ಸಚಿನ್ ಸೆಂಚುರಿ ದಾಖಲೆ ಯಾರು ಮುರೀತಾರೆ ಅನ್ಸಿತ್ತು: ಕೊಹ್ಲಿ ಬಗ್ಗೆ ಪಾಕ್ ಕ್ರಿಕೆಟಿಗ!

First Published | Nov 17, 2023, 5:33 PM IST

ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್  (NZ) ವಿರುದ್ಧದ ಐಸಿಸಿ ವಿಶ್ವಕಪ್ (ICC Worldcup 2023)  ಸೆಮಿಫೈನಲ್‌ನಲ್ಲಿ ಭಾರತವು ಭರ್ಜರಿ ಗೆಲವು ಗಳಿಸಿತತು. ಈ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ (Virat Kohli)  ಅವರು ತಮ್ಮ 50ನೇ ಶತಕ ಪೂರೈಸಿ ದಾಖಲೆ ಬರೆದರು. ವಿರಾಟ್‌ ಅವರ ಈ ಸಾಧನೆ ಬಗ್ಗೆ  ಪಾಕಿಸ್ತಾನದ ಮಾಜಿ ಆಟಗಾರ ವಾಸಿಂ ಆಕ್ರಮ್‌ (Wasim Akram) ಏನು ಹೇಳಿದ್ದಾರೆ ಗೊತ್ತಾ?

ಬುಧವಾರ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ವಿರುದ್ಧದ ಐಸಿಸಿ ವಿಶ್ವಕಪ್ ಸೆಮಿಫೈನಲ್‌ನಲ್ಲಿ  ವಿರಾಟ್ ಕೊಹ್ಲಿ ಅವರು ದಾಖಲೆಯ 50 ನೇ ODI ಶತಕದೊಂದಿಗೆ ಆಟವನ್ನು ತಮ್ಮದಾಗಿಸಿಕೊಂಡರು.

50-ಓವರ್‌ಗಳ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಚಿನ್ ತೆಂಡೂಲ್ಕರ್ ಅವರ 49 ಶತಕಗಳ ದಾಖಲೆಯನ್ನು ತೆಂಡೂಲ್ಕರ್ ಅವರ ಸಮ್ಮುಖದಲ್ಲಿಯೇ ವಿರಾಟ್‌ ಕೊಹ್ಲಿ ಹಿಂದಿಕ್ಕಿರುವುದು ಇನ್ನೂ ವಿಶೇಷ.

Tap to resize

ವಿರಾಟ್‌ ಅವರ ಈ ಸಾಧನೆಗೆ ಎಲ್ಲ ಕಡೆಯಿಂದ ಶುಭಾ‍ಶಯಗಳು ಮತ್ತು ಮೆಚ್ಚುಗೆಯ ಸುರಿಮಳೆ ಹರಿದು ಬರುತ್ತಿದೆ. ಪಾಕಿಸ್ತಾನದ ಆಟಗಾರ ವಾಸಿಂ ಆಕ್ರಮ್‌ ಸಹ ಕೊಹ್ಲಿ ಅವರ ಸಾಧನೆಯನ್ನು ಹೊಗಳಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ಅವರ 49 ಶತಕಗಳ ದಾಖಲೆ ಯಾರು ಮುರಿಯಲೂ ಸಾಧ್ಯವಿಲ್ಲ ಎಂದೇ ಭಾವಿಸಿದ್ದರು ಎಂಬ ವಿಷಯವನ್ನು ವಾಸಿಂ ಆಕ್ರಮ್‌ ಹಂಚಿಕೊಂಡಿದ್ದಾರೆ. 

'ಸಚಿನ್ 49 ಟನ್‌ಗಳೊಂದಿಗೆ ಪೂರ್ಣಗೊಳಿಸಿದಾಗ, ನಾನು ಯಾರಾದರೂ 50 ಶತಕಗಳನ್ನು ಗಳಿಸುವರೇ ಎಂದು ಯೋಚಿಸಿದ್ದೆ. ನೀವದನ್ನು ಎಲ್ಲಾ ಸ್ವರೂಪಗಳಲ್ಲಿಯೂ ಎಂದು ಇನ್ನೂ ಯೋಚಿಸಬಹುದು. ಆದರೆ ಈ ವ್ಯಕ್ತಿ (ಕೊಹ್ಲಿ) ಬಂದರು, ನೋಡಿದರು ಅವರೇ ದಾಖಲಿ ಮುರಿದರು,'  ಎಂದು ಬೌಲಿಂಗ್ ದಂತಕಥೆ ವಾಸಿಂ ಅಕ್ರಮ್ ಪಾಕಿಸ್ತಾನದ ಸುದ್ದಿ ವಾಹಿನಿ 'ಎ ಸ್ಪೋರ್ಟ್ಸ್'ನಲ್ಲಿ  ಹೇಳಿದ್ದಾರೆ.
 

ನ್ಯೂಜಿಲೆಂಡ್, ಉತ್ತಮ ಆರಂಭದ ಹೊರತಾಗಿಯೂ, ಡ್ಯಾರಿಲ್ ಮಿಥ್‌ಸೆಲ್ (134) ಅವರ ಶತಕ ಮತ್ತು ನಾಯಕ ಕೇನ್ ವಿಲಿಯಮ್ಸನ್ 69 ರನ್‌ಗಳೊಂದಿಗೆ  ದೊಡ್ಡ ಗುರಿಯನ್ನು ಉರುಳಿಸಲು ಗಂಭೀರ ಪ್ರಯತ್ನವನ್ನು ಮಾಡಿತು.

ಆದರೆ  ಭಾರತೀಯ ವೇಗಿ ಮೊಹಮ್ಮದ್ ಶಮಿ  7 ವಿಕೆಟ್ಸ್ ಉರುಳಿಸುವ ಮೂಲಕ ಭಾರತ 70 ರನ್ ಗೆಲುವು ಗಳಿಸಿ ಫೈನಲ್‌ಗೆ ಪ್ರವೇಶಿಸಿತು.
 

Latest Videos

click me!