1. ವಿಶ್ವಕಪ್‌ನಲ್ಲಿ ಅತಿಹೆಚ್ಚು ಶತಕ, ಸಚಿನ್ ದಾಖಲೆ ಮರಿಯಲು ರೋಹಿತ್‌ಗೆ ಬೇಕು ಇನ್ನೊಂದು ಸೆಂಚುರಿ:
ಏಕದಿನ ಕ್ರಿಕೆಟ್ ವಿಶ್ವಕಪ್ ಇತಿಹಾಸದಲ್ಲಿ ಕ್ರಿಕೆಟ್ ದಂತಕಥೆ ಸಚಿನ್ ತೆಂಡುಲ್ಕರ್ ಮತ್ತು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 6 ಶತಕ ಸಿಡಿಸಿ, ಅತಿಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಸಚಿನ್ ತೆಂಡುಲ್ಕರ್ 44 ವಿಶ್ವಕಪ್ ಪಂದ್ಯಗಳನ್ನಾಡಿ 6 ಶತಕ ಸಿಡಿಸಿದ್ದರೆ, ರೋಹಿತ್ ಶರ್ಮಾ ಕೇವಲ 17 ಪಂದ್ಯಗಳನ್ನಾಡಿ 6 ಶತಕ ಬಾರಿಸಿದ್ದಾರೆ. ರೋಹಿತ್ ಶರ್ಮಾ ಇನ್ನೊಂದು ಸಿಡಿಸಿದರೂ, ಸಚಿನ್ ಹೆಸರಿನಲ್ಲಿ ದಶಕಗಳಿಂದ ಅಜರಾಮರವಾಗಿರುವ ಶತಕದ ರೆಕಾರ್ಡ್ ಹಿಟ್‌ಮ್ಯಾನ್ ಪಾಲಾಗಲಿದೆ.
2. ಅತಿಹೆಚ್ಚು ಅಂತಾಷ್ಟ್ರೀಯ ಸಿಕ್ಸರ್, ರೋಹಿತ್‌ಗೆ ಬೇಕು ಕೇವಲ 3 ಸಿಕ್ಸ್:
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಯೂನಿವರ್ಸಲ್ ಬಾಸ್ ಖ್ಯಾತಿಯ ಕ್ರಿಸ್ ಗೇಲ್ ಹೆಸರಿನಲ್ಲಿದೆ. ವಿಂಡೀಸ್ ದೈತ್ಯ ಕ್ರಿಕೆಟಿಗ ಸದ್ಯ 553 ಸಿಕ್ಸರ್ ಸಿಡಿಸಿ ಅಗ್ರಸ್ಥಾನದಲ್ಲಿದ್ದಾರೆ.
ಇದೀಗ ಹಿಟ್‌ಮ್ಯಾನ್ ಖ್ಯಾತಿಯ ರೋಹಿತ್ ಶರ್ಮಾ 551 ಸಿಕ್ಸರ್ ಸಿಡಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಇನ್ನು ಕೇವಲ 3 ಸಿಕ್ಸರ್ ಬಾರಿಸಿದರೆ, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರ ಎನ್ನುವ ವಿಶ್ವದಾಖಲೆಗೆ ರೋಹಿತ್ ಶರ್ಮಾ ಪಾತ್ರರಾಗಲಿದ್ದಾರೆ.
3. ಸಚಿನ್ ದಾಖಲೆ ಮುರಿಯಲು ಗಿಲ್‌ಗೆ ಬೇಕು 665 ರನ್:
ಕ್ಯಾಲೆಂಡರ್ ವರ್ಷವೊಂದರಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್ ಎನ್ನುವ ದಾಖಲೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಿನಲ್ಲಿದೆ. ಮುಂಬೈಕರ್ ಏಕದಿನ ಕ್ರಿಕೆಟ್‌ನ ಕ್ಯಾಲೆಂಡರ್ ವರ್ಷವೊಂದರಲ್ಲಿ 1,894 ರನ್ ಸಿಡಿಸಿದ್ದರು.
ಇದೀಗ ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್ ಕೇವಲ 665 ರನ್ ಬಾರಿಸಿದರೆ, ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕ್ಯಾಲೆಂಡರ್ ವರ್ಷದಲ್ಲಿ ಅತಿಹೆಚ್ಚು ರನ್ ಬಾರಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದ್ದಾರೆ.
ಹೊಸ ಮೈಲಿಗಲ್ಲು ನೆಡಲು ಶಮಿಗೆ ಬೇಕು 13 ವಿಕೆಟ್:
ಟೀಂ ಇಂಡಿಯಾ ಅನುಭವಿ ವೇಗಿಯಾಗಿರುವ ಮೊಹಮ್ಮದ್ ಶಮಿ, ಇನ್ನು ಕೇವಲ 13 ವಿಕೆಟ್ ಕಬಳಿಸಿದರೆ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಭಾರತದ ಬೌಲರ್ ಎನಿಸಿಕೊಳ್ಳಲಿದ್ದಾರೆ.
ಸದ್ಯ ಟೀಂ ಇಂಡಿಯಾ ಮಾಜಿ ವೇಗಿ, ಕನ್ನಡಿಗ ಜಾವಗಲ್ ಶ್ರೀನಾಥ್ ಹಾಗೂ ಜಹೀರ್ ಖಾನ್ ತಲಾ 44 ವಿಕೆಟ್ ಕಬಳಿಸುವ ಮೂಲಕ ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಈ ದಾಖಲೆ ಮುರಿಯಲು ಶಮಿಗೆ ಕೇವಲ 13 ವಿಕೆಟ್ ಅಗತ್ಯವಿದೆ.