ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?

Published : Dec 11, 2025, 09:38 AM IST

ನವದೆಹಲಿ: ಮುಂಬರುವ 2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಎಲ್ಲಾ 20 ತಂಡಗಳು ಭರ್ಜರಿ ತಯಾರಿ ನಡೆಸುತ್ತಿವೆ. ಆದರೆ ಅಚ್ಚರಿಯ ಸಂಗತಿಯಂದ್ರೆ, ಇಲ್ಲಿಂದ ಮುಂಬರುವ ಟಿ20 ವಿಶ್ವಕಪ್ ಟೂರ್ನಿಯವರೆಗೆ ಈ 3 ತಂಡಗಳು ಯಾವುದೇ ಅಂತಾರಾಷ್ಟ್ರೀಯ ಟಿ20 ಮ್ಯಾಚ್ ಆಡುತ್ತಿಲ್ಲ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ. 

PREV
18
ಟಿ20 ವಿಶ್ವಕಪ್‌ಗೆ ಎಲ್ಲಾ ತಂಡಗಳು ಭರ್ಜರಿ ತಯಾರಿ

2026ರ ಟಿ20 ವಿಶ್ವಕಪ್ ಫೆಬ್ರವರಿ-ಮಾರ್ಚ್‌ನಲ್ಲಿ ಭಾರತ ಹಾಗೂ ಶ್ರೀಲಂಕಾದಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ತಂಡಗಳು ಸಿದ್ಧತೆ ಆರಂಭಿಸಿದೆ.

28
ಭಾರತಕ್ಕಿದೆ 9 ಮ್ಯಾಚ್

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ತಂಡ ಒಟ್ಟು 9 ಪಂದ್ಯಗಳನ್ನಾಡಲಿವೆ. ಇದರಲ್ಲಿ ಗುರುವಾರದ ದ.ಆಫ್ರಿಕಾ ವಿರುದ್ಧ 2ನೇ ಟಿ20 ಪಂದ್ಯವೂ ಸೇರಿದೆ.

38
ಆಸ್ಟ್ರೇಲಿಯಾ, ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಯಾವುದೇ ಮ್ಯಾಚ್ ಇಲ್ಲ

ಆದರೆ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, ನೆರೆಯ ಬಾಂಗ್ಲಾದೇಶ, ಅಫ್ಘಾನಿಸ್ತಾನಕ್ಕೆ ಟಿ20 ವಿಶ್ವಕಪ್‌ಗೂ ಮುನ್ನ ಯಾವುದೇ ಟಿ20 ಪಂದ್ಯಗಳಿಲ್ಲ. ಇದು ಅಚ್ಚರಿ ಎನಿಸಿದ್ರೂ ಸತ್ಯ

48
ಆ್ಯಶಸ್‌ ಟೆಸ್ಟ್‌ ಸರಣಿ ಬಳಿಕ ನೇರವಾಗಿ ಟಿ20 ವಿಶ್ವಕಪ್‌ಗೆ ಕಾಂಗರೂ ಪಡೆ ಎಂಟ್ರಿ

ಮುಂಬರುವ ಜನವರಿ 08ರ ವರೆಗೆ ಇಂಗ್ಲೆಂಡ್‌ ವಿರುದ್ಧ ತವರಿನಲ್ಲಿ ಆ್ಯಶಸ್‌ ಟೆಸ್ಟ್‌ ಸರಣಿ ಆಡಲಿರುವ ಆಸೀಸ್‌, ಬಳಿಕ ನೇರವಾಗಿ ಟಿ20 ವಿಶ್ವಕಪ್‌ಗೆ ಪ್ರವೇಶಿಸಲಿದೆ.

58
ಇಂಗ್ಲೆಂಡ್ 3 ಪಂದ್ಯಗಳ ಟಿ20 ಸರಣಿ ಆಡಲಿದೆ

ಆದರೆ ಎರಡು ಬಾರಿಯ ಟಿ20 ವಿಶ್ವಕಪ್ ಚಾಂಪಿಯನ್ ಇಂಗ್ಲೆಂಡ್‌ ತಂಡವು, ಆ್ಯಶಸ್‌ ಟೆಸ್ಟ್‌ ಸರಣಿ ಮುಗಿಸಿದ ಬೆನ್ನಲ್ಲೇ ಶ್ರೀಲಂಕಾ ವಿರುದ್ಧ 3 ಏಕದಿನ, 3 ಟಿ20 ಪಂದ್ಯಗಳನ್ನಾಡಲಿದೆ.

68
ಭಾರತ ಎದುರು ಕಿವೀಸ್‌ಗೆ 5 ಮ್ಯಾಚ್ ಇವೆ

ಉಳಿದಂತೆ ನ್ಯೂಜಿಲೆಂಡ್‌ 5 ಟಿ20(ಭಾರತ ವಿರುದ್ಧ), ಪಾಕಿಸ್ತಾನ 3, ದಕ್ಷಿಣ ಆಫ್ರಿಕಾ 7, ಶ್ರೀಲಂಕಾ 6, ವೆಸ್ಟ್‌ಇಂಡೀಸ್‌ 3 ಟಿ20 ಪಂದ್ಯಗಳನ್ನಾಡಲಿದೆ.

78
20 ತಂಡಗಳು ಪ್ರಶಸ್ತಿಗಾಗಿ ಕಾದಾಟ

2026ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಹಾಗೂ ಶ್ರೀಲಂಕಾ ಜಂಟಿ ಆತಿಥ್ಯ ವಹಿಸಿದ್ದು, ಭಾರತ, ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸೇರಿದಂತೆ 20 ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.

88
2026ರ ಫೆಬ್ರವರಿ 07ರಂದು ಟೂರ್ನಿಗೆ ಅಧಿಕೃತ ಚಾಲನೆ

ಮುಂಬರುವ 2026ರ ಫೆಬ್ರವರಿ 07ರಂದು ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದ್ದು, ಫೈನಲ್ ಪಂದ್ಯವು ಮಾರ್ಚ್ 08ಕ್ಕೆ ನಿಗದಿಯಾಗಿದೆ. ಭಾರತ ತಂಡವು 'ಎ' ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಬದ್ದ ಎದುರಾಳಿ ಪಾಕಿಸ್ತಾನ ಎದುರು ಫೆಬ್ರವರಿ 15ರಂದು ಕೊಲಂಬೋದ ಆರ್‌ ಪ್ರೇಮದಾಸ ಮೈದಾನದಲ್ಲಿ ಕಾದಾಡಲಿದೆ.

Read more Photos on
click me!

Recommended Stories