'ನಾನೇ ನಿಮ್ಮ ದೊಡ್ಡ...' ಯುಜುವೇಂದ್ರ ಚಹಲ್ ಬರ್ತ್‌ಡೇ ಸ್ಪಷೆಲ್ ವಿಶ್ ಮಾಡಿದ ಪತ್ನಿ ಧನಶ್ರೀ ವರ್ಮಾ..!

Published : Jul 24, 2024, 04:50 PM ISTUpdated : Jul 25, 2024, 12:57 PM IST

ಟೀಂ ಇಂಡಿಯಾ ಕ್ರಿಕೆಟಿಗ ಯುಜುವೇಂದ್ರ ಚಹಲ್ ಜುಲೈ 23ರಂದು ತಮ್ಮ 34ನೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಪತ್ನಿ ಧನಶ್ರೀ ವರ್ಮಾ, ವಿಶೇಷವಾಗಿ ಪತಿ ಬರ್ತ್‌ ಡೇ ಗೆ ಶುಭಕೋರಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

PREV
17
'ನಾನೇ ನಿಮ್ಮ ದೊಡ್ಡ...' ಯುಜುವೇಂದ್ರ ಚಹಲ್ ಬರ್ತ್‌ಡೇ ಸ್ಪಷೆಲ್ ವಿಶ್ ಮಾಡಿದ ಪತ್ನಿ ಧನಶ್ರೀ ವರ್ಮಾ..!

ಧನಶ್ರೀ ವರ್ಮಾ, ಸೋಷಿಯಲ್ ಮೀಡಿಯಾ ಇನ್‌ಪ್ಲ್ಯೂಯೆನ್ಸರ್ ಹಾಗೂ ಕೊರಿಯೋಗ್ರಾಫರ್ ಆಗಿ ಗಮನ ಸೆಳೆದಿದ್ದಾರೆ. ಇದೀಗ ತಮ್ಮ ಪತಿ ಯುಜುವೇಂದ್ರ ಚಹಲ್ ಅವರ 34ನೇ ಹುಟ್ಟುಹಬ್ಬಕ್ಕೆ ಧನಶ್ರೀ ವರ್ಮಾ ವಿನೂತನವಾಗಿ ಶುಭಕೋರಿದ್ದಾರೆ.

27

ಯುಜುವೇಂದ್ರ ಚಹಲ್ ಅವರ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿವೆ. ಇದರ ಜತೆಗೆ ಧನಶ್ರೀ ಶುಭಕೋರಿದ ರೀತಿ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

37

ಧನಶ್ರೀ ವರ್ಮಾ ಹಂಚಿಕೊಂಡ ಸೋಷಿಯಲ್ ಮೀಡಿಯಾ ಪೋಸ್ಟ್‌ನಲ್ಲಿ ಕೇವಲದ ಅವರ ಪ್ರತಿಭೆಯನ್ನಷ್ಟೇ ಹೊಗಳದೇ, ತಂಡದ ಗೆಲುವಿಗಾಗಿ ಹೋರಾಡುವ ಅವರ ಶ್ರದ್ಧೆ ಹಾಗೂ ಪರಿಶ್ರಮದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

47

"ಗ್ರೇಟೆಸ್ಟ್‌ ಸ್ಪಿನ್ನರ್ ಹಾಗೂ ವಿನ್ನರ್" ಎಂದು ಬರೆಯುವ ಮೂಲಕ ಮಾತು ಆರಂಭಿಸಿದ ಧನಶ್ರೀ ವರ್ಮಾ, ಪತಿ ಹಾಗೂ ಟೀಂ ಇಂಡಿಯಾ ಲೆಗ್‌ಸ್ಪಿನ್ನರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

57
Image credit: Dhanashree Verma/Instagram

"ನಿಮ್ಮ ಕ್ರಿಕೆಟ್ ಕೌಶಲ್ಯ ಹಾಗೂ ನೀವು ನಿಮ್ಮ ತಂಡ ಗೆಲ್ಲಬೇಕು ಎಂದು ಹೋರಾಡುವ ನಿಮ್ಮ ಛಲ ನಿಜಕ್ಕೂ ಅಸಾಧಾರಣವಾದದ್ದು. ದೇಶವ ಆಶೀರ್ವಾದ ಸದಾ ನಿಮ್ಮ ಮೇಲಿರಲಿ. ಎಂದೆಂದಿಗೂ ನಾನು ನಿಮ್ಮ ದೊಡ್ಡ ಚಿಯರ್‌ಲೀಡರ್, ಹ್ಯಾಪಿ ಬರ್ತ್ ಡೇ ಎಂದು ಧನಶ್ರೀ ವರ್ಮಾ ಶುಭ ಕೋರಿದ್ದಾರೆ.

67

ಧನಶ್ರೀ ವರ್ಮಾ ಅವರ ಈ ಸುಂದರ ಮಾತುಗಳು, ಪತಿ ಯುಜುವೇಂದ್ರ ಚಹಲ್ ಅವರ ಮೇಲಿಟ್ಟಿರುವ ಪ್ರೀತಿ ಹಾಗೂ ಗೌರವವನ್ನು ಎತ್ತಿ ತೋರಿಸುತ್ತಿದೆ ಎಂದು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

77

ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಈ ಜೋಡಿ, ಒಬ್ಬರನ್ನೊಬ್ಬರು ಗೌರವಿಸಿಕೊಂಡೇ ಬಂದಿದ್ದಾರೆ. ಈ ಜೋಡಿ ಭಾರತದ ಜನಪ್ರಿಯ ಜೋಡಿಗಳಲ್ಲಿ ಎನಿಸಿಕೊಂಡಿದೆ.

Read more Photos on
click me!

Recommended Stories