ಐರ್ಲೆಂಡ್-ಜಿಂಬಾಬ್ವೆ ಮ್ಯಾಚ್‌ಗೆ ಮಳೆ ಅಡ್ಡಿ; ಪಂದ್ಯ ರದ್ದಾದ್ರೆ ಆಸ್ಟ್ರೇಲಿಯಾಗೆ ಇದೆಯಾ ಚಾನ್ಸ್? ಹೀಗಿದೆ ನೋಡಿ ಸೂಪರ್-8 ಲೆಕ್ಕಾಚಾರ

Published : Feb 17, 2026, 03:53 PM IST

ಪಲ್ಲೆಕೆಲೆ: ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಮಹತ್ವದ ಪಂದ್ಯದಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿದ್ದು, ಒಂದು ವೇಳೆ ಪಂದ್ಯ ರದ್ದಾದರೇ ಯಾರಿಗೆ ಲಾಭ? ಸೂಪರ್-8 ಲೆಕ್ಕಾಚಾರ ಏನು ನೋಡೋಣ ಬನ್ನಿ. 

PREV
16
ಇಂದು ಐರ್ಲೆಂಡ್-ಜಿಂಬಾಬ್ವೆ ಮ್ಯಾಚ್

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ 'ಬಿ' ಗುಂಪಿನ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯದ ಮೇಲೆ ಕ್ರಿಕೆಟ್ ಅಭಿಮಾನಿಗಳು ಗಮನ ಹರಿಸಿದ್ದಾರೆ. ಯಾಕೆಂದರೆ ಈ ಪಂದ್ಯದ ಫಲಿತಾಂಶ ಆಸ್ಟ್ರೇಲಿಯಾದ ಸೂಪರ್-8 ಅಳಿವು-ಉಳಿವಿನ ವಿಚಾರವನ್ನು ನಿರ್ಣಯಿಸಲಿದೆ.

26
ಈಗಾಗಲೇ ಸೂಪರ್-8 ಹಂತಕ್ಕೆ ಲಗ್ಗೆಯಿಟ್ಟಿರುವ ಶ್ರೀಲಂಕಾ

ಸದ್ಯ 'ಬಿ' ಗುಂಪಿನಲ್ಲಿ ಟೂರ್ನಿಗೆ ಸಹ ಆತಿಥ್ಯ ವಹಿಸಿರುವ ಶ್ರೀಲಂಕಾ, ಆಡಿದ ಮೂರು ಪಂದ್ಯಗಳನ್ನು ಗೆದ್ದು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ಸೂಪರ್-8 ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಇನ್ನೊಂದು ಸ್ಥಾನಕ್ಕಾಗಿ ಜಿಂಬಾಬ್ವೆ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ಪೈಪೋಟಿಯಿದೆ.

36
ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿರುವ ಜಿಂಬಾಬ್ವೆ

ಸದ್ಯ ಜಿಂಬಾಬ್ವೆ ತಂಡವು ತಾನಾಡಿದ ಎರಡು ಪಂದ್ಯಗಳನ್ನು ಗೆದ್ದು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಇನ್ನೊಂದೆಡೆ ಆಸ್ಟ್ರೇಲಿಯಾ ತಂಡವು ಆಡಿದ ಮೂರು ಪಂದ್ಯಗಳಲ್ಲಿ ಒಂದು ಗೆಲುವು ಹಾಗೂ ಎರಡು ಸೋಲು ಸಹಿತ 2 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

46
ಇಂದಿನ ಪಂದ್ಯ ಮಳೆಯಿಂದ ರದ್ದಾದರೇ?

ಇದೀಗ ಪಲ್ಲೆಕೆಲೆ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ಜಿಂಬಾಬ್ವೆ ಹಾಗೂ ಐರ್ಲೆಂಡ್ ನಡುವಿನ ಪಂದ್ಯವು ಇಂದು ಮಧ್ಯಾಹ್ನ 3 ಗಂಟೆಯಿಂದ ಆರಂಭವಾಗಬೇಕಿತ್ತು. ಆದರೆ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗಿದ್ದು ಇನ್ನೂ ಟಾಸ್ ಕೂಡಾ ನಡೆದಿಲ್ಲ. ಒಂದು ವೇಳೆ ಈ ಪಂದ್ಯ ರದ್ದಾದರೇ ಯಾರಿಗೆ ಲಾಭ ಎನ್ನುವುದನ್ನು ನೋಡೋಣ ಬನ್ನಿ.

56
ಸೂಪರ್-8 ಲೆಕ್ಕಾಚಾರ ಏನು?

ಸದ್ಯ ಜಿಂಬಾಬ್ವೆ ತಂಡವು ಈ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಅಧಿಕೃತವಾಗಿ ಸೂಪರ್-8 ಹಂತಕ್ಕೆ ಲಗ್ಗೆಯಿಡಲಿದೆ. ಒಂದು ವೇಳೆ ಜಿಂಬಾಬ್ವೆ ತಂಡವು ಐರ್ಲೆಂಡ್‌ಗೆ ಶರಣಾದರೇ, ಆಸೀಸ್ ಸೂಪರ್-8 ಹಂತದ ಕನಸು ಜೀವಂತವಾಗಿರಲಿದೆ. ಯಾಕೆಂದರೆ ಆಸ್ಟ್ರೇಲಿಯಾ ತಂಡವು ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಓಮಾನ್ ತಂಡವನ್ನು ಎದುರಿಸಲಿದೆ. ಆ ಪಂದ್ಯದಲ್ಲಿ ಆಸೀಸ್ ಭಾರೀ ಅಂತರದಲ್ಲಿ ಗೆದ್ದರೇ ಸೂಪರ್-8 ಪ್ರವೇಶಿಸಬಹುದು. ಇನ್ನು ಜಿಂಬಾಬ್ವೆ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ.

66
ಮಳೆಯಿಂದ ಇಂದಿನ ಪಂದ್ಯ ರದ್ದಾದರೇ ಆಸ್ಟ್ರೇಲಿಯಾ ಟೂರ್ನಿಯಿಂದ ಔಟ್!

ಇನ್ನು ಒಂದು ವೇಳೆ ಮಳೆಯಿಂದ ಪಂದ್ಯ ರದ್ದಾದರೇ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡಗಳು ತಲಾ ಒಂದೊಂದು ಅಂಕ ಹಂಚಿಕೊಳ್ಳಲಿವೆ. ಆಗ ಜಿಂಬಾಬ್ವೆ ಬಳಿ ಐದು ಅಂಕಗಳಾಗಲಿದ್ದು, ಸೂಪರ್-8 ಹಂತಕ್ಕೆ ಅಧಿಕೃತವಾಗಿ ಪ್ರವೇಶ ಪಡೆಯಲಿದೆ. ಇದಾದ ಬಳಿಕ ಆಸ್ಟ್ರೇಲಿಯಾ, ಓಮಾನ್ ಎದುರು ಗೆದ್ದರೂ ಕಾಂಗರೂ ಪಡೆ ಬಳಿ 4 ಅಂಕಗಳಾಗಲಿದ್ದು, ಸೂಪರ್-8 ಹಂತಕ್ಕೇರಲು ಸಾಧ್ಯವಾಗುವುದಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories