿದ ಕೆಲವೇ ಕ್ಷಣದಲ್ಲಿ ವಾಹನ ಪಲ್ಟಿಯಾಗಿ ವಿಕಾಸ್ ತಪ್ಪಿಸಿಕೊಳ್ಳಲು ಯತ್ಬಿಸಿದ್ದು, ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ.