ಭಾರತ- ಇಂಗ್ಲೆಂಡ್ ಮಧ್ಯೆ ನಡೆದ ಏಕದಿನ ಪಂದ್ಯದಲ್ಲಿ ಎಂ.ಎಸ್. ಧೋನಿ ಗಮನ ಸೆಳೆದಿದ್ದಾರೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಧೋನಿ ಕಿವಿಯಲ್ಲಿ ಡಿವೈಸ್ ಒಂದು ಕಾಣಿಸಿದೆ. ಅದ್ರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಭಾರತ–ಇಂಗ್ಲೆಂಡ್ ಏಕದಿನ ಪಂದ್ಯದ ವೇಳೆ ಎಂಎಸ್ ಧೋನಿ ಫೋಟೋ ಒಂದು ವೈರಲ್ ಆಗಿದೆ. ಪಂದ್ಯ ವೀಕ್ಷಣೆಗೆ ಬಂದಿದ್ದ ಧೋನಿ ಕಿವಿಯಲ್ಲಿದ್ದ ಡಿವೈಸ್ ಎಲ್ಲರ ಗಮನ ಸೆಳೆದಿದೆ. ಇದು ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಡಿವೈಸ್ ಬಗ್ಗೆ ಸಾಕಷ್ಟು ಚರ್ಚೆ ಆಗ್ತಿದೆ. ನೀವಂದ್ಕೊಂಡಂಗೆ ಇದು ಬ್ಲೂಟೂತ್ ಇಯರ್ಬಡ್ ಅಥವಾ ಹಿಯರಿಂಗ್ ಏಡ್ ಅಲ್ಲ. ಇದು ಸ್ಟೇಡಿಯಂ ರೇಡಿಯೋ ರಿಸೀವರ್ ಇಯರ್ಪೀಸ್ (Stadium Radio Receiver Earpiece).
25
ಈ ಡಿವೈಸ್ ಉಪಯೋಗ ಏನು?
ಸಾಮಾನ್ಯವಾಗಿ ಸ್ಟೇಡಿಯಂಗೆ ಹೋದಾಗ ಲೈವ್ ಆಗಿ ಪಂದ್ಯ ವೀಕ್ಷಣೆ ಮಾಡ್ಬಹುದು. ಆದ್ರೆ ಕಾಮೆಂಟ್ರಿ ಸರಿಯಾಗಿ ಕೇಳೋದಿಲ್ಲ. ಸ್ಕೋರ್ ಬಗ್ಗೆ ಮಾಹಿತಿ ಸರಿಯಾಗಿ ಸಿಗೋದಿಲ್ಲ. ಅದೇ ಈ ಡಿವೈಸ್ ಹಾಕಿಕೊಂಡ್ರೆ ನೀವು ಲೈವ್ ಆಗಿ ಪಂದ್ಯ ನೋಡ್ಬಹುದು, ಲೈವ್ ಬಾಲ್ ಟು ಬಾಲ್ ಕಮೆಂಟರಿ ಕೇಳ್ಬಹುದು.
35
ಇದು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ಡಿವೈಸ್ ಒಂದು FM ಅಥವಾ ವಿಶೇಷ ಸ್ಥಳೀಯ ರೇಡಿಯೋ ಫ್ರೀಕ್ವೆನ್ಸಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಪಂದ್ಯ ಆರಂಭಕ್ಕೂ ಮುನ್ನ ಅಭಿಮಾನಿಗಳು ಇದನ್ನು ಸ್ಟೇಡಿಯಂನಲ್ಲೇ ಬಾಡಿಗೆಗೆ ಅಥವಾ ಖರೀದಿಸಿ ಬಳಸಬಹುದು. ಸರಿಯಾದ ಫ್ರೀಕ್ವೆನ್ಸಿಗೆ ಟ್ಯೂನ್ ಮಾಡಿದ ನಂತರ ಕಾಮೆಂಟ್ರಿ ಯಾವುದೇ ದೊಡ್ಡ ವಿಳಂಬವಿಲ್ಲದೆ ಕೇಳಿಸುತ್ತದೆ.
ಈ ಡಿವೈಸ್ ನ ವಿಶೇಷತೆ ಎಂದ್ರೆ ಪಂದ್ಯದಲ್ಲಿ ನಡೆಯುವ ಪ್ರತಿಯೊಂದು ಎಸೆತ, ವಿಕೆಟ್, ಕ್ಯಾಚ್ ಅಥವಾ ರಿವ್ಯೂ ಕುರಿತು ತಕ್ಷಣದ ಮಾಹಿತಿ, ತಜ್ಞರ ವಿಶ್ಲೇಷಣೆ, ಆಟಗಾರರ ಅಂಕಿ-ಅಂಶಗಳು ಮತ್ತು ಪಂದ್ಯಕ್ಕೆ ಸಂಬಂಧಿಸಿದ ಕುತೂಹಲಕಾರಿ ವಿವರಗಳನ್ನು ಕೇಳಬಹುದು. ಇದರಿಂದ ಪಂದ್ಯವನ್ನು ನೋಡುವ ಅನುಭವ ಇನ್ನಷ್ಟು ರೋಚಕವಾಗುತ್ತದೆ. ಇಂತಹ ರೇಡಿಯೋ ರಿಸೀವರ್ಗಳನ್ನು ವಿಶೇಷವಾಗಿ ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ಕೆಲವು ಯುರೋಪಿಯನ್ ದೇಶಗಳ ಕ್ರಿಕೆಟ್ ಹಾಗೂ ಕ್ರೀಡಾಂಗಣಗಳಲ್ಲಿ ಹಲವು ವರ್ಷಗಳಿಂದ ಬಳಸಲಾಗುತ್ತಿದೆ. ಪ್ರಸಿದ್ಧ BBC Test Match Special ಸೇರಿದಂತೆ ವಿವಿಧ ಕಾಮೆಂಟ್ರಿ ಸೇವೆಗಳು ಈ ಸೌಲಭ್ಯವನ್ನು ಒದಗಿಸುತ್ತವೆ.
55
ಡಿವೈಸ್ ಮಿತಿ
ಈ ಡಿವೈಸ್ಗೆ ಒಂದು ಮಿತಿಯೂ ಇದೆ. ಇದು ಸ್ಟೇಡಿಯಂ ಸುತ್ತಮುತ್ತಲಿನ ನಿರ್ದಿಷ್ಟ ಪ್ರದೇಶದಲ್ಲಿ ಮಾತ್ರ ಕಾರ್ಯನಿರ್ವಹಿಸುತ್ತದೆ. ಸ್ಟೇಡಿಯಂನಿಂದ ಹೊರಬಂದ ಕೂಡಲೇ ಇದರ ಸಿಗ್ನಲ್ ನಿಲ್ಲುತ್ತದೆ. ಧೋನಿ ಕಿವಿಯಲ್ಲಿ ಕಂಡ ಸಾಧನ ರಹಸ್ಯ ತಂತ್ರಜ್ಞಾನವಲ್ಲ. ಅದು ಪಂದ್ಯವನ್ನು ನೋಡುವುದರ ಜೊತೆಗೆ ಕೇಳುವ ಅನುಭವವನ್ನೂ ಒಂದೇ ಸಮಯದಲ್ಲಿ ನೀಡುವ ಸ್ಮಾರ್ಟ್ ಸ್ಟೇಡಿಯಂ ರೇಡಿಯೋ ರಿಸೀವರ್ . ಕ್ರಿಕೆಟ್ ಅಭಿಮಾನಿಗಳಿಗೆ ಅತ್ಯುತ್ತಮ ಸಾಧನ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.