ಜಪಾನ್ ಕಾದಂಬರಿ ಓದಿ ಸಹೋದರ-ತಾಯಿಗೆ ಗುಂಡಿಟ್ಟಳು! ನಾಗವಲ್ಲಿ ಕತೆ

First Published | Aug 30, 2020, 10:15 PM IST

ಲಕ್ನೋ(ಆ. 30) ಪಬ್ ಜೀ ಸೇರಿದಂತೆ ಕೆಲ ಹುಚ್ಚಾಟಗಳನ್ನು ಆಡುತ್ತ ಹತ್ಯೆ ಮಾಡಲು ಯತ್ನ ಮಾಡಿದ ಘಟನೆಗಳನ್ನು ನೋಡಿದ್ದೇವೆ. ಆದರೆ ಇದು ಕಾದಂಬರಿ ಆಧಾರಿತ ಪ್ರಕರಣ. ಬಾಲಕಿಯೊಬ್ಬಳು ತಾನು ಕಾದಂಬರಿಯ ಪಾತ್ರ ಎಂದು ಅಂದುಕೊಂಡು ತಾಯಿ ಮತ್ತು ಅಣ್ಣನನ್ನು ಗುಂಟಿಟ್ಟು ಹತ್ಯೆ ಮಾಡಿದ್ದಾಳೆ.

ಓಸಾಬು ಡಜೈ ಬರೆದ ಜಪಾನ್ ಕಾದಂಬರಿ ' ನೋ ಲಾಂಗರ್ ಹ್ಯುಮನ್' ಕಾದಂಬರಿ ಓದಿ ಬಾಲಕಿ ತನ್ನವರನ್ನೇ ಹತ್ಯೆ ಮಾಡಿದ್ದಾಳೆ.
ಖಿನ್ನತೆಗೆ ಒಳಗಾಗಿದ್ದ ಬಾಲಕಿ ಪೊಲೀಸರ ಎದುರು ತಾನು ಕಾದಂಬರಿ ಓದಿಯೇ ಹತ್ಯೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.
Tap to resize

ಕಾದಂಬರಿಯಲ್ಲಿ ಒಬಾ ಯೋಜೋ ಎನ್ನುವ ಪಾತ್ರವೊಂದು ಬರುತ್ತದೆ. ಮಾನವನಾಗಲು ಯತ್ನ ಮಾಡುವ ಪಾತ್ರ ವಿಫಲವಾಗುತ್ತದೆ. ಬಾಲಕಿ ತನ್ನನ್ನು ತಾನು ಆ ಪಾತ್ರ ಎಂದು ಅಂದುಕೊಳ್ಳುತ್ತಾಳೆ.
ಉಳಿದ ಪಾತ್ರಗಳನ್ನು ತನ್ನ ಸಹೋದರ ಮತ್ತು ತಾಯಿ ಎಂದು ಭಾವಿಸಿ ಕೃತ್ಯ ಎಸಗಿದ್ದಾಳೆ.
ಆಕೆಯ ತಾಯಿ ಮತ್ತು ಸಹೋದರ ಶನಿವಾರ ರಾತ್ರಿ ಊಟ ಮಾಡಿ ಮಲಗಿದ್ದರು. ಈ ವೇಳೆ ಸ್ನಾನ ಮಾಡಿದ ಬಾಲಕಿ ನಂತರ ತಾನು ಮನುಷ್ಯನಾಗಿರಲು ಲಾಯಕ್ಕಿಲ್ಲ ಎಂದು ನೋಟ್ ಬುಕ್ ನಲ್ಲಿ ಬರೆದಿದ್ದಾಳೆ.
ನಂತರ ಐದು ಬುಲೆಟ್ ಗಳನ್ನು ಲೋಡ್ ಮಾಡಿ ಮೂರು ಸುತ್ತು ಗುಂಡು ಹಾರಿಸಿದ್ದಾಳೆ. ಒಂದು ಗುಂಡು ತನ್ನನ್ನು ತಾನು ನೋಡಿಕೊಳ್ಳುತ್ತಿರುವ ಕನ್ನಡಿಗೆ ತಾಗಿದ್ದರೆ ಇನ್ನೆರಡು ಗುಂಡಿಗೆ ತಾಯಿ ಮತ್ತು ಸಹೋದರ ಬಲಿಯಾಗಿದ್ದಾರೆ.
ತಾನು ರೇಜರ್ ಬಳಸಿ ಗಾಯ ಮಾಡಿಕೊಂಡಿದ್ದು ಆಕೆಯನ್ನು ರಕ್ಷಣೆ ಮಾಡಲಾಗಿದೆ. ಚುರುಕಿನ ವಿದ್ಯಾರ್ಥಿನಿಯಾಗಿದ್ದ ಆಕೆ ನ್ಯಾಶನಲ್ ಲೇವಲ್ ಶೂಟರ್ ಆಗಿಯೂ ಗುರುತಿಸಿಕೊಂಡಿದ್ದಳು.

Latest Videos

click me!