ರಾಜ್ಯ ಖುಷಿಪಡೋ ಸುದ್ದಿ ಕೊಟ್ಟ ನಿರೂಪಕಿ ದಿವ್ಯಾ ವಸಂತಳ ಮತ್ತೊಂದು ಸುದ್ದಿ!

Published : May 15, 2025, 04:23 PM IST

ಜ್ಯೋತಿಷಿ ಆನಂದ್ ಗುರೂಜಿಗೆ ದಿವ್ಯಾ ವಸಂತ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡಿದೆ ಎನ್ನುವ ಆರೋಪದ ಮೇರೆಗೆ ಚಿಕ್ಕಜಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಶ್ಲೀಲ ವಿಡಿಯೋ ಬಿಡುಗಡೆ ಮಾಡುವ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಬಂಧನ ಭೀತಿಯಿಂದ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರೆ.

PREV
15
ರಾಜ್ಯ ಖುಷಿಪಡೋ ಸುದ್ದಿ ಕೊಟ್ಟ ನಿರೂಪಕಿ ದಿವ್ಯಾ ವಸಂತಳ ಮತ್ತೊಂದು ಸುದ್ದಿ!

ರಾಜ್ಯ ಖುಷಿಪಡೋ ಸುದ್ದಿ ಕೊಟ್ಟ ನಿರೂಪಕಿ  ದಿವ್ಯಾ ವಸಂತ ಸಂಬಂಧಿಸಿದ ದೊಡ್ಡ ಸುದ್ದಿ ಇದು. ಕಂಬಿ ಎಣಿಸಿದ್ರೂ ದಿವ್ಯಾ ವಸಂತಗೆ ಬಂದಿಲ್ವಾ? ದಿವ್ಯಾ ವಸಂತ ಮೇಲೆ ಮತ್ತೆ ಬ್ಲ್ಯಾಕ್ಮೇಲ್ ಆರೋಪ ಕೇಳಿಬಂದಿದೆ. ಖ್ಯಾತ  ಜ್ಯೋತಿಷಿ ಆನಂದ್ ಗುರೂಜಿಗೆ ದಿವ್ಯಾ ಗ್ಯಾಂಗ್ ಬ್ಲ್ಯಾಕ್ಮೇಲ್ ಮಾಡಿದೆ ಎನ್ನುವ ಆರೋಪ ಇದ್ದು ಈ ಸಂಬಂಧ ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್  ಮಾಡಿದ್ದಾರೆಂದು ಆನಂದ್ ಗುರೂಜಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಆರೋಪಿ ನಂ.1 ಕೃಷ್ಣಮೂರ್ತಿ, ಆರೋಪಿ ನಂ.2 ದಿವ್ಯಾ ವಸಂತ್ ಆಗಿದ್ದು, ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ ತನಿಖೆ ನಡೆಯುತ್ತಿದೆ.

25

ಕಳೆದ ತಿಂಗಳು ಏಪ್ರಿಲ್ 18ರಂದೇ ಚಿಕ್ಕಜಾಲ ಠಾಣೆಯಲ್ಲಿ FIR ದಾಖಲಾಗಿದ್ದು, ಕೇಸ್ ದಾಖಲಾಗ್ತಿದ್ದಂತೆ ವಿಚಾರಣೆಗೆ ಬರುವಂತೆ ಆರೋಪಿಗಳಿಗೆ ನೋಟಿಸ್ ನೀಡಲಾಗಿದೆ. ಅಶ್ಲೀಲ ವಿಡಿಯೋ ಇದೆ ಎಂದು ಬ್ಲಾಕ್ಮೇಲ್ ಮಾಡಿರುವ ದಿವ್ಯಾ ವಸಂತ ಗ್ಯಾಂಗ್ ಅಶ್ಲೀಲ ವೀಡಿಯೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಡೋದಾಗಿ ಬೆದರಿಕೆ ಹಾಕಿ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾರಂತೆ. ಹಣ ಕೊಡದೇ ಇದ್ದಿದ್ದಕ್ಕೆ ಕೊಲೆ ಬೆದರಿಕೆ, ಜೊತೆಗೆ ಯುಟ್ಯೂಬ್ ಚಾನಲ್‌ ಸಾಮ್ರಾಟ್ ಟಿವಿ ಮತ್ತು  ಹೆಸರಿನ ಯೂಟ್ಯೂಬ್ ಚಾನೆಲ್ ಗಳಲ್ಲಿ ಚಾರಿತ್ರ್ಯ ತೇಜೋವಧೆ ಮೂಲಕ ಮಾನಹಾನಿ ಸುದ್ದಿ ಪ್ರಸಾರ  ಮಾಡಿದ್ದಾರೆ ಎಂದು ಆನಂದ್ ಗುರೂಜಿ ದೂರಿನ ಆಧಾರದಲ್ಲಿ FIR ದಾಖಲಾಗಿದೆ. 

35

 2024ರ ಆ.28ರಂದು ಮಾನನಷ್ಟದ ಸುದ್ದಿ ಪ್ರಸಾರವಾಗಿದೆ. ಕೋರ್ಟ್ ತಡೆಯಾಜ್ಞೆ ತಂದರೂ ಸುದ್ದಿ ಪ್ರಸಾರ ಮಾಡಿದ್ದಾರೆ ಎಂದು ಕೃಷ್ಣ ಮೂರ್ತಿ, ದಿವ್ಯಾ ವಸಂತ ಮೇಲೆ ಆರೋಪ ಮಾಡಲಾಗಿದೆ. ಏಪ್ರಿಲ್‌ ನಲ್ಲಿ ಮತ್ತೆ ಆನಂದ್ ಗುರೂಜಿ ವಿರುದ್ಧ ಸುದ್ದಿ ಪ್ರಸಾರ ಮಾಡಲಾಗಿದೆಯಂತೆ ಅಶ್ಲೀಲ ಪದ ಬಳಸಿ ಸುದ್ದಿ ಪ್ರಸಾರ ಮಾಡಲಾಗಿದೆ. 3ನೇ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. 2ನೇ ಬಾರಿಗೆ ಸುದ್ದಿ ಪ್ರಸಾರ ಮಾಡದಂತೆ ಆನಂದ್ ಗುರೂಜಿ  ತಡೆಯಾಜ್ಞೆ ತಂದಿದ್ದಾರೆ. ತಡೆಯಾಜ್ಞೆ ನಂತರ ಮತ್ತೊಮ್ಮೆ ಚಾನಲ್ನಲ್ಲಿ ಸುದ್ದಿ ಪ್ರಸಾರ ಮಾಡಲಾಗಿದೆ ಎಂದು ದಿವ್ಯಾ ವಸಂತ, ಕೃಷ್ಣಮೂರ್ತಿ ಇಬ್ಬರ ವಿರುದ್ಧ  ಆನಂದ್ ಗುರೂಜಿ ದೂರು ನೀಡಿದ್ದಾರೆ.

45

ಆನಂದ್ ಗುರೂಜಿಗೆ ಹಣಕ್ಕೆ ಬೇಡಿಕೆ ಇಟ್ಟು ಮಾತನಾಡಿರುವ ಆಡಿಯೋ ವೈರಲ್ ಆಗಿದ್ದು, ಗುರೂಜಿ ಆಡಿಯೋ ಎಡಿಟ್ ಮಾಡಿ ಪ್ರಸಾರ ಮಾಡಲಾಗಿದೆ. ನಾನು ಸನ್ಯಾಸಿಯಲ್ಲ ಅನ್ನೋ ಆಕ್ರೋಶದ ಮಾತು ಎಂದು ಗುರೂಜಿ ಆಡಿಯೋ ವೈರಲ್ ಮಾಡಿದ್ದ ಗ್ಯಾಂಗ್. ಅಶ್ಲೀಲ ವಿಡಿಯೋ ಬಗ್ಗೆ ಕೇಳಿ ಹಣಕ್ಕೆ ಬೇಡಿಕೆಯಿಟ್ಟಾಗ ನಾನು ತಲೆ ಕಡೆಸಿಕೊಳ್ಳಲ್ಲ ಎಂದಿದ್ದ  ಆನಂದ್ ಗುರೂಜಿ ಮಾತು ಆಡಿಯೋದಲ್ಲಿದೆ. ಇದೀಗ FIR ದಾಖಲಾಗಿ ವಿಚಾರಣೆಗೆ ಬನ್ನಿ ಎನ್ನುತ್ತಿದ್ದಂತೆಯೇ  ಬಂಧನ ಭೀತಿ ಹಿನ್ನೆಲೆಯಲ್ಲಿ ದಿವ್ಯಾ ವಸಂತ ಮತ್ತು ಕೃಷ್ಣಮೂರ್ತಿ ನಾಪತ್ತೆಯಾಗಿದ್ದಾರಂತೆ. ಕಳೆದ ವರ್ಷ ದಿವ್ಯಾ ವಸಂತ ಮಸಾಜ್ ಪಾರ್ಲರ್ನಲ್ಲಿ ಸುಲಿಗೆಗಿಳಿದ ಆರೋಪದ ಮೇಲೆ ಬಂಧನವಾಗಿದ್ದರು. ಜೈಲಿಗೂ ಹೋಗಿ ಬಂದಿದ್ದರು. ಕೇರಳದಲ್ಲಿ ತಲೆಮರೆಸಿಕೊಂಡಿದ್ದ ದಿವ್ಯಾ ವಸಂತ 15 ಲಕ್ಷ ಸುಲಿಗೆ ಯತ್ನಿಸಿದ್ದ ಕೇಸ್ನಲ್ಲಿ ಅರೆಸ್ಟ್. ಬೆದರಿಕೆ, ಬ್ಲ್ಯಾಕ್ಮೇಲ್ ಕೇಸ್ ದಾಖಲಾಗಿತ್ತು.
 

55

ನನಗೆ ಮೇಲಿಂದ ಮೇಲೆ ಬ್ಲ್ಯಾಕ್ಮೇಲ್ ಆಗುತ್ತಿದೆ.ದಿವ್ಯಾ ವಸಂತ, ಶಿಲ್ಪಾ ಹಿರೇಮಠರಿಂದ ವಿಡಿಯೋ ಪ್ರಸಾರವಾಗಿದೆ. ಕೃಷ್ಣಮೂರ್ತಿ ಅವರ ಸಾಮ್ರಾಟ್ ಟಿವಿಯಿಂದ ಬೆದರಿಕೆ ಇದೆ. ಸರ್ಕಾರಿ ಜಾಗದಲ್ಲಿ ಆಶ್ರಮವಿದೆ ಎಂದು ಬ್ಲ್ಯಾಕ್ಮೇಲ್, ಹೆಣ್ಣು ಮಗಳ ಜತೆ ನನ್ನ ಫೇಕ್ ವಿಡಿಯೋ ಪ್ರಸಾರ ಮಾಡ್ತೇವೆ ಎಂತ ಬೆದರಿಕೆ ಇದೆ. ಮಾನಸಿಕ ಹಿಂಸೆ, ಅಪಪ್ರಚಾರ ಎಂದಿರುವ ಆನಂದ ಗುರೂಜಿ ಮಾನಕಷ್ಟ ಮೊಕದ್ದಮೆ ಕೇಸ್ ದಾಖಲಿಸಲು ಸಿದ್ಧ ಎಂದು ಸುವರ್ಣ ನ್ಯೂಸ್‌ಗೆ ಆನಂದ್ ಗುರೂಜಿ ಹೇಳಿಕೆ ನೀಡಿದ್ದಾರೆ.
 

Read more Photos on
click me!

Recommended Stories