ʼಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಪ್ರಸಾರ ಆಗುತ್ತಿದ್ದ ಟೈಮ್‌ನಲ್ಲೇ ನಾನು ಇನ್ಮುಂದೆ ಬಿಗ್ ಬಾಸ್ ಶೋ ನಿರೂಪಣೆ ಮಾಡೋದಿಲ್ಲ ಎಂದು ಕಿಚ್ಚ ಸುದೀಪ್ ಅವರು ಅಧಿಕೃತವಾಗಿ ಹೇಳಿಕೆ ಕೊಟ್ಟಿದ್ದರು. ಇಷ್ಟು ವರ್ಷಗಳಿಂದ ಕಿಚ್ಚ ಸುದೀಪ್ ನಿರೂಪಣೆ ಮಾಡಿಕೊಂಡು ಬರುತ್ತಿದ್ದಾರೆ, ಮುಂದಿನ ಬಾರಿ ಯಾರು ನಿರೂಪಣೆ ಮಾಡ್ತಾರೆ ಎಂಬ ಪ್ರಶ್ನೆ ಎದುರಾಗಿತ್ತು. ಅಂದಹಾಗೆ ಕಿಚ್ಚ ಸುದೀಪ್ ಇಲ್ಲದ ಬಿಗ್ ಬಾಸ್ ಶೋ ಊಹಿಸಿಕೊಳ್ಳೋದು ಕಷ್ಟ ಎನ್ನೋದು ವೀಕ್ಷಕರ ಅಭಿಪ್ರಾಯ.
27
ಶೋ ಡೈರೆಕ್ಟರ್ ಏನು ಹೇಳಿದ್ರು?
“ಕಿಚ್ಚ ಸುದೀಪ್ ಅವರನ್ನು ಮನವೊಲಿಸ್ತೀವಿ, ಅವರೇ ಬಿಗ್ ಬಾಸ್ ಶೋ ನಿರೂಪಣೆ ಮಾಡ್ತಾರೆ, ಅವರಿಲ್ಲದೆ ಬಿಗ್ ಬಾಸ್ ಇಲ್ಲ” ಎಂದು ಡೈರೆಕ್ಟರ್ ಪ್ರಕಾಶ್ ಅವರೇ ಸುದ್ದಿಗೋಷ್ಠಿಯೊಂದರಲ್ಲಿ ಹೇಳಿಕೊಂಡಿದ್ದರು. ಹೀಗಾಗಿ ಸುದೀಪ್ ಅವರು ಮತ್ತೆ ನಿರೂಪಣೆಗೆ ಮರಳುವ ಚಾನ್ಸ್ ಇದೆ. ಕಿಚ್ಚ ಸುದೀಪ್ ಬಿಗ್ ಬಾಸ್ ಶೋಗೆ ಬರಬೇಕು ಅಂದ್ರೆ ಏನೇನು ಬದಲಾವಣೆ ಆಗಬೇಕು ಎಂಬ ಪ್ರಶ್ನೆ ಏಳುವುದು.
37
ಸ್ಪರ್ಧಿಗಳ ಆಯ್ಕೆ
ಯಾವುದೇ ಭಾಷೆಯ ಬಿಗ್ ಬಾಸ್ ಶೋ ತಗೊಳ್ಳಿ, ಅಲ್ಲಿ ವಿವಾದಾತ್ಮಕ ಸ್ಪರ್ಧಿಗಳು ಹೆಚ್ಚು ಇರುತ್ತಾರೆ. ಹೀಗಾಗಿ ಸೀಸನ್ 12ರಲ್ಲಿ ವಿವಾದಾತ್ಮಕ ಸ್ಪರ್ಧಿಗಳು ಇಲ್ಲದಿದ್ದರೆ ಒಳ್ಳೆಯದು.
ಬಿಗ್ ಬಾಸ್ ಮನೆಯಲ್ಲಿ ಒಂದಷ್ಟು ರೂಲ್ಸ್ ಇವೆ. ಅದರಲ್ಲಿಯೂ ಹೊಡೆದಾಟಕ್ಕೆ ಮುಂದಾಗುವವರು, ಕೈ ಮಾಡುವವರನ್ನು ಗೇಟ್ ಹೊರಗಡೆ ಕಳಿಸಲಾಗುತ್ತದೆ. ಈ ವಿಚಾರದಲ್ಲಿ ಪಕ್ಷಪಾತ ಇರಬಾರದು.
57
ಜಗಳ ಉಂಟುಮಾಡುವ ಟಾಸ್ಕ್ ಬೇಡ
ಕೆಲವೊಂದು ಟಾಸ್ಕ್‌ಗಳು ಪರಸ್ಪರ ದ್ವೇಷ ಮಾಡುವಂತೆ ಮಾಡುತ್ತವೆ, ಅಷ್ಟೇ ಅಲ್ಲದೆ ಮನಸ್ತಾಪ, ಜಗಳಕ್ಕೆ ಸಾಕ್ಷಿಯಾಗುತ್ತದೆ. ಈ ಹಿಂದೆ ಮೊದಲ ಸೀಸನ್ ನೋಡಿದರೆ ಅಲ್ಲಿ ಮನರಂಜನೆ ಜಾಸ್ತಿ ಇರುತ್ತಿತ್ತು.
67
ಕಾಮಿಡಿ, ಮನರಂಜನೆ ಜಾಸ್ತಿ ಆಗಬೇಕು
ಬಿಗ್ ಬಾಸ್ ಶೋನಲ್ಲಿ ಕಾಮಿಡಿ, ಮನರಂಜನೆ ಜಾಸ್ತಿ ಆಗಬೇಕು, ಪ್ರತಿಭಾವಂತರಿಗೆ ಹೆಚ್ಚು ಅವಕಾಶ ಸಿಗಬೇಕು. ಅದನ್ನು ಬಿಟ್ಟು ಜಗಳವೇ ಬಿಗ್ ಬಾಸ್ ಶೋ ಆಗಬಾರದು.
77
ಸ್ಪರ್ಧಿ ಸೇವ್ ಆಗೋ ಮಾನದಂಡ ಏನು?
ಜಗಳ ಮಾಡೋರು, ಲವ್ ಮಾಡಿಕೊಂಡು ಇರೋರು ಬಿಗ್ ಬಾಸ್ ಮನೆಯಲ್ಲಿ ಹೆಚ್ಚು ವಾರ ಉಳಿಯುತ್ತಾರೆ ಅಂದರೆ ಸರಿಯೇ? ಎಲಿಮಿನೇಶನ್ ಮಾನದಂಡ ಏನು ಎನ್ನೋದು ನಿರ್ಧಾರ ಆಗಬೇಕು.