ಯುಜುವೇಂದ್ರ ಚಹಲ್ ಕೇವಲ ಕ್ರಿಕೆಟ್ ಮಾತ್ರವಲ್ಲದೇ, ಸಾಮಾಜಿಕ ಜಾಲತಾಣಗಳಲ್ಲಿ ಡ್ಯಾನ್ಸ್, ತಮಾಷೆಯ ಕ್ಷಣಗಳು ಹಾಗೂ ರೀಲ್ಸ್ ಮೂಲಕ ಕ್ರಿಕೆಟ್ ಅಭಿಮಾನಿಗಳನ್ನು ರಂಜಿಸುತ್ತಲೇ ಬಂದಿದ್ದಾರೆ.
ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಇದ್ದಾಗ(ಈಗ ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದಾರೆ) ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಟೀಂ ಇಂಡಿಯಾ ಪ್ರತಿನಿಧಿಸುವಾಗ ಚಹಲ್ ತಮ್ಮ ಹಾಸ್ಯಮಯ ವಿಡಿಯೋ ಮೂಲಕ ಮೈದಾನದಾಚೆಗೂ ಕ್ರಿಕೆಟ್ ಅಭಿಮಾನಿಗಳ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡುತ್ತಲೇ ಬಂದಿದ್ದಾರೆ.
ಇನ್ನು 2020ರಲ್ಲಿ ಯೂಟ್ಯೂಬರ್, ಡ್ಯಾನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿದ್ದ ಧನಶ್ರೀ ವರ್ಮಾ ಅವರನ್ನು ವಿವಾಹವಾದ ಬಳಿಕ ಕೂಡಾ ಒಟ್ಟಾಗಿಯೇ ಸಾಕಷ್ಟು ವಿಡಿಯೋಗಳಲ್ಲಿ ಕಾಣಿಸಿಕೊಂಡಿದ್ದರು.
Yuzvendra Chahal
ಆದರೆ ಇದೀಗ ಯುಜುವೇಂದ್ರ ಚಹಲ್ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಒಂದು ಪೋಸ್ಟ್ ಅವರ ಅಭಿಮಾನಿಗಳು ತಲೆ ಕೆರೆದುಕೊಳ್ಳುವಂತೆ ಮಾಡಿದೆ. ಯುಜಿ ‘New Life Loading’ ಎಂದು ಪೋಸ್ಟ್ ಮಾಡಿದ್ದಾರೆ.
Dhanashree Verma
ಹೊಸ ಜೀವನ ಆರಂಭವಾಗುತ್ತಿದೆ ಇದರರ್ಥ ಧನಶ್ರೀ ವರ್ಮಾ ಮೊದಲ ಮಗುವಿಗೆ ಜನ್ಮ ನೀಡಲು ರೆಡಿಯಾಗಿದ್ದಾರೆ ಎಂದು ಅವರ ಅಭಿಮಾನಿಗಳು ಭಾವಿಸುತ್ತಿದ್ದಾರೆ.
Image credit: PTI
ಸದ್ಯ ಯುಜುವೇಂದ್ರ ಚಹಲ್, ಏಷ್ಯಾಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆದಿದ್ದು, ಯುಎಇನಲ್ಲಿ ಆಗಸ್ಟ್ 27ರಿಂದ ಏಷ್ಯಾಕಪ್ ಟೂರ್ನಿಯು ಆರಂಭವಾಗಲಿದೆ. ಆಗಸ್ಟ್ 28ರಂದು ಭಾರತ ಆಡಲಿರುವ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.