ಲವ್ ಜಿಹಾದ್‌: ಮದ್ವೆಯಾಗಿದ್ರೂ ಹಿಂದೂ ಹುಡುಗಿ ಜತೆ ಲವ್ ನಾಟಕವಾಡ್ದ ಶಕೀಬ್; ಆತ್ಮಹತ್ಯೆ ಮಾಡ್ಕೊಂಡ ಪಿಂಕಿ ಗುಪ್ತಾ

First Published | Sep 5, 2023, 4:02 PM IST

ಲಿವ್ ಇನ್ ಪಾರ್ಟ್‌ನರ್ ಶಕೀಬ್‌ ಜತೆ ಇದ್ದ ಪಿಂಕಿ ಗುಪ್ತಾ ಆಗಸ್ಟ್ 31 ರಂದು ತನ್ನ ಘಾಜಿಯಾಬಾದ್ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಇನ್ನು, ಪೊಲೀಸರಿಗೆ ಈ ಪ್ರಕರಣದಲ್ಲಿ ಸೂಸೈಡ್‌ ನೋಟ್‌ ಸಿಕ್ಕಿದೆ.

ಆತ್ಮಹತ್ಯೆ ಪ್ರಕರಣವೊಂದರ ತನಿಖೆಯ ವೇಳೆ ಉತ್ತರ ಪ್ರದೇಶ ಪೊಲೀಸರಿಗೆ ಆಘಾತಕಾರಿ ಮಾಹಿತಿ ಸಿಕ್ಕಿದೆ. ಸೂಸೈಡ್‌ ಪ್ರಕರಣದಲ್ಲಿ ಸಂತ್ರಸ್ತೆಯನ್ನು ಪಿಂಕಿ ಗುಪ್ತಾ ಎಂದು ಗುರುತಿಸಲಾಗಿದ್ದು, ಆಗಸ್ಟ್ 31 ರಂದು ತನ್ನ ಘಾಜಿಯಾಬಾದ್ ನಿವಾಸದಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಈಕೆ ಪತ್ತೆಯಾಗಿದ್ದಾಳೆ. ಇನ್ನು, ಪೊಲೀಸರಿಗೆ ಈ ಪ್ರಕರಣದಲ್ಲಿ ಸೂಸೈಡ್‌ ನೋಟ್‌ ಸಿಕ್ಕಿದೆ. 

ಪೊಲೀಸರಿಗೆ ದೊರೆತ ಕೈ ಬರಹದ ಟಿಪ್ಪಣಿಯಲ್ಲಿ, ಸಂತ್ರಸ್ತೆ ಪಿಂಕಿ ಗುಪ್ತಾ ತನ್ನ ಈ ಆತ್ಮಹತ್ಯೆಗೆ ಲಿವ್-ಇನ್ ಪಾರ್ಟ್‌ನರ್‌ ಶಕೀಬ್‌ ಅಲಿ ಕಾರಣ ಎಂದು ಆರೋಪಿಸಿದ್ದಾಳೆ. ಜಿಮ್‌ನಲ್ಲಿ ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ 24 ವರ್ಷದ ಮಹಿಳೆ ನಾಲ್ಕು ವರ್ಷಗಳ ಹಿಂದೆ ಶಕೀಬ್ ಅಲಿಯನ್ನು ಭೇಟಿಯಾದರು.  ಇಬ್ಬರೂ ಒಂದೇ ಜಿಮ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಪ್ರೀತಿಯಲ್ಲಿ ಬಿದ್ದ ನಂತರ ವೈಶಾಲಿ ಪ್ರದೇಶದಲ್ಲಿ ಒಂದೇ ಫ್ಲಾಟ್ನಲ್ಲಿ ಒಟ್ಟಿಗೆ ಇದ್ದು, ಲಿವ್ ಇನ್ ಪಾರ್ಟ್‌ನರ್ ಆಗಿದ್ದರು. ಪಿಂಕಿ ತನ್ನ ಮನೆಯನ್ನು ತೊರೆದು ಕಳೆದ ನಾಲ್ಕು ವರ್ಷಗಳಿಂದ ಆತನ ಜತೆ ಇದ್ದಳು ಎಂದು ವರದಿಯಾಗಿದೆ. 

Tap to resize

ಮದ್ವೆಯಾಗಿದ್ರೂ ಪಿಂಕಿ ಜತೆಗಿದ್ದ ಶಕೀಬ್ ಅಲಿ
ತನ್ನನ್ನು ಮದುವೆಯಾಗುವಂತೆ ಪಿಂಕಿ ಗುಪ್ತಾ ಶಕೀಬ್‌ಗೆ  ಒತ್ತಡ ಹೇರುತ್ತಿದ್ದಳು, ಆದರೆ ಆತ ನಿನ್ನ ಜತೆ ಮದ್ವೆಯಾಗಲು ಇಷ್ಟವಿಲ್ಲ. ಸ್ನೇಹಿತೆಯಾಗಲು ಮಾತ್ರ ಬಯಸಿದ್ದಾಗಿ ಹೇಳಿದ್ದಾನೆ. ಆದರೆ, ಆತನಿಗೆ ಮೊದಲೇ ಮದುವೆಯಾಗಿದೆ ಎನ್ನುವುದನ್ನು ಇತ್ತೀಚೆಗಷ್ಟೇ ಪಿಂಕಿ ಗುಪ್ತಾ ಅರಿತುಕೊಂಡಿದ್ದಾಳೆ. ಈ ಬಗ್ಗೆ ಆತ ಸುಳ್ಳು ಹೇಳಿದ್ದು, ಇದು ಬಹಿರಂಗವಾದ ಬಳಿಕ ಪಿಂಕಿಗೆ ಆಘಾತವಾಗಿದೆ ಹಗೂ ಅವರ ಸಂಬಂಧದಲ್ಲಿ ಬಿರುಕಿಗೆ ಕಾರಣವಾಗಿದೆ. ಈ ಹಿನ್ನೆಲೆ ಪಿಂಕಿ ಗುಪ್ತಾ ಆತ್ಮಹತ್ಯೆ ಮಾಡಿಕೊಳ್ಳೋ ಹೆಜ್ಜೆ ಇಟ್ಟಿದ್ದಾಳೆ ಎಂದು ವರದಿಯಾಗಿದೆ. 

ದುರಂತ ನಡೆದ ಘಟನೆಯ ರಾತ್ರಿ, ಇಬ್ಬರೂ ಒಟ್ಟಿಗೆ ಊಟ ಮಾಡಿದರು, ನಂತರ ಶಕೀಬ್ ಮನೆಯಿಂದ ಹೊರಗೆ ಹೋದಾಗ ಪಿಂಕಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದಾಳೆ. ಈ ಬಗ್ಗೆ ನೆರೆಹೊರೆಯವರು ಆತನಿಗೆ ಕರೆ ಮಾಡಿ ತಿಳಿಸಿದ್ದಾರೆ.

ಪೊಲೀಸರಿಗೆ ದೊರೆತ ಡೆತ್‌ ನೋಟ್‌
ಘಟನೆ ಕುರಿತು ಮಾಹಿತಿ ಪಡೆದ ಸ್ಥಳೀಯ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ. ಕ್ಷಿಪ್ರ ತನಿಖೆಯ ನಂತರ, ಅಧಿಕಾರಿಗಳು ಡೈರಿ ಮತ್ತು ಫೋನ್ ಅನ್ನು ಕಂಡುಕೊಂಡರು. ಯುವತಿ 2018 ರಿಂದ ಡೈರಿ ಬರೆಯುತ್ತಿದ್ದಳು ಎಂದು ಎಸಿಪಿ ಸ್ವತಂತ್ರ ಕುಮಾರ್ ಸಿಂಗ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನೊಂದೆಡೆ, ಶಕೀಬ್‌ನನ್ನು ವಶಕ್ಕೆ ಪಡೆಯಲಾಗಿದ್ದು, ಈ ವಿಚಾರದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ.

Latest Videos

click me!