ಟಿ20 ವಿಶ್ವಕಪ್: ದಕ್ಷಿಣ ಆಫ್ರಿಕಾ ಎದುರು ಟೀಂ ಇಂಡಿಯಾ ಸೋತಿದ್ದು ಹೇಗೆ? ಇಲ್ಲಿವೆ ಆರು ಇಂಟ್ರೆಸ್ಟಿಂಗ್ ಕಾರಣಗಳು!

Published : Feb 23, 2026, 12:10 PM IST

ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ಹೀನಾಯ ಸೋಲು ಕಂಡಿದೆ. ಈ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾ ವಿರುದ್ಧ ಭಾರೀ ಟೀಕೆಗಳು ವ್ಯಕ್ತವಾಗುತ್ತಿವೆ. ಭಾರತದ ಸೋಲಿಗೆ ಕಾರಣವಾದ ಪ್ರಮುಖ ಅಂಶಗಳೇನು ನೋಡೋಣ. 

PREV
16
ಟಾಸ್ ಸೋತಿದ್ದು ಭಾರತದ ಮೊದಲ ಹಿನ್ನಡೆ

ಈ ವಿಶ್ವಕಪ್‌ನ ಲೀಗ್ ಹಂತದ ಎಲ್ಲಾ ಪಂದ್ಯಗಳನ್ನೂ ಭಾರತ ಮೊದಲು ಬ್ಯಾಟಿಂಗ್ ಮಾಡಿಯೇ ಗೆದ್ದಿತ್ತು. ಒಂದೇ ಒಂದು ಪಂದ್ಯದಲ್ಲೂ ಚೇಸಿಂಗ್ ಮಾಡಿರಲಿಲ್ಲ. ಅಮೆರಿಕ ವಿರುದ್ಧ 29, ನಮೀಬಿಯಾ ವಿರುದ್ಧ 93, ಪಾಕಿಸ್ತಾನ ವಿರುದ್ಧ 61 ಹಾಗೂ ನೆದರ್ಲೆಂಡ್ಸ್ ವಿರುದ್ಧ 17 ರನ್‌ಗಳಿಂದ ಗೆದ್ದಿತ್ತು. ಆದರೆ ಅಹಮದಾಬಾದ್‌ನಲ್ಲಿ ನಿರ್ಣಾಯಕ ಟಾಸ್ ಸೋತು, ದಕ್ಷಿಣ ಆಫ್ರಿಕಾ ಮೊದಲು ಬ್ಯಾಟ್ ಮಾಡಿ ಉತ್ತಮ ಸ್ಕೋರ್ ಗಳಿಸಿದ್ದು ಭಾರತವನ್ನು ಒತ್ತಡಕ್ಕೆ ಸಿಲುಕಿಸಿತು.

26
ಕಿಲ್ಲರ್ ಮಿಲ್ಲರ್ ಭರ್ಜರಿ ಬ್ಯಾಟಿಂಗ್

ಟಾಸ್ ಸೋತರೂ ಪಂದ್ಯದ ಆರಂಭದಲ್ಲಿ ಭಾರತ ಪಾರಮ್ಯ ಸಾಧಿಸಿತ್ತು. ದಕ್ಷಿಣ ಆಫ್ರಿಕಾ 20 ರನ್ ಗಳಿಸುವಷ್ಟರಲ್ಲಿ ಫಾರ್ಮ್‌ನಲ್ಲಿದ್ದ ಏಡನ್ ಮಾರ್ಕ್ರಾಮ್, ಕ್ವಿಂಟನ್ ಡಿ ಕಾಕ್ ಮತ್ತು ರಿಯಾನ್ ರಿಕೆಲ್ಟನ್‌ರಂತಹ 3 ಪ್ರಮುಖ ವಿಕೆಟ್‌ಗಳನ್ನು ಪಡೆದು ಮೇಲುಗೈ ಸಾಧಿಸಿತ್ತು. ಆದರೆ ಈ ಮುನ್ನಡೆಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಸ್ಫೋಟಕ ಜೊತೆಯಾಟ ದಕ್ಷಿಣ ಆಫ್ರಿಕಾವನ್ನು ಪಂದ್ಯಕ್ಕೆ ಮರಳಿ ತಂದಿತು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 50 ಎಸೆತಗಳಲ್ಲಿ 97 ರನ್ ಚಚ್ಚಿ ಭಾರತದ ಹಿಡಿತವನ್ನು ಸಡಿಲಗೊಳಿಸಿತು. ಇದು ಟೀಂ ಇಂಡಿಯಾ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು.

36
ಸ್ಪಿನ್ನರ್‌ಗಳ ವೈಫಲ್ಯ ಭಾರತಕ್ಕೆ ದೊಡ್ಡ ಹಿನ್ನಡೆ

ಮಧ್ಯಮ ಓವರ್‌ಗಳಲ್ಲಿ ರನ್ ನಿಯಂತ್ರಿಸುವಲ್ಲಿ ಭಾರತೀಯ ಸ್ಪಿನ್ನರ್‌ಗಳು ವಿಫಲರಾದರು. ವರುಣ್ ಚಕ್ರವರ್ತಿ ದುಬಾರಿಯಾದರೆ, ವಾಷಿಂಗ್ಟನ್ ಸುಂದರ್‌ಗೆ ದಕ್ಷಿಣ ಆಫ್ರಿಕಾದ ಬ್ಯಾಟರ್‌ಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿಲ್ಲ. ವರುಣ್ ಮತ್ತು ಸುಂದರ್ ಇಬ್ಬರೂ ಸೇರಿ 6 ಓವರ್‌ಗಳಲ್ಲಿ 64 ರನ್ ನೀಡಿ, ಕೇವಲ ಒಂದು ವಿಕೆಟ್ ಪಡೆದರು. ಅಹಮದಾಬಾದ್ ಪಿಚ್‌ನಲ್ಲಿ ಸರಿಯಾದ ಲೆಂಗ್ತ್‌ನಲ್ಲಿ ಬೌಲಿಂಗ್ ಮಾಡಲು ಭಾರತದ ಸ್ಪಿನ್ನರ್‌ಗಳು ವಿಫಲರಾದರು. 

ಉಪನಾಯಕ ಅಕ್ಷರ್ ಪಟೇಲ್ ಬದಲು ವಾಷಿಂಗ್ಟನ್ ಸುಂದರ್ ಅವರನ್ನು ತಂಡಕ್ಕೆ ಸೇರಿಸಿಕೊಂಡ ನಿರ್ಧಾರವು ಸಂಪೂರ್ಣವಾಗಿ ವಿಫಲವಾಯಿತು. ಕ್ವಿಂಟನ್ ಡಿ ಕಾಕ್, ರಿಯಾನ್ ರಿಕೆಲ್ಟನ್, ಡೇವಿಡ್ ಮಿಲ್ಲರ್ ಅವರಂತಹ ಎಡಗೈ ಬ್ಯಾಟರ್‌ಗಳನ್ನು ನಿಯಂತ್ರಿಸಲು ಆಫ್ ಸ್ಪಿನ್ನರ್ ಸುಂದರ್ ಅವರನ್ನು ಕರೆತರಲಾಗಿತ್ತು. ಆದರೆ, ಸುಂದರ್ ಬೌಲಿಂಗ್‌ಗೆ ಬರುವ ಮೊದಲೇ ಡಿ ಕಾಕ್ ಮತ್ತು ರಿಕೆಲ್ಟನ್ ಔಟಾಗಿದ್ದರು. ಹೀಗಾಗಿ ಸುಂದರ್ ಅವರನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗಲಿಲ್ಲ. ಕೇವಲ 2 ಓವರ್ ಬೌಲ್ ಮಾಡಿ 17 ರನ್ ನೀಡಿದರೂ ವಿಕೆಟ್ ಪಡೆಯಲಿಲ್ಲ. ಬ್ಯಾಟಿಂಗ್‌ನಲ್ಲಿ 5ನೇ ಕ್ರಮಾಂಕದಲ್ಲಿ ಬಂದು 11 ಎಸೆತಗಳಲ್ಲಿ 11 ರನ್ ಗಳಿಸಲಷ್ಟೇ ಶಕ್ತರಾದರು.

46
ಉತ್ತಮ ಆರಂಭ ಪಡೆಯಲು ವಿಫಲವಾದ ಟೀಂ ಇಂಡಿಯಾ

ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಆರಂಭದಲ್ಲೇ ಆಘಾತ ಎದುರಾಯಿತು. ಈ ವಿಶ್ವಕಪ್‌ನಲ್ಲಿ ಇಶಾನ್ ಕಿಶನ್ ನೀಡುತ್ತಿದ್ದ ಸ್ಫೋಟಕ ಆರಂಭವೇ ಪವರ್‌ಪ್ಲೇನಲ್ಲಿ ಭಾರತದ ಸ್ಕೋರ್ ಹೆಚ್ಚಿಸುತ್ತಿತ್ತು. ಆದರೆ ಅಭಿಷೇಕ್ ಶರ್ಮಾಗಾಗಿ ಪವರ್‌ಪ್ಲೇನಲ್ಲಿ ಬೌಲಿಂಗ್‌ಗೆ ಬಂದ ಏಡನ್ ಮಾರ್ಕ್ರಾಮ್, ಮೊದಲ ಓವರ್‌ನಲ್ಲೇ ಕಿಶನ್ ವಿಕೆಟ್ ಪಡೆದರು. ಅಭಿಷೇಕ್ ಒಂದು ಸಿಕ್ಸರ್, ಎರಡು ಬೌಂಡರಿ ಹೊಡೆದು ಅಬ್ಬರಿಸಿದರೂ, ದೊಡ್ಡ ಸ್ಕೋರ್ ಗಳಿಸಲಿಲ್ಲ. ನಿಧಾನಗತಿಯ ಆಟಕ್ಕೆ ಟೀಕೆಗೊಳಗಾಗಿದ್ದ ತಿಲಕ್ ವರ್ಮಾ, ದೊಡ್ಡ ಹೊಡೆತಕ್ಕೆ ಯತ್ನಿಸಿ ಔಟಾಗಿದ್ದು ಭಾರತವನ್ನು ಮತ್ತಷ್ಟು ಒತ್ತಡಕ್ಕೆ ದೂಡಿತು.

56
ಒಂದೇ ಒಂದು ಒಳ್ಳೆಯ ಜತೆಯಾಟ ಭಾರತಕ್ಕೆ ಸಿಗಲಿಲ್ಲ

ಬ್ಯಾಟಿಂಗ್‌ನಲ್ಲಿ ಒಂದೇ ಒಂದು ಉತ್ತಮ ಜೊತೆಯಾಟವನ್ನು ಕಟ್ಟಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಸ್ಥಿರವಾಗಿ ಆಡುವ ಬದಲು ಅನಗತ್ಯವಾಗಿ ಆಕ್ರಮಣಕಾರಿ ಆಟಕ್ಕೆ ಮುಂದಾಗಿದ್ದೇ ತಂಡಕ್ಕೆ ಮುಳುವಾಯಿತು. ಸತತವಾಗಿ ವಿಕೆಟ್‌ಗಳು ಉರುಳಿದ ಕಾರಣ ಭಾರತದ ಇನಿಂಗ್ಸ್ ಕುಸಿಯಿತು. ಈ ಸೋಲಿನೊಂದಿಗೆ, ಸೆಮಿಫೈನಲ್ ಕನಸನ್ನು ಜೀವಂತವಾಗಿರಿಸಿಕೊಳ್ಳಲು ಭಾರತ ಮುಂದಿನ ಪಂದ್ಯಗಳಲ್ಲಿ ಭರ್ಜರಿ ಕಮ್‌ಬ್ಯಾಕ್ ಮಾಡಬೇಕಿದೆ.

66
ಸಂಜು ಕೈಬಿಟ್ಟಿದ್ದೂ ಸೋಲಿಗೆ ಕಾರಣ

ಸತತ ವೈಫಲ್ಯಗಳ ನಡುವೆಯೂ ಅಭಿಷೇಕ್ ಶರ್ಮಾ ಮತ್ತು ತಿಲಕ್ ವರ್ಮಾ ಮೇಲೆ ಇಟ್ಟಿದ್ದ ಅತಿಯಾದ ನಂಬಿಕೆ ಭಾರತಕ್ಕೆ ತಿರುಗುಬಾಣವಾಯಿತು. ಇಶಾನ್ ಕಿಶನ್ ವಿಫಲವಾದರೆ ತಂಡ ಒತ್ತಡಕ್ಕೆ ಸಿಲುಕುವುದು ಖಚಿತವಾಗಿತ್ತು. ನಿನ್ನೆ ದಕ್ಷಿಣ ಆಫ್ರಿಕಾ ವಿರುದ್ಧ ಕಿಶನ್ ಬೇಗ ಔಟಾದಾಗ, ತಿಲಕ್ ವರ್ಮಾ ಮೇಲೆ ಒತ್ತಡ ಹೆಚ್ಚಿತು. ಕೊನೆಗೆ 'ಇಂಟೆಂಟ್' ತೋರಿಸಲು ಹೋಗಿ ತಿಲಕ್ ವಿಕೆಟ್ ಒಪ್ಪಿಸಿದರು. ಫಿನಿಶರ್ ರಿಂಕು ಸಿಂಗ್ ಈ ವಿಶ್ವಕಪ್‌ನಲ್ಲಿ ಆಡಿದ್ದು ಕೇವಲ 29 ಎಸೆತಗಳನ್ನು ಮಾತ್ರ. ಎಡಗೈ ಬ್ಯಾಟರ್‌ಗಳೇ ತುಂಬಿರುವ ತಂಡದಲ್ಲಿ ರಿಂಕು ಬದಲು ಬಲಗೈ ಆಟಗಾರ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡಲು ಟೀಮ್ ಮ್ಯಾನೇಜ್‌ಮೆಂಟ್ ಇನ್ನೂ ಸಿದ್ಧವಾಗಿಲ್ಲ.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories