ಆಕೆ ವಯಸ್ಸು 24. ಇತ್ತೀಚೆಗಷ್ಟೆ ಗಗನಸಖಿಯಾಗಿ ನೇಮಕಗೊಂಡಿದ್ದಳು. ತನ್ನ ಕೆಲಸದ ಜೊತೆ ಸಾಮಾಜಿಕ ಜಾಲತಾಣದಲ್ಲೂ ಸಕ್ರಿಯವಾಗಿದ್ದಳು. ಆದರೆ ಏಕಾಏಕಿಯಾಗಿ ಅಪಾರ್ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಆಕರ್ಷಕ ವ್ಯಕ್ತಿತ್ವ, ಮೊದಲ ನೋಟದಲ್ಲೇ ಗಮನಸೆಳೆಯುವ ಸೌಂದರ್ಯ, ಹಲವು ಕನಸುಗಳನ್ನು ಕಟ್ಟಿಕೊಂಡು ಮುಂಬೈಗೆ ಬಂದ ರೂಪಲ್ ಒಗ್ರೆ, ಗಗನಸಖಿಯಾಗಿ ವೃತ್ತಿ ಜೀವನ ಆರಂಭಿಸಿದ್ದಳು. ಆದರೆ ಇದೀಗ ದುರಂತ ಅಂತ್ಯಕಂಡಿದ್ದಾಳೆ.
28
ವಯಸ್ಸು ಕೇವಲ 24. ಎಪ್ರಿಲ್ ತಿಂಗಳಲ್ಲಿ ಗಗನಸಖಿಯಾಗಿ ನೇಮಕಗೊಂಡಿದ್ದಳು. ತರಬೇತಿ ಅವಧಿಯಲ್ಲಿದ್ದ ರೂಪಾಲ್ ಒಗ್ರೆ ಇತ್ತೀಚೆಗಷ್ಟೇ ಕೆಲಸ ಖಾಯಂ ಆಗಿತ್ತು.
38
ಅಂಧೇರಿಯ ಎನ್‍ಜಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದ ಈಕೆ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಬೆಚ್ಚಿ ಬೀಳಿಸುವ ದೃಶ್ಯ ನೋಡಿದ್ದಾರೆ.
48
ರೂಪಾಲ್ ಒಗ್ರೆಯ ಕತ್ತು ಸೀಳಲಾಗಿದೆ. ಉಡುಪುಗಳು ಹರಿದಿದೆ. ಮೃತದೇಹ ಪರಿಶೀಲನೆ ನಡೆಸಿದ ಮುಂಬೈ ಪೊಲೀಸರು ಮರಣೋತ್ತರ ಪರೀಕ್ಷೆಗೆ ರಾಜವಾಡಿ ಆಸ್ಪತ್ರೆಗೆ ರವಾನಿಸಿದ್ದಾರೆ.
58
ಪೊವಾಯಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಆರಂಭಗೊಂಡಿದೆ. ರೂಪಾಲ್ ಒಗ್ರೆ ತಮ್ಮ ಫ್ಲ್ಯಾಟ್‌ನಲ್ಲಿ ಸಹೋದರಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಜೊತೆ ವಾಸವಿದ್ದಳು.
68
ಕೆಲ ದಿನಗಳ ಹಿಂದೆ ಸಹೋದರಿ ಹಾಗೂ ಆಕೆಯ ಬಾಯ್‌ಫ್ರೆಂಡ್ ತಮ್ಮ ಹುಟ್ಟೂರಿಗೆ ತೆರಳಿದ್ದಳು. ಮನೆಯಲ್ಲಿ ಒಬ್ಬಳೇ ಇದ್ದ ರೂಪಾಲ್ ಇದೀಗ ಶವವಾಗಿ ಪತ್ತೆಯಾಗಿದ್ದಾಳೆ.
78
ಅಪಾರ್ಟ್‌ಮೆಂಟ್ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇನ್ನು ಗಗನಸಖಿಯಾಗಿ ಕೆಲಸ ಮಾಡುತ್ತಿದ್ದ ಸಹದ್ಯೋಗಿಗಳನ್ನು ವಿಚಾರಣೆ ನಡೆಸುವ ಸಾಧ್ಯತೆ ಇದೆ.
88
ಗಗನಸಖಿಯನ್ನು ಹತ್ಯೆ ಮಾಡಿದ ದುಷ್ಕರ್ಮಿಗಳು ಆಕೆಯ ಮೊಬೈಲ್ ಫೋನ್ ನಾಶ ಮಾಡಿದ್ದಾರೆ. ಹೀಗಾಗಿ ಹಲುವ ಸಾಕ್ಷ್ಯಗಳು ನಾಶವಾಗಿದೆ. ಇದೀಗ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿ ತನಿಖೆ ನೆಡಸಲು ಮುಂದಾಗಿದ್ದಾರೆ.