ಫಿಲಂ ನೋಡಿ ಕೊಲೆಗೈದ 17ರ ಯುವಕ, ಕಾರಣ ಕೇಳಿ ಹೆತ್ತವರಿಗೇ ಶಾಕ್!

First Published | Mar 4, 2021, 4:48 PM IST

ಉತ್ತರ ಪ್ರದೇಶ ಪೊಲೀಸರು ಕೊಲೆಗೈದು ಎಸೆದಿರುವ ದಲಿತ ಬಾಲಕಿಯೊಬ್ಬಳ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣ ಸಂಬಂಧ ಪೊಲೀಸರು17 ವರ್ಷದ ಬಾಲಕನನ್ನು ಬಂಧಿಸಿದ್ದಾರೆ. ಬಂಧಿತ ಬಾಲಕ ಶಾಕಿಂಗ್ ಮಾಹಿತಿಯನ್ನು ಬಹಿರಂಗಪಡಿಸಿದ್ದಾನೆ. ಈ ಬಾಲಕ ಪೋರ್ನ್ ಸಿನಿಮಾ ನೋಡಿ ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈಯ್ಯಲು ಯತ್ನಿಸಿದ್ದ. ಇದಾದ ಬಳಿಕ ತಾನು ಸಿಕ್ಕಾಕೊಳ್ತೀನಿ ಅನ್ನೋ ಭಯದಲ್ಲಿ, ಬಾಲಕಿಯನ್ನು ಹತ್ಯೆಗೈದಿದ್ದಾನೆ. 
 

ಆಲೀಘಡ ಎಸ್‌ಎಸ್‌ಪಿ ಮುನಿರಾಜು ಗೋಬೂ ಈ ಪ್ರಕರಣದ ಮಾಹಿತಿ ನೀಡುತ್ತಾ ಅಕ್ರಾಬಾದ್ ಠಾಣಾ ವ್ಯಾಪ್ತಿಯ ಕಿವ್ಲಾಸ್ ಹಳ್ಳಿಯಲ್ಲಿ ಭಾನುವಾರ ಓರ್ವ ಅಪ್ರಾಪ್ತ ಬಾಲಕಿಯ ಶವ ಹೊಲದಲ್ಲಿ ಪತ್ತೆಯಾಗಿತ್ತು. ತನಿಖೆಯಲ್ಲಿ ಪಕ್ಕದ ಹೊಲದ 17 ವರ್ಷದ ಬಾಲಕ ಕೊಲೆಗಾರ ಎಂಬುವುದು ತಿಳಿದು ಬಂದಿದೆ.
ಈ ಆರೋಪಿ ತನ್ನ ಹೊಲದಲ್ಲಿ ಕುಳಿತು ಮೊಬೈಲ್‌ನಲ್ಲಿ ಪೋರ್ನ್ ಸಿನಿಮಾ ನೋಡುತ್ತಿದ್ದ. ಹೀಗಿರುವಾಗ ಅಲ್ಲಿದ್ದ ಬಾಲಕಿಯನ್ನು ಕಂಡು ಆತನ ಮನಸ್ಸು ಬದಲಾಗಿದೆ.
Tap to resize

ಇದರ ಬೆನ್ನಲ್ಲೇ ಈ ಬಾಲಕ, ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈಯ್ಯಲು ಯತ್ನಿಸಿದ್ದಾನೆ ಎಂಬುವುದು ಪೊಲೀಸರು ನಿಡಿದ ಮಾಹಿತಿಯಾಗಿದೆ. ಸದ್ದಯ ಪೊಲೀಸರು ಎಲ್ಲಾ ದಿಕ್ಕಿನಿಂದಲೂ ತನಿಖೆ ನಡೆಸುತ್ತಿದ್ದಾರೆ.
ಇನ್ನು ಬಾಲಕಿ ತನ್ನನ್ನು ತಾನು ರಕ್ಷಿಸಲು ಯತ್ನಿಸಿದ್ದಾಳೆ, ಆದರೆ ಸಾಧ್ಯವಾಗಿಲ್ಲ. ಬಾಲಕಿ ಕಿರುಚಾಡಲು ಯತ್ನಿಸಿದಾಗ ಆರೋಪಿ ಆಕೆಯ ಮುಖವನ್ನು ಅದುಮಿದ್ದಾನೆ. ಅಲ್ಲದೇ ಶಾಲಿನಿಂದ ಆಕೆಯ ಕತ್ತು ಹಿಸುಕಿ ಸಾಯಿಸಿದ್ದಾನೆ ಎಂದಿದ್ದಾರೆ ಪೊಲೀಸರು.
ಘಟನಾ ಸ್ಥಳದಲ್ಲಿ ಪತ್ತೆಯಾದ ಚಪ್ಪಲಿಯಿಂದಾಗಿ ಆರೋಪಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಬಾಲಾಪರಾಧಿ ಕೇಂದ್ರಕ್ಕೆ ಕಳುಹಿಸಿದ್ದಾರೆ.

Latest Videos

click me!