ಶುಭ್‌ಮನ್ ಗಿಲ್‌ಗಾಗಿ ಮಿಡಿದ ಸಾರಾ ಹೃದಯ..! ತೆಂಡುಲ್ಕರ್ ಪುತ್ರಿಯ ಹೊಸ ಟ್ವೀಟ್ ವೈರಲ್

First Published | Oct 7, 2023, 3:15 PM IST

ಚೆನ್ನೈ: 2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭರ್ಜರಿ ಚಾಲನೆ ಸಿಕ್ಕಿದೆ. ಇದೀಗ ಆತಿಥೇಯ ಟೀಂ ಇಂಡಿಯಾ ತನ್ನ ಅಭಿಯಾನ ಆರಂಭಿಸಲು ಸಜ್ಜಾಗಿದೆ. ಹೀಗಿರುವಾಗಲೇ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ತಗುಲಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ಮಾಡಿದ ಟ್ವೀಟ್ ಒಂದು ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
 

ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಾ ಬಂದಿರುವ ಟೀಂ ಇಂಡಿಯಾಗೆ ಇದೀಗ ಐಸಿಸಿ ಟ್ರೋಫಿ ಗೆಲ್ಲುವ ಸುವರ್ಣಾವಕಾಶ ಬಂದೊದಗಿದೆ. ಇದೇ ಮೊದಲ ಬಾರಿಗೆ ಸಂಪೂರ್ಣ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಆತಿಥ್ಯ ವಹಿಸಿದೆ.
 

ಅಕ್ಟೋಬರ್ 05ರಂದೇ 2023ರ ಏಕದಿನ ವಿಶ್ವಕಪ್ ಟೂರ್ನಿಗೆ ಚಾಲನೆ ಸಿಕ್ಕಿದೆಯಾದರೂ, ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ, ಅಕ್ಟೋಬರ್ 08ರಂದು 5 ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ದ ಕಣಕ್ಕಿಳಿಯುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.
 

Tap to resize

ಈ ಹೈವೋಲ್ಟೇಜ್ ಪಂದ್ಯಕ್ಕೆ ಚೆನ್ನೈನ ಎಂ ಎ ಚಿದಂಬರಂ ಸ್ಟೇಡಿಯಂ ಆತಿಥ್ಯ ವಹಿಸಿದೆ. ಹೀಗಿರುವಾಗಲೇ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದ್ದು, ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೆ ಶುಭ್‌ಮನ್ ಗಿಲ್ ಆಡೋದು ಅನುಮಾನ ಎನಿಸಿದೆ. 
 

ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಪ್ರತಿಭಾನ್ವಿತ ಆರಂಭಿಕ ಬ್ಯಾಟರ್ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ತಗುಲಿರುವುದು ದೃಢಪಟ್ಟಿದ್ದು, ಆಸೀಸ್ ಎದುರಿನ ಪಂದ್ಯದಲ್ಲಿ ಆಡೋದು ಅನುಮಾನ ಎನಿಸಿದೆ.
 

2023ರಲ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸಿ ಮಿಂಚಿರುವ ಗಿಲ್, ಸದ್ಯ ರೆಡ್ ಹಾಟ್ ಫಾರ್ಮ್‌ನಲ್ಲಿದ್ದಾರೆ. ಕಳೆದ 4 ಏಕದಿನ ಪಂದ್ಯಗಳಲ್ಲಿ ಗಿಲ್ 2 ಶತಕ ಹಾಗೂ ಒಂದು ಅರ್ಧಶತಕ ಚಚ್ಚಿದ್ದರು.
 

ಒಂದು ವೇಳೆ ಶುಭ್‌ಮನ್ ಗಿಲ್ ಅಲಭ್ಯರಾದರೇ, ಮುಂದೇನು ಎನ್ನುವ ಆತಂಕ ಟೀಂ ಇಂಡಿಯಾ ಪಾಳಯದಲ್ಲಿ ಮನೆ ಮಾಡಿದೆ. ಹೀಗಿರುವಾಗಲೇ ಸಚಿನ್‌ ತೆಂಡುಲ್ಕರ್ ಪುತ್ರಿ ಸಾರಾ ಮಾಡಿರುವ ಒಂದು ಟ್ವೀಟ್ ವೈರಲ್ ಆಗಿದೆ.

ಶುಭ್‌ಮನ್ ಗಿಲ್ ಹಾಗೂ ಸಾರಾ ತೆಂಡುಲ್ಕರ್ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಗುಟ್ಟಾಗಿ ಉಳಿದಿಲ್ಲವಾದರೂ, ಅವರು ಮಾಡುವ ಪೋಸ್ಟ್‌ಗಳು ಕ್ರಿಕೆಟ್‌ ಅಭಿಮಾನಿಗಳ ಗಮನ ಸೆಳೆಯುತ್ತಲೇ ಬಂದಿವೆ.

ಇದೀಗ ಶುಭ್‌ಮನ್ ಗಿಲ್‌ಗೆ ಡೆಂಗ್ಯೂ ತಗುಲಿರುವುದು ಬೆಳಕಿಗೆ ಬರುತ್ತಿದ್ದಂತೆಯೇ ಸಾರಾ ಮನ ಮಿಡಿದಿದ್ದು, 'ಆದಷ್ಟು ಬೇಗ ಗುಣಮುಖವಾಗು ಶುಭ್‌ಮನ್ ಗಿಲ್' ಎಂದು ತೆಂಡುಲ್ಕರ್ ಪುತ್ರಿ ಟ್ವೀಟ್ ಮಾಡಿದ್ದಾರೆ. ಈ ಪೋಸ್ಟ್ ಸಾಕಷ್ಟು ವೈರಲ್ ಆಗಿದೆ.
 

ಆಸ್ಟ್ರೇಲಿಯಾ ಎದುರಿನ ಪಂದ್ಯಕ್ಕೂ ಮುನ್ನ ಶುಭ್‌ಮನ್ ಗಿಲ್ ಸಂಪೂರ್ಣ ಫಿಟ್ ಆಗಿ ಕಣಕ್ಕಿಳಿಯುತ್ತಾರಾ ಅಥವಾ ಗಿಲ್ ಬದಲಿಗೆ ರೋಹಿತ್ ಶರ್ಮಾ ಜತೆ ಇಶಾನ್ ಕಿಶನ್ ಇನಿಂಗ್ಸ್‌ ಆರಂಭಿಸುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.
 

Latest Videos

click me!