ಬೆಂಗಳೂರು ಐಪಿಎಲ್ ಟಿಕೆಟ್ ಹಗರಣ: ಪೊಲೀಸರೇ ಕಾಳಸಂತೆಕೋರರು, ಮಾರಾಟ ಮಾಡುವಾಗ್ಲೆ ಇಬ್ಬರು ಸಿಕ್ಕಿಬಿದ್ರು!

Published : May 29, 2025, 07:50 PM IST

ಕಿರಣ್.ಕೆ.ಎನ್.ಏಷ್ಯಾನೆಟ್ ಸುವರ್ಣ ನ್ಯೂಸ್ಬೆಂಗಳೂರಿನಲ್ಲಿ ಐಪಿಎಲ್ ಟಿಕೆಟ್‌ಗಳ ಕಾಳಸಂತೆ ಮಾರಾಟದಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ಗಳು ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಟಿಕೆಟ್ ಮಾರಾಟ ಮಾಡುವಾಗ ಇಬ್ಬರು ಕಾನ್ಸ್‌ಟೇಬಲ್‌ಗಳು ಸಿಕ್ಕಿಬಿದ್ದಿದ್ದು,ಹಿರಿಯ ಅಧಿಕಾರಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.

PREV
14

ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯೋ ಐಪಿಎಲ್ ಕ್ರಿಕೆಟ್ ಕ್ರೇಜ್ ಎಷ್ಟು ಇದೆ ಅಂದ್ರೆ ಟಿಕೆಟ್ ಗಾಗಿ ಜನರು ಹಾಹಾಕಾರವೇ ಉಂಟಾಗಿದೆ. ಎಷ್ಟು ಹಣ ಕೊಟ್ಟು ಬೇಕಾದ್ರು ಟಿಕೆಟ್ ಖರೀದಿ ಮಾಡ್ತಾರೇ. ಆದ್ರೆ ಇದನ್ನೇ ಬಂಡವಾಳ ಮಾಡಿಕೊಂಡಿರೋ ಬೆಂಗಳೂರಿನ ಪೊಲೀಸ್ ಕಾನ್ಸ್ ಟೇಬಲ್ ಗಳು ಬ್ಲಾಕ್ ನಲ್ಲಿ ಐಪಿಎಲ್ ಟಿಕೆಟ್ ಮಾರಾಟ ಮಾಡಿ ಖಾಕಿ ಕಳ್ಳಾಟ ಮಾಡ್ತಿದ್ದಾರೆ. ಪೊಲೀಸರೇ ಕಾಳ ಸಂತೆಯಲ್ಲಿ ಅಕ್ರಮವಾಗಿ ಟಿಕೆಟ್ ಮಾರಾಟ ಮಾಡಿ ಕೋಟಿ ಕೋಟಿ ಹಣ ಸಂಪಾದನೆ ಮಾಡ್ತಿದ್ದಾರೆ. ವಿಶೇಷ ಅಂದ್ರೆ ಬೆಂಗಳೂರು ಪೊಲೀಸರೇ ಟಿಕೆಟ್ ಮಾರಾಟ ದಂದೆಯಲ್ಲಿ ತೊಡಗಿದ್ದಾರೆ. ನಗರದ ವಿಜಯನಗರದ ನಚೀಕೆತ ಪಾರ್ಕ್ ಬಳಿ ಮಾರಾಟ ಮಾಡುವಾಗ ರೆಡ್ ಹ್ಯಾಂಡ್ ಆಗಿ ಆರೋಪಿಗಳು ಸಿಕ್ಕಿ ಬಿದಿದ್ದಾರೆ. ಒಬ್ಬ ನಗರದ ಟ್ರಾಫಿಕ್ ಮ್ಯಾನೇಜ್ ಮೆಂಟ್ ಸೆಂಟರ್ ಕಂಟ್ರೋಲ್ ರೂಮ್ ಸಿಬ್ಬಂದಿ ವೆಂಕಟಗಿರಿಗೌಡ ಮತ್ತೊಬ್ಬ ಕಿಂಗ್ ಪಿನ್ ಹಲಸೂರು ಟ್ರಾಫಿಕ್ ಠಾಣೆ ಕಾನ್ಸ್ ಟೇಬಲ್ ರವಿಚಂದ್ರ .ಈ ಕೇಸ್ ನಲ್ಲಿ ಖಾಸಗಿ ವ್ಯಕ್ತಿಗಳಾದ ಶಂಕರ್ ,ಸುರೇಶ್ ಬಂಧನವಾದ್ರೆ, ಇಬ್ಬರು ಕಾನ್ಸ್ ಟೇಬಲ್ ಗಳಿಗೆ ವಿಚಾರಣೆಗೆ ಹಾಜರಾಗಲೂ ಗೋವಿಂದರಾಜನಗರ ಪೊಲೀಸರು ನೊಟೀಸ್ ನೀಡಿದ್ದಾರೆ‌.

24

ಇದೇ ಮೇ 17 ರಂದು ಚಿನ್ನಸ್ವಾಮಿ ಸ್ಟೇಡಿಯಂ ನಲ್ಲಿನ ಆರ್ ಸಿಬಿ ಹಾಗೂ ಕೆ.ಕೆ.ಆರ್.ಪಂದ್ಯ ಇತ್ತು. ಈ ಮ್ಯಾಚ್ ಟಿಕೆಟ್ ಗಾಗಿ ಭಾರೀ ಬೇಡಿಕೆ ಇತ್ತು. ಇದನ್ನೆ ಬಂಡವಾಳ ಮಾಡಿಕೊಂಡ ಖದೀಮ ಪೊಲೀಸರು ಸುಮಾರು 61 ಟಿಕೆಟ್ ಕಾಳಸಂತೆಯಲ್ಲಿ ಮಾರಾಟ ಮಾಡಲು ಬಂದಾಗ ಸಿಕ್ಕಿ ಬಿದ್ದಿದ್ದಾರೆ. ಕೆಎಸ್ ಸಿಎ ಅಥ್ವಾ ಡಿಎನ್ ಎ ಮೂಲಕ .ಹಿರಿಯ ಅಧಿಕಾರಿಗಳು ಪಡೆದು ಕಾನ್ಸ್ ಟೇಬಲ್ ಕಡೆಯಿಂದ ಮಾರಾಟ ಮಾಡಿಸಿದ್ರು ಎನ್ನಲಾಗಿದೆ. ಪ್ರತಿ ಮ್ಯಾಚ್ 150 ಟಿಕೆಟ್ ಪಡೆದು ಬ್ಲಾಕ್ ನಲ್ಲಿ ಮಾರಾಟ ಮಾಡಿಸಲಾಗುತ್ತಿತ್ತು ಎಂದು ತಿಳಿದು ಬಂದಿದೆ. ಪ್ರತಿ ಮ್ಯಾಚ್ ನ 1200 ರೂಪಾಯಿ ಟಿಕೆಟ್ 5 ಸಾವಿರಕ್ಕೆ ಹಾಗೂ 2200 ರೂಪಾಯಿ ಟಿಕೆಟ್ 8 ಸಾವಿರಕ್ಕೆ ಮಾರಾಟವಾಗಿದ್ದಾವೆ. ಒಂದೊಂದು ಮ್ಯಾಚ್ ನಿಂದ 80 ಲಕ್ಷದಿಂದ 1 ಕೋಟಿವರೆಗೆ ಪೊಲೀಸ್ ಸಿಬ್ಬಂದಿ ಹಣ ಮಾಡಿರೋ ಬಗ್ಗೆ ಮಾಹಿತಿ ಸಿಕ್ಕಿದೆ.

34

ಹಿರಿಯ ಅಧಿಕಾರಿಗಳೇ ಆರೋಪಿ ಪೊಲೀಸರಾದ ವೆಂಕಟಗಿರಿ ಗೌಡ ಹಾಗೂ ರವಿಚಂದ್ರಗೆ ಟಿಕೆಟ್ ನೀಡಿದ್ದಾರೆ. ಈ ಟಿಕೆಟ್ ಪಡೆದು ಸುರೇಶ್ ಮೂಲಕ ವಿಜಯನಗರ ಬಳಿ ಟಿಕೆಟ್ ಮಾರಾಟಕ್ಕೆ ಬಂದಿದ್ದ ಸುರೇಶ್ ,ಶಂಕರ್ ಹಾಗೂ ರವಿಚಂದ್ರ. ಮಪ್ತಿಯಲ್ಲಿದ್ದ ಗೋವಿಂದರಾಜನಗರ ಪೊಲೀಸರಿಗೆ ಸಾರ್ ನಿಮಗೆ ಟಿಕೆಟ್ ಬೇಕಾ ಎಂದು ಕೇಳಿದ್ದರು. ಟಿಕೆಟ್ ಖರೀದಿ ಮಾಡಿದ ಪೊಲೀಸರು ಮತ್ತಷ್ಟು ಟಿಕೆಟ್ ತರಿಸುವಂತೆ ಆರೋಪಿಗಳಿಗೆ ಹೇಳಿದ್ದಾರೆ. ಯಾವಾಗ ಹೆಚ್ಚಿನ ಟಿಕೆಟ್ ತರಿಸಿದ್ರಾ ರೆಡ್ ಹ್ಯಾಂಡ್ ಆಗಿ ಹಿಡಿದುಕೊಂಡು ಗೋವಿಂದರಾಜನಗರ ಠಾಣೆಗೆ ಕರೆದುಕೊಂಡು ಹೋಗಿದ್ರು. ಬಳಿಕ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ರು. ಆರೋಪಿಗಳಾದ ಶಂಕರ್ ,ಸುರೇಶ್ ವಿಚಾರಣೆ ಮಾಡಿದ್ದ ಪೊಲೀಸರು ಬಂಧನ ಮಾಡಿದ್ರು. ಈ ವೇಳೆ ಸುರೇಶ್ , ಕಾನ್ಸ್ ಟೇಬಲ್ ಗಳಾದ ವೆಂಕಟಗಿರಿಗೌಡ ಹಾಗೂ ರವಿಚಂದ್ರ ಟಿಕೆಟ್ ಕೊಟ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಆಗ ಇಬ್ಬರು ಕಾನ್ಸ್ ಟೇಬಲ್ ಮಾಹಿತಿ ಕಲೆ ಹಾಕಿ ,ವಿಚಾರಣೆಗೆ ಹಾಜರಾಗಲ್ಲೂ ನೊಟೀಸ್ ಜಾರಿ ಮಾಡಿದ್ರು.

44

ಗೋವಿಂದರಾಜನಗರ ಪೊಲೀಸರಿಗೆ ತನಿಖೆ ವೇಳೆ ಮಹತ್ವದ ಅಂಶ ಪತ್ತೆಯಾಗಿದೆ. ಆರೋಪಿಗಳು ಟಿಕೆಟ್ ಮಾರಾಟ ಮಾಡಲು ಪ್ರತ್ಯೇಕ ವಾಟ್ಸಪ್ ಗ್ರೂಪ್ ರಚಿಸಿದ್ರು. ಕಳ್ಳ ವ್ಯವಹಾರದ ಬಗ್ಗೆ ವಾಟ್ಸಪ್ ಗ್ರೂಪ್ ನಲ್ಲಿ ಮತ್ತಷ್ಟು ಮಾಹಿತಿ ಪತ್ತೆಯಾಗಿದೆ. ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡಿ ಅಕ್ರಮವಾಗಿ ಹಣ ಸಂಪಾದನೆ ಮಾಡೋ ಮಾರ್ಗ ಹಿಡಿದಿದ್ದರು.

ಸದ್ಯ ಇಲಾಖೆ ಮರ್ಯಾದೆ ತೆಗೆದ ಇಬ್ಬರು ಕಾನ್ಸ್ ಟೇಬಲ್ ಅಮಾನತ್ತಿಗೆ ಪಶ್ಚಿಮ ವಿಭಾಗ ಡಿಸಿಪಿ ಶಿಫಾರಸ್ಸು ಮಾಡಿದ್ದಾರೆ‌. ಇದರ ಹಿಂದೆ ಹಿರಿಯ ಅಧಿಕಾರಿಗಳು ಭಾಗಿಯಾಗಿರೋ ಶಂಕೆ ಕೂಡ ಇದ್ದು ,ತನಿಖೆ ಮುಂದುವರೆದಿದೆ. ಗೋವಿಂದರಾಜನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read more Photos on
click me!

Recommended Stories