ಸದರ್ನ್ ಬ್ರೇವ್ ಪರ ಬೌಲಿಂಗ್‌ನಲ್ಲಿ
ಲ್ಯೂಕ್ ವುಡ್: 3 ವಿಕೆಟ್
ಮಾರ್ಕಸ್ ಸ್ಟೊಯಿನಿಸ್: 10 ಎಸೆತಗಳಲ್ಲಿ ಕೇವಲ 16 ರನ್ ನೀಡಿ 2 ವಿಕೆಟ್
ಜೋಫ್ರಾ ಆರ್ಚರ್: 20 ಎಸೆತಗಳಲ್ಲಿ 21 ರನ್ ನೀಡಿ 1 ವಿಕೆಟ್ ಸದರ್ನ್ ಬ್ರೇವ್ ಬೌಲರ್‌ಗಳ ಶಿಸ್ತುಬದ್ಧ ಪ್ರದರ್ಶನದಿಂದ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ತಂಡ 100 ಎಸೆತಗಳಲ್ಲಿ 116/9 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಸದರ್ನ್ ಬ್ರೇವ್ ತಂಡ 12 ರನ್‌ಗಳ ರೋಚಕ ಗೆಲುವು ದಾಖಲಿಸಿತು.
ಋತುವಿನ ಮೊದಲ ಗೆಲುವು
ಈ ಗೆಲುವು ಸದರ್ನ್ ಬ್ರೇವ್ ತಂಡಕ್ಕೆ ಈ ಋತುವಿನ ಮೊದಲ ಗೆಲುವಾಗಿದೆ. ಟೂರ್ನಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಸೋಲು ಕಂಡಿದ್ದ ತಂಡ, ಇದೀಗ ಬರ್ಮಿಂಗ್ಹ್ಯಾಮ್ ಫೀನಿಕ್ಸ್ ವಿರುದ್ಧ ಭರ್ಜರಿ ಕಮ್‌ಬ್ಯಾಕ್ ಮಾಡಿದೆ. ಆದರೆ, ಪಂದ್ಯದ ಫಲಿತಾಂಶಕ್ಕಿಂತಲೂ ಅಂತಿಮ ಹಂತದಲ್ಲಿ ನಡೆದ ಮೂರು ಎಸೆತಗಳೇ ಹೆಚ್ಚು ಚರ್ಚೆಗೆ ಕಾರಣವಾಗಿವೆ.
ಸತತ ಮೂರು ಎಸೆತಗಳಲ್ಲಿ ಮೂರು ವಿಕೆಟ್... ಆದರೆ ಬೌಲರ್‌ಗೆ ಹ್ಯಾಟ್ರಿಕ್ ಇಲ್ಲ
ಲ್ಯೂಕ್ ವುಡ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದರೂ, ಮೂರನೇ ವಿಕೆಟ್ ರನ್‌ಔಟ್ ಆಗಿದ್ದರಿಂದ ಅವರ ವೈಯಕ್ತಿಕ ಹ್ಯಾಟ್ರಿಕ್ ಕೈತಪ್ಪಿತು. ಆದರೆ, ಸದರ್ನ್ ಬ್ರೇವ್ ತಂಡಕ್ಕೆ ಮಾತ್ರ 'ಟೀಮ್ ಹ್ಯಾಟ್ರಿಕ್' ಎಂಬ ಅಪರೂಪದ ಸಾಧನೆ ಸಿಕ್ಕಿತು.ದಿ ಹಂಡ್ರೆಡ್ ಟೂರ್ನಿಯ ಈ ರೋಚಕ ಅಂತ್ಯ ಇದೀಗ ಕ್ರಿಕೆಟ್ ಅಭಿಮಾನಿಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.