1. ಕೆ ಎಲ್ ರಾಹುಲ್: ಸಾಕಷ್ಟು ಗಾಯದ ಸಮಸ್ಯೆ ಬಳಿಕ ಫಿಟ್ನೆಸ್ ಸಾಧಿಸಿ ತಂಡಕ್ಕೆ ಕಮ್‌ಬ್ಯಾಕ್ ಮಾಡಿರುವ ಕೆ ಎಲ್ ರಾಹುಲ್, ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ನಾಯಕನಾಗಿ ಹಾಗೂ ಆರಂಭಿಕನಾಗಿ ಯಶಸ್ಸು ಸಾಧಿಸಲು ರೆಡಿಯಾಗಿದ್ದಾರೆ.
2. ಶಿಖರ್ ಧವನ್: ಅನುಭವಿ ಆರಂಭಿಕ ಬ್ಯಾಟರ್ ಶಿಖರ್ ಧವನ್, ಏಕದಿನ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದು, ರಾಹುಲ್ ಜತೆ ಭರ್ಜರಿ ಇನಿಂಗ್ಸ್ ಆರಂಭಿಸಲು ಗಬ್ಬರ್ ಸಿಂಗ್ ಎದುರು ನೋಡುತ್ತಿದ್ದಾರೆ.
3. ಶುಭ್‌ಮನ್ ಗಿಲ್: ವೆಸ್ಟ್ ಇಂಡೀಸ್ ಎದುರಿನ ಸರಣಿಯಲ್ಲಿ ಅತ್ಯಂತ ಸ್ಥಿರ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದ ಬಲಗೈ ಅಗ್ರಕ್ರಮಾಂಕದ ಬ್ಯಾಟರ್ ಗಿಲ್, ಜಿಂಬಾಬ್ವೆ ಎದುರು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವ ಸಾಧ್ಯತೆಯಿದೆ.
4. ದೀಪಕ್ ಹೂಡಾ: ಐಪಿಎಲ್ ಬಳಿಕ ಟೀಂ ಇಂಡಿಯಾಗೆ ಭರ್ಜರಿ ಎಂಟ್ರಿಕೊಟ್ಟಿರುವ ದೀಪಕ್ ಹೂಡಾ ಒಳ್ಳೆಯ ಫಾರ್ಮ್‌ನಲ್ಲಿದ್ದು, ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವತ್ತ ದಿಟ್ಟ ಹೆಜ್ಜೆಯಿಡುತ್ತಿದ್ದಾರೆ. ಹೂಡಾ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಯುವುದು ಬಹುತೇಕ ಖಚಿತ.
Sanju Samson
5. ಸಂಜು ಸ್ಯಾಮ್ಸನ್: ಕೇರಳ ಮೂಲದ ಪ್ರತಿಭಾನ್ವಿತ ವಿಕೆಟ್ ಕೀಪರ್ ಬ್ಯಾಟರ್ ಸಂಜು ಸ್ಯಾಮ್ಸನ್, ವಿಂಡೀಸ್ ಎದುರು ಸಾಧಾರಣ ಪ್ರದರ್ಶನ ತೋರಿದ್ದು, ಜಿಂಬಾಬ್ವೆ ಎದುರು ಮೊದಲ ಪಂದ್ಯದಲ್ಲಿ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.
Image credit: Getty
6. ಶಾರ್ದೂಲ್ ಠಾಕೂರ್: ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಶಾರ್ದೂಲ್ ಠಾಕೂರ್ ಬೌಲಿಂಗ್ ಆಲ್ರೌಂಡರ್ ರೂಪದಲ್ಲಿ ತಂಡಕ್ಕೆ ಆಸರೆಯಾಗುವ ಸಾಧ್ಯತೆಯಿದ್ದು, ಬಹುತೇಕ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ.
7. ಅಕ್ಷರ್ ಪಟೇಲ್: ಎಡಗೈ ಸ್ಪಿನ್ನರ್ ಅಕ್ಷರ್ ಪಟೇಲ್, ಟೀಂ ಇಂಡಿಯಾಗೆ ಮತ್ತೋರ್ವ ಉಪಯುಕ್ತ ಆಲ್ರೌಂಡ್ ಆಯ್ಕೆಯಾಗಬಲ್ಲರು. ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಮಿಂಚುವ ಕ್ಷಮತೆ ಅಕ್ಷರ್ ಪಟೇಲ್‌ಗಿದೆ.
8. ದೀಪಕ್ ಚಹರ್: ಕೆ ಎಲ್ ರಾಹುಲ್ ಅವರಂತೆಯೇ ದೀರ್ಘಕಾಲದ ಬಿಡುವಿನ ಬಳಿಕ ವೇಗಿ ದೀಪಕ್ ಚಹರ್ ಭಾರತ ತಂಡ ಕೂಡಿಕೊಂಡಿದ್ದು, ಜಿಂಬಾಬ್ವೆ ಸರಣಿಯಲ್ಲಿ ಭರ್ಜರಿ ಪ್ರದರ್ಶನ ತೋರುವ ಮೂಲಕ ಕಮ್‌ಬ್ಯಾಕ್ ಮಾಡಲು ಕಾತರರಾಗಿದ್ದಾರೆ.
9. ಕುಲ್ದೀಪ್ ಯಾದವ್: ಕಳೆದ ಫೆಬ್ರವರಿಯಲ್ಲಿ ಕೊನೆಯ ಬಾರಿಗೆ ಭಾರತ ಕ್ರಿಕೆಟ್ ತಂಡದ ಪರ ಏಕದಿನ ಪಂದ್ಯವನ್ನಾಡಿದ್ದ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್, ತಜ್ಞ ಸ್ಪಿನ್ನರ್ ಆಗಿ ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ
Image credit: Getty
10. ಮೊಹಮ್ಮದ್ ಸಿರಾಜ್: ಭುವನೇಶ್ವರ್ ಕುಮಾರ್ , ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ಮೊಹಮ್ಮದ್ ಸಿರಾಜ್, ಟೀಂ ಇಂಡಿಯಾ ವೇಗದ ದಾಳಿಯ ಪಡೆಯನ್ನು ಮುನ್ನಡೆಸಲಿದ್ದಾರೆ. ಸಿರಾಜ್, ಜಿಂಬಾಬ್ವೆ ಬ್ಯಾಟರ್‌ಗಳನ್ನು ಕಾಡಲು ಸಜ್ಜಾಗಿದ್ದಾರೆ.
11. ಪ್ರಸಿದ್ದ್ ಕೃಷ್ಣ: ಕರ್ನಾಟಕದ ನೀಳಕಾಯದ ವೇಗಿ ಮೊಹಮ್ಮದ್ ಸಿರಾಜ್, ವಿಂಡೀಸ್ ಎದುರಿನ ಸರಣಿಯಲ್ಲಿ ಸಾಧಾರಣ ಪ್ರದರ್ಶನ ತೋರಿದ್ದರು. ಸಾಕಷ್ಟು ವೇಗದ ಬೌಲಿಂಗ್ ಮಾಡುವ ಕ್ಷಮತೆ ಹೊಂದಿರುವ ಪ್ರಸಿದ್ದ್‌ಗೆ ಮತ್ತೊಂದು ಅವಕಾಶ ಸಿಗುವ ಸಾಧ್ಯತೆಯಿದೆ.