Good News: ತಂದೆಯಾದ ಯುವರಾಜ್‌ ಸಿಂಗ್‌, ಮೊಮ್ಮಗು ಕ್ರಿಕೆಟಿಗನಾಗಬೇಕು ಎಂದ ಅಜ್ಜ

First Published Jan 26, 2022, 4:23 PM IST

ಕಳೆದ ರಾತ್ರಿ ಯುವರಾಜ್ ಸಿಂಗ್ (Yuvraj Singh) ಮತ್ತು ಹ್ಯಾಝೆಲ್ ಕೀಚ್ (Hazel Keech) ದಂಪತಿಗಳು ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು. ಸೋಶಿಯಲ್‌ ಮೀಡಿಯಾ ಮೂಳಕ ಯುವಾರಾಜ್‌ ಸಿಂಗ್‌ ತಾವು  ಅವರು ಗಂಡು ಮಗುವಿನ ತಂದೆಯಾಗಿರುವ ಗುಡ್‌ನ್ಯೂಸ್‌ ಹಂಚಿಕೊಂಡಿದ್ದಾರೆ. ಯುವರಾಜ್‌ ಸಿಂಗ್‌ ತಂದೆ  ಯೋಗರಾಜ್ ಸಿಂಗ್  ಮೊಮ್ಮಗು ತಂದೆಯಂತೆಯೇ ಕ್ರಿಕೆಟಿಗನಾಗಬೇಕೆಂದು ಬಯಸಿದ್ದಾರೆ.

ನಟಿ ಹೇಜೆಲ್ ಕೀಚ್ ಮತ್ತು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳ ಮೂಲಕ ಅಭಿಮಾನಿಗಳೊಂದಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ದಂಪತಿಗಳು ತಮ್ಮ ಮೊದಲ ಮಗುವಿನ ಪೋಷಕರಾದ ವಿಷಯ ಹಂಚಿಕೊಂಡಿದ್ದಾರೆ. 

Yuvraj Singh

'ನಮ್ಮ ಎಲ್ಲಾ ಅಭಿಮಾನಿಗಳು, ಕುಟುಂಬ ಮತ್ತು ಸ್ನೇಹಿತರಿಗೆ, ಇಂದು ದೇವರು ನಮಗೆ ಗಂಡು ಮಗುವನ್ನು ಆಶೀರ್ವದಿಸಿದ್ದಾನೆ ಎಂದು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಈ ಆಶೀರ್ವಾದಕ್ಕಾಗಿ ನಾವು ದೇವರಿಗೆ ಧನ್ಯವಾದ ಹೇಳುತ್ತೇವೆ ಮತ್ತು ನಾವು ಮಗುವನ್ನು ಜಗತ್ತಿಗೆ ಸ್ವಾಗತಿಸುವಾಗ ನೀವು ನಮ್ಮ ಗೌಪ್ಯತೆಯನ್ನು ಗೌರವಿಸಬೇಕೆಂದು ಬಯಸುತ್ತೇವೆ. ಲವ್, ಹೇಜೆಲ್‌ ಮತ್ತು ಯುವರಾಜ್' ಎಂದು ಹೇಜೆಲ್‌  Instagram ನಲ್ಲಿ ಬರೆದಿದ್ದಾರೆ.
 

ಆಯುಷ್ಮಾನ್ ಖುರಾನಾ, ರವೀನಾ ಟಂಡನ್, ರಣವಿಜಯ್ ಸಿಂಘಾ, ವಿವಿಎಸ್ ಲಕ್ಷ್ಮಣ್, ರಿಚಾ ಚಡ್ಡಾ, ನೇಹಾ ಧೂಪಿಯಾ, ಅಂಗದ್ ಬೇಡಿ, ಬಿಪಾಶಾ ಬಸು, ಸೌರವ್ ಗಂಗೂಲಿ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಹೊಸ ಪೋಷಕರಿಗೆ ಅಭಿನಂದನಾ ಸಂದೇಶಗಳನ್ನು ಬರೆದಿದ್ದಾರೆ.

ಯುವರಾಜ್ ಸಿಂಗ್ ಅವರ ತಂದೆ ಮತ್ತು ಮಗುವಿನ ತಾತ ಯೋಗರಾಜ್ ಸಿಂಗ್ ಅವರು ತಮ್ಮ ಮಗನಿಗೆ ಎಲ್ಲಾ ಪ್ರೀತಿಯನ್ನು ಹಾರೈಸಿದರು ಮತ್ತು ನವಜಾತ ಶಿಶುವನ್ನು 'ಚಾಂಪ್' ಎಂದು ಕರೆದರು.ಯುವರಾಜ್ ಅವರ ಕಾಮೆಂಟ್‌ಗೆ ತಕ್ಷಣವೇ ಉತ್ತರಿಸಿ 'ಹಲೋ ಅಜ್ಜ! ನೇರವಾಗಿ ನೆಟ್ ಅಭ್ಯಾಸಕ್ಕೆ ಹೋಗೋಣ' ಎಂದು ಹೇಳಿದರು. 

'ಖಂಡಿತವಾಗಿ,  ಪರಂಪರೆ ಮುಂದುವರೆಯಬೇಕು' ಎಂದು ಯೋಗರಾಜ್ ಸಿಂಗ್ ಉತ್ತರ ನೀಡಿದ್ದಾರೆ. ಈ ಕಾಮೆಂಟ್‌ನಿಂದ ತನ್ನ ಮಗ ಯುವರಾಜ್ ಸಿಂಗ್ ಅವರಂತೆಯೇ ಮೊಮ್ಮಗನೂ ಕ್ರಿಕೆಟಿಗನಾಗಬೇಕೆಂದು ಯೋಗರಾಜ್‌ ಸಿಂಗ್‌ ಬಯಸುತ್ತಾರೆ ಎಂದು ತೋರಿಸುತ್ತದೆ.

ಯುವರಾಜ್ ಸಿಂಗ್ ಮತ್ತು ಹ್ಯಾಝೆಲ್ ಅವರು ನವೆಂಬರ್ 2016 ರಲ್ಲಿ ವಿವಾಹವಾದರು.ಹೇಜೆಲ್ ಕೀಚ್  ಬ್ರಿಟಿಷ್-ಮಾರಿಷಸ್ ಮೂಲದವರು ಮತ್ತು ಸಲ್ಮಾನ್ ಖಾನ್ ಅವರೊಂದಿಗೆ ಬಾಡಿಗಾರ್ಡ್ ಸೇರಿ ಜನಪ್ರಿಯ ಬಾಲಿವುಡ್ ಚಲನಚಿತ್ರಗಳಲ್ಲಿ ಮತ್ತು ವಿವಿಧ ಭಾರತೀಯ ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿದ್ದಾರೆ. ಹ್ಯಾಝೆಲ್ 2013 ರಲ್ಲಿ ಬಿಗ್ ಬಾಸ್ 7 ರಲ್ಲಿ ಸಹ ಭಾಗವಹಿಸಿದ್ದರು. 

ಭಾರತದ 2007 T20 ಮತ್ತು 2011 ODI ವಿಶ್ವಕಪ್ ಗೆಲುವಿನ ಐಕಾನ್. ಈ ಟ್ರೋಫಿಗಳನ್ನು ಟೀಮ್‌ ಇಂಡಿಯಾ ಗೆದ್ದಾಗ ಯುವರಾಜ್‌ ಸಿಂಗ್‌ ಮಹತ್ವವಾದ ಕೊಡುಗೆ ನೀಡಿದ್ದಾರೆ. ಜೂನ್ 2019 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದರು.

click me!