RCB ತಂಡದ ಸಂಪೂರ್ಣ ವೇಳಾಪಟ್ಟಿ; ತವರಿನಲ್ಲಿ ಕೊಹ್ಲಿ ಸೈನ್ಯಕ್ಕೆ ಪಂದ್ಯವೇ ಇಲ್ಲ!

First Published Mar 7, 2021, 3:32 PM IST

IPl 2021 ಟೂರ್ನಿ ವೇಳಾಪಟ್ಟಿ ಬಿಡುಗಡೆಯಾಗಿದೆ. ಎಪ್ರಿಲ್ 9 ರಿಂದ 14ನೇ ಆವೃತ್ತಿ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ದೇಶಗ 6 ಪ್ರಮುಖ ನಗರಗಳಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ನಡಯಲಿದೆ. ಬೆಂಗಳೂರು ಕೂಡ ಇದರಲ್ಲಿ ಒಂದಾಗಿದೆ. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ತವರಿನಲ್ಲಿ ಒಂದೇ ಒಂದು ಪಂದ್ಯವಿಲ್ಲ. RCB ತಂಡದ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ.

ಎಪ್ರಿಲ್ 9 ರಿಂದ ಮೇ.30ರ ವರೆಗೆ ಐಪಿಎಲ್ 2021 ಟೂರ್ನಿ ನಡೆಯಲಿದೆ. ಚೆನ್ನೈನಲ್ಲಿ ಉದ್ಘಾಟನೆಯಾಗಲಿರು ಐಪಿಎಲ್ ಟೂರ್ನಿ, ಅಹಮ್ಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿನ ಫೈನಲ್ ಪಂದ್ಯದೊಂದಿಗೆ ಟೂರ್ನಿ ಅಂತ್ಯಗೊಳ್ಳಲಿದೆ.
undefined
ಬಿಸಿಸಿಐ ಈ ಕುರಿತು ವೇಳಾಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರು, ಚೆನ್ನೈ, ಮುಂಬೈ, ದೆಹಲಿ, ಕೋಲ್ಕತಾ ಹಾಗೂ ಅಹಮ್ಮದಾಬಾದ್ ನಗರದಲ್ಲಿ ಈ ಬಾರಿಯ ಐಪಿಎಲ್ ಟೂರ್ನಿ ಆಯೋಜಿಸಲಾಗಿದೆ.
undefined
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಈ ಬಾರಿ 10 ಐಪಿಎಲ್ ಪಂದ್ಯಗಳು ನಡೆಯಲಿದೆ. ಆದರೆ ತವರಿನ ಆರ್‌ಸಿಬಿ ತಂಡಕ್ಕೆ ಒಂದೇ ಒಂದು ಪಂದ್ಯವಿಲ್ಲ ಅನ್ನೋದು ಅಭಿಮಾನಿಗಳಿಗೆ ನಿರಾಸೆಯಾಗಿದೆ.
undefined
ಆಯ್ಕೆ ಮಾಡಿದ 6 ನಗರಗಳ ಪೈಕಿ ಬೆಂಗಳೂರು ಹಾಗೂ ದೆಹಲಿ ಹೊರತು ಪಡಿಸಿ ಇನ್ನುಳಿದ ನಾಲ್ಕು ನಗರಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪಂದ್ಯ ಆಡಲಿದೆ.
undefined
ಎಪ್ರಿಲ್ 9 ರಂದು ನಡೆಯಲಿರುವ ಉದ್ಘಟಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ವಿರುದ್ಧ ಹೋರಾಟ ನಡೆಸಲಿದೆ.
undefined
ಎಪ್ರಿಲ್ 14 ರಂದು ನಡೆಯಲಿರುವ ಪಂದ್ಯದಲ್ಲಿ RCB ತಂಡ, ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಹೋರಾಡಲಿದೆ. ಇನ್ನು ಎಪ್ರಿಲ್ 22 ರಂದು RCB ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗುತ್ತಿದೆ.
undefined
ಎಪ್ರಿಲ್ 25ಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ RCB ಹೋರಾಡಿದರೆ, ಎಪ್ರಿಲ್ 27 ರಂದು ಡೆಲ್ಲಿ ವಿರುದ್ಧ ಹೋರಾಟ ನಡೆಸಲಿದೆ. ಎಪ್ರಿಲ್ 30ಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಕಣಕ್ಕಿಳಿಯಲಿದೆ.
undefined
ಮೇ..3ಕ್ಕೆ ಕೋಲ್ಕತಾ ನೈಟ್ ರೈಡರ್ಸ್, ಮೇ. 6 ಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್, ಮೇ.9ಕ್ಕೆ ಕೋಲ್ಕತಾ ನೈಟ್ ರೈಡರ್ಸ್, ಮೇ.14ಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆರ್‌ಸಿಬಿ ಹೋರಾಟ ನಡೆಸಲಿದೆ.
undefined
ಮೇ.16 ರಾಜಸ್ಥಾನ ರಾಯಲ್ಸ್, ಮೇ.20ಕ್ಕೆ ಮುಂಬೈ ಇಂಡಿಯನ್ಸ್ ಹಾಗೂ ಮೇ.23ರಂದು ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕೊಹ್ಲಿ ಸೈನ್ಯ ಹೋರಾಟ ಮಾಡಲಿದೆ.
undefined
click me!