ಯುಜುವೇಂದ್ರ ದಾಂಪತ್ಯ ಜೀವನದಲ್ಲಿ ಬಿರುಕು; ಚಹಲ್‌ ಸರ್‌ ನೇಮ್ ಕೈಬಿಟ್ಟ ಧನಶ್ರೀ ವರ್ಮಾ..!

First Published | Aug 18, 2022, 3:02 PM IST

ಬೆಂಗಳೂರು: ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ದಾಂಪತ್ಯ ಜೀವನದಲ್ಲಿ ಎಲ್ಲವೂ ಸರಿಯಿಲ್ಲವಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ. ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗಿನ ದಿನಗಳಲ್ಲಿ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ ಅವರ ಸೋಷಿಯಲ್ ಮೀಡಿಯಾದಲ್ಲಿ ಆಗಿರುವ ಬೆಳವಣಿಗೆಗಳನ್ನು ಗಮನಿಸಿದರೇ, ಯುಜುವೇಂದ್ರ ಚಹಲ್ ದಾಂಪತ್ಯ ಜೀವನದಲ್ಲಿ ಬಿರುಕು ಬಿಟ್ಟಿದೆಯೇ ಎನ್ನುವ ಪ್ರಶ್ನೆ ನಿಮ್ಮನ್ನೂ ಕಾಡಬಹುದು..!
 

ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ, ಸಾಕಷ್ಟು ದಿನಗಳ ಡೇಟಿಂಗ್ ಬಳಿಕ 2020ರ ಡಿಸೆಂಬರ್ 22ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದು ಅಭಿಮಾನಿಗಳನ್ನು ಅಚ್ಚರಿಗೀಡು ಮಾಡಿತ್ತು.
 

ಚಹಲ್ ಹಾಗೂ ಧನಶ್ರೀ ಡೇಟಿಂಗ್ ನಡೆಸುತ್ತಿದ್ದರೂ ಸಹಾ, ಈ ಗುಟ್ಟನ್ನು ಅಷ್ಟು ಸುಲಭವಾಗಿ ಬಿಟ್ಟುಕೊಟ್ಟಿರಲಿಲ್ಲ. ಈ ಇಬ್ಬರು 2020ರ ಆಗಸ್ಟ್ ತಿಂಗಳಿನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಂಡು, ಕೆಲವೇ ತಿಂಗಳ ಬಳಿಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Tap to resize

2020ರಲ್ಲಿ ಯೂಟ್ಯೂಬರ್, ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ವರ್ಮಾ ಅವರನ್ನು ವಿವಾಹವಾದ ಬಳಿಕ ಕೂಡಾ ಒಟ್ಟಾಗಿಯೇ ಸಾಕಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು.

Yuzvendra Chahal

ಯುಜುವೇಂದ್ರ ಚಹಲ್, ಐಪಿಎಲ್ ಟೂರ್ನಿಯಲ್ಲಿ ಹಾಗೂ ಅಂತಾರಾಷ್ಟ್ರೀಯ ಸರಣಿಗಳಲ್ಲಿ ಪಾಲ್ಗೊಂಡಾಗಲೆಲ್ಲಾ ಧನಶ್ರೀ ವರ್ಮಾ, ಮೈದಾನಕ್ಕೆ ತೆರಳಿ ಪತಿ ಚಹಲ್ ಅವರನ್ನು ಹುರಿದುಂಬಿಸುತ್ತಿದ್ದರು.

Yuzvendra Chahal

ಇದೆಲ್ಲದರ ನಡುವೆ ಟೀಂ ಇಂಡಿಯಾ ಸ್ಟಾರ್ ಸ್ಪಿನ್ನರ್ ಯುಜುವೇಂದ್ರ ಚಹಲ್, ಬುಧವಾರವಷ್ಟೇ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹೊಸ ಬದುಕು ಆರಂಭವಾಗುತ್ತಿದೆ(‘New Life Loading’) ಎಂದು ಬರೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದರು.

Since last year, the couple has stolen the limelight, from getting engaged during the lockdown to tying the knot. Furthermore, their honeymoon and vacations have also thrilled the fans.

ಕೆಲ ಮಾಧ್ಯಮಗಳಲ್ಲಿ ಯುಜುವೇಂದ್ರ ಚಹಲ್ ಹಾಗೂ ಧನಶ್ರೀ ವರ್ಮಾ, ಕೋರ್ಟ್‌ನಲ್ಲಿ ವಿವಾಹ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಸಹಾ ವರದಿಯಾಗಿದೆ.
 

ಇನ್ನು ಅಚ್ಚರಿಯ ಬೆಳವಣಿಗೆ ಎನ್ನುವಂತೆ ಯುಜುವೇಂದ್ರ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ, ತಮ್ಮ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಚಹಲ್‌ ಸರ್‌ನೇಮ್‌ ಕೈಬಿಟ್ಟಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಇಂಬು ನೀಡಿದೆ.
 

Latest Videos

click me!