ಒನ್‌8 ಬ್ರ್ಯಾಂಡ್‌ ಸೇಲ್‌: ತನ್ನ ಆಪ್ತ ಗೆಳೆಯನ ಈ ಸಂಸ್ಥೆಯಲ್ಲಿ ಕೊಹ್ಲಿ 40 ಕೋಟಿ ಹೂಡಿಕೆ!

Published : Dec 10, 2025, 10:10 AM IST

ನವದೆಹಲಿ: ಭಾರತದ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ, ಕ್ರಿಕೆಟ್ ವೃತ್ತಿಜೀವನದ ಸಂಧ್ಯಾಕಾಲದಲ್ಲಿದ್ದು, ಇದೀಗ ಹೂಡಿಕೆಯತ್ತ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದೀಗ ಕೊಹ್ಲಿ ತನ್ನ ಆಪ್ತ ಗೆಳೆಯನ ಸಂಸ್ಥೆಯಲ್ಲಿ 40 ಕೋಟಿ ರುಪಾಯಿ ಹೂಡಿಕೆ ಮಾಡಿದ್ದಾರೆ. 

PREV
17
ಪೂಮಾ ಕಂಪೆನಿಯ ರಾಯಭಾರಿ ಸ್ಥಾನದಿಂದ ಹಿಂದೆ ಸರಿದ ಕೊಹ್ಲಿ

ಪೂಮಾ ಕಂಪೆನಿಯ ರಾಯಭಾರಿ ಸ್ಥಾನದಿಂದ ಹಿಂದೆ ಸರಿದಿರುವ ಕ್ರಿಕೆಟಿಗ ವಿರಾಟ್‌ ಕೊಹ್ಲಿ ತಮ್ಮ ‘ಒನ್‌8’ ಸ್ಪೋರ್ಟ್ಸ್‌ ಬ್ರ್ಯಾಂಡ್‌ ಅನ್ನು ಬೆಂಗಳೂರು ಮೂಲದ ಅಜಿಲಿಟಾಸ್‌ ಎನ್ನುವ ಸ್ಟಾರ್ಟ್‌ಅಪ್‌ಗೆ ಮಾರುವುದಕ್ಕೆ ಮುಂದಾಗಿದ್ದಾರೆ.

27
ಅಜಿಲಿಟಾಸ್‌ ಕಂಪನಿಯಲ್ಲಿ ₹40 ಕೋಟಿ ಹೂಡಿಕೆ

ಅಲ್ಲದೇ ವಿರಾಟ್ ಕೊಹ್ಲಿ ಇದೀಗ ಅಜಿಲಿಟಾಸ್‌ ಕಂಪನಿಯಲ್ಲಿ ₹40 ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ವರದಿಯಾಗಿದೆ.

37
₹300 ಕೋಟಿ ಆಫರ್ ತಿರಸ್ಕಾರ

ಪೂಮಾ ಜೊತೆ 8 ವರ್ಷಗಳ ಅವಧಿಗೆ ಒಪ್ಪಂದ ನವೀಕರಣಕ್ಕಾಗಿ ತಮಗೆ ₹300 ಕೋಟಿ ಆಫರ್‌ ಇತ್ತಾದರೂ ಕೊಹ್ಲಿ ಅದನ್ನು ತಿರಸ್ಕರಿಸಿದ್ದರು. ತಮ್ಮ ಆಪ್ತ, ಅಜಿಲಿಟಾಸ್‌ ಸ್ಥಾಪಕ ಅಭಿಷೇಕ್‌ ಗಂಗೂಲಿ ಕಾರಣಕ್ಕಾಗಿ ಕೊಹ್ಲಿ ಒಪ್ಪಂದದಿಂದ ಹಿಂದೆ ಸರಿದಿದ್ದರು.

47
ಅಜಿಲಿಟಾಸ್‌ ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಬಗ್ಗೆ

ಅಜಿಲಿಟಾಸ್‌ ಸ್ಪೋರ್ಟ್ಸ್ ಸಂಸ್ಥೆಯು ಒಂದು ಸ್ಪೋರ್ಟ್ಸ್ ವಿಯರ್ ತಯಾರಿಕಾ ಸ್ಟಾರ್ಟ್‌ಅಪ್ ಆಗಿದ್ದು, ಈ ಸಂಸ್ಥೆಯ ಕೋ-ಫೌಂಡರ್ ಅಭಿಷೇಕ್ ಗಂಗೂಲಿ, ಈ ಮೊದಲು ಪೂಮಾ ಇಂಡಿಯಾದ ಮ್ಯಾನೇಜಿಂಗ್ ಡೈರೆಕ್ಟರ್ ಆಗಿದ್ದರು. ಆ ಹುದ್ದೆಗೆ ರಾಜೀನಾಮೆ ನೀಡಿ ಅಜಿಲಿಟಾಸ್‌ ಸ್ಪೋರ್ಟ್ಸ್ ಸ್ಟಾರ್ಟ್‌ಅಪ್ ಸ್ಥಾಪಿಸಿದ್ದಾರೆ.

57
ಅಜಿಲಿಟಾಸ್‌ಗೆ ತಮ್ಮ ಒನ್‌8 ಸಂಸ್ಥೆಯನ್ನು ಕೊಹ್ಲಿ ಮಾರಾಟ

ಇದೀಗ ಅಜಿಲಿಟಾಸ್‌ಗೆ ತಮ್ಮ ಒನ್‌8 ಸಂಸ್ಥೆಯನ್ನು ಕೊಹ್ಲಿ ಮಾರಲಿದ್ದಾರೆ. ಒಪ್ಪಂದ ಪ್ರಕಾರ, ಕೊಹ್ಲಿ ತಮ್ಮ ಒನ್‌8 ಬ್ರ್ಯಾಂಡ್‌ನ ಉತ್ಪನ್ನಗಳನ್ನು ಅಜಿಲಿಟಾಸ್ ಮೂಲಕ ಗ್ರಾಹಕರಿಗೆ ತಲುಪಿಸಲಿದ್ದಾರೆ.

67
ಟೆಸ್ಟ್-ಟಿ20ಗೆ ವಿದಾಯ ಘೋಷಿಸಿರುವ ಕೊಹ್ಲಿ

ಇನ್ನು ಕ್ರಿಕೆಟ್ ವಿಚಾರಕ್ಕೆ ಬಂದರೆ ವಿರಾಟ್ ಕೊಹ್ಲಿ ಈಗಾಗಲೇ ಟೆಸ್ಟ್ ಹಾಗೂ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದು, ಕೇವಲ ಏಕದಿನ ಮಾದರಿಯಲ್ಲಿ ಮಾತ್ರ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

77
ದಕ್ಷಿಣ ಆಫ್ರಿಕಾ ಎದುರು ಸರಣಿಶ್ರೇಷ್ಠ ಪ್ರಶಸ್ತಿ ಗೆದ್ದ ಕೊಹ್ಲಿ

ಇತ್ತೀಚೆಗಷ್ಟೇ ಮುಕ್ತಾಯವಾದ ದಕ್ಷಿಣ ಆಫ್ರಿಕಾ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕೊಹ್ಲಿ, ಎರಡು ಶತಕ ಹಾಗೂ ಒಂದು ಅರ್ಧಶತಕ ಸಹಿತ 302 ರನ್ ಸಿಡಿಸುವ ಮೂಲಕ ಸರಣಿಶ್ರೇಷ್ಠ ಪ್ರಶಸ್ತಿ ಜಯಿಸುವಲ್ಲಿ ಕೊಹ್ಲಿ ಯಶಸ್ವಿಯಾಗಿದ್ದರು.

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories