'ಬಂದವ್ರಲ್ಲಾ ಬಾರಿಸಿ ಹೋಗ್ತಿದ್ದಾರೆ, ಆರ್‌ಸಿಬಿ ಏನು ದೇವಸ್ಥಾನದ ಗಂಟೆನಾ..' ಮೀಮ್ಸ್‌ ಮೂಲಕ ಆರ್‌ಸಿಬಿ ಕೆಣಕಿದ ಫ್ಯಾನ್ಸ್‌!

Published : Mar 14, 2023, 03:58 PM IST

ವುಮೆನ್ಸ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮೊದಲ ಗೆಲುವಿಗಾಗಿ ಆರ್‌ಸಿಬಿ ಪರದಾಟ ನಡೆಸುತ್ತಿದೆ. ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋಮವಾರ ನಡೆದ ಪಂದ್ಯದಲ್ಲಿ ಆರ್‌ಸಿಬಿ ಸೋಲು ಕಾಣುವ ಮೂಲಕ ಲೀಗ್‌ನಲ್ಲಿ ಸತತ 5ನೇ ಪಂದ್ಯದಲ್ಲಿ ಮುಗ್ಗರಿಸಿದಂತಾಗಿದೆ. ಇದರ ನಡುವೆ ಸೋಶಿಯಲ್‌ ಮೀಡಿಯಾದಲ್ಲಿ ಆರ್‌ಸಿಬಿ ತಂಡದ ಕುರಿತಾಗಿ ಟ್ರೋಲ್‌ಗಳು ವೈರಲ್‌ ಆಗಿವೆ.  

PREV
110
'ಬಂದವ್ರಲ್ಲಾ ಬಾರಿಸಿ ಹೋಗ್ತಿದ್ದಾರೆ, ಆರ್‌ಸಿಬಿ ಏನು ದೇವಸ್ಥಾನದ ಗಂಟೆನಾ..' ಮೀಮ್ಸ್‌ ಮೂಲಕ ಆರ್‌ಸಿಬಿ ಕೆಣಕಿದ ಫ್ಯಾನ್ಸ್‌!

'ಬಂದವರೆಲ್ಲಾ ಬಾರಿಸಿ ಹೋಗುತ್ತಿದ್ದಾರೆ ನಾವೇನು ದೇವಸ್ಥಾನದ ಗಂಟೆನಾ..' ಎಂದು ಆರ್‌ಸಿಬಿ ಸೋಲಿಗೆ ಟ್ರೋಲ್‌ ಮಾಡಿದ್ದಾರೆ.

210

ಆರ್‌ಸಿಬಿಯ ಮಹಿಳಾ ಟೀಮ್‌ ಹಾಗೂ ಪುರುಷ ತಂಡಗಳು ಸೇರಿ ಆರ್‌ಸಿಬಿ ಫ್ಯಾನ್ಸ್‌ಗಳಿಗೆ ಹೀಗೆ ಮಾಡ್ತಿದೆಯಂತೆ..!

310

ಆರ್‌ಸಿಬಿ ಫ್ಯಾನ್ಸ್‌ಗಳು ಟೀಮ್‌ಗೆ 'ನೀವು ಕನಿಷ್ಠ ಒಂದು ಬಾರಿಯಾದರೂ ಗೆಲ್ಲಬೇಕು..' ಅಂತಾ ಈ ರೀತಿಯಲ್ಲಿ ಬೇಡಿಕೊಳ್ಳುತ್ತದೆಯಂತೆ..!

410

'ಪಾಪದ ಸ್ಮೃತಿ ಮಂದಣ್ಣಗೆ ನೀವೆಲ್ಲಾ ಸೇರಿ ಅಳಿಸಿಬಿಟ್ಟಿರಲ್ಲ.' ಅಂತಾ ಆರ್‌ಸಿಬಿ ಟೀಮ್‌, ಲೀಗ್‌ನಲ್ಲಿರುವ ಉಳಿದ ತಂಡಗಳಿಗೆ ಈ ರೀತಿ ಹೇಳುತ್ತಿದೆಯಂತೆ..!

510

ಪ್ರತಿ ಮ್ಯಾಚ್‌ನ ಬಳಿಕ ಐಪಿಎಲ್‌ ಹಾಗೂ ಡಬ್ಲ್ಯುಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಡ್ರೆಸಿಂಗ್‌ ರೂಮ್‌ ಈ ರೀತಿ ಇರಲಿದೆ ಎಂದು ಅಭಿಮಾನಿಯೊಬ್ಬ ಟ್ವೀಟ್‌ ಮಾಡಿದ್ದಾನೆ.

610

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಪುರುಷರ ತಂಡ ಮಹಿಳಾ ತಂಡಕ್ಕೆ 'ನೀವು ಸಂಪೂರ್ಣ ನನ್ನ ರೀತಿಯಂತೆ ಆಗಿರುವೆ..' ಎಂದು ಹೇಳ್ತಾ ಇದೆಯಂತೆ..! 

710

'ಅಯ್ಯೋ ಈ ದುಃಖ ಯಾವಾಗ ಮುಗಿಯತ್ತೆ ಅನ್ನೋದು ಗೊತ್ತಿಲ್ಲ...' ಅನ್ನೋದು ಪ್ರತಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳ ಅಳಲಾಗಿದೆ.

810

'ಸರ್ಕೀಟ್‌ ಈ ಆರ್‌ಸಿಬಿ ಅಂದ್ರೆ ಏನು..?

ಹೆಚ್ಚೇನೂ ಗೊತ್ತಿಲ್ಲ ಭಾಯ್‌,  ಆದರೆ ಬಕ್ವಾಸ್‌ ಟೀಮ್‌ ಅಂತಾ ಕೇಳಿಪಟ್ಟಿದ್ದೇನೆ. ಅದೇನೂ ದಿಲ್ಲು, ಗಿಲ್ಲು ಅಂತಾ ಗೆಲ್ತಿದ್ದಾರೆ..

 

910

ಸ್ಮೃತಿ ಮಂದನಾ ನಾನು ಬೇರೆ ಟೀಮ್‌ಗೆ ಹೋಗ್ತೀನಿ ಅಂತಾ.. ಆರ್‌ಸಿಬಿ ಮ್ಯಾನೇಜ್‌ಮೆಂಟ್‌ಗೆ ಈ ರೀತಿಯಲ್ಲಿ ಕೇಳ್ತಿದ್ದಾರಂತೆ.. !

1010

ಸ್ಮೃತಿ ಮಂದನಾ ಆರ್‌ಸಿಬಿ ಸೇರೋಕು ಮುಂಚೆ ಹಾಗೂ ಆರ್‌ಸಿಬಿ ಸೇರಿದ ನಂತರ ಇಷ್ಟೆಲ್ಲಾ ಬದಲಾವಣೆ ಆಗಿದೆ. ನೀವೇನಾದರೂ ಗಮನಿಸಿದ್ದೀರಾ?

Read more Photos on
click me!

Recommended Stories