Virat Kohli's Kannada Flag Gesture: ಹಳದಿ-ಕೆಂಪು ಕನ್ನಡದ ಬಾವುಟ ಹಿಡಿದು ಆರ್‌ಸಿಬಿ ಗೆಲುವು ಸಂಭ್ರಮಿಸಿದ ವಿರಾಟ್ ಕೊಹ್ಲಿ!

Published : Jun 04, 2025, 03:54 PM ISTUpdated : Jun 04, 2025, 07:11 PM IST

ಐಪಿಎಲ್ 2025 ಟ್ರೋಫಿ ಗೆದ್ದ ಆರ್‌ಸಿಬಿ ತಂಡ ಬೆಂಗಳೂರಿಗೆ ಆಗಮಿಸಿ ವಿಜಯೋತ್ಸವ ಆಚರಿಸಿದೆ. ವಿರಾಟ್ ಕೊಹ್ಲಿ ಕನ್ನಡದ ಬಾವುಟ ಹಿಡಿದು ಅಭಿಮಾನಿಗಳಿಗೆ ನಮನ ಸಲ್ಲಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಂಡವನ್ನು ಬರಮಾಡಿಕೊಂಡರು.

PREV
15

ಬೆಂಗಳೂರು (ಜೂ.04): ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್ 2025ರ ಟ್ರೋಫಿ ಗೆಲುವಿನ ಬೆನ್ನಲ್ಲಿಯೇ ಈ ಸಲ ಕಪ್ ನಮ್ಮದು ಎಂಬ ಕನ್ನಡದ ವಾಕ್ಯವನ್ನು ಇಡೀ ವಿಶ್ವದ ಜನರ ಬಾಯಲ್ಲಿ ಹೇಳಿಸಿದ್ದರು. ಇದೀಗ ಆರ್‌ಸಿಬಿ ವಿಜಯೋತ್ಸವಕ್ಕೆ ಬಂದಿರುವ ವಿರಾಟ್ ಕೊಹ್ಲಿ ಕನ್ನಡದ ಹಳದಿ-ಕೆಂಪು ಬಾವುಟವನ್ನು ಹಿಡಿದು ಕನ್ನಡದ ಅಭಿಮಾನಿಗಳಿಗೆ ನಮನವನ್ನು ಅರ್ಪಿಸಿದರು.

25

ಗುಜರಾತಿನ ಅಹಮದಾಬಾದ್ ನಗರದಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್ ತಂಡವನ್ನು ಮಣಿಸಿ 18ನೇ ಸೀಸನ್‌ನ ಐಪಿಎಲ್ ಟ್ರೋಫಿಯನ್ನು ಜಯಿಸಿದ ನಂತರ ವಿರಾಟ್ ಕೊಹ್ಲಿ ಹಾದಿಯಾಗಿ ಎಲ್ಲರೀ ಈ ವಿಜಯೋತ್ಸವ ಸಂಭ್ರಮವನ್ನು ತವರೂರು ಬೆಂಗಳೂರಿನಲ್ಲಿ ಆಚರಣೆ ಮಾಡಬೇಕು ಎಂದು ತುದಿಗಾಲಲ್ಲಿ ಕಾಯುತ್ತಿದ್ದರು.

35

ಈ ಕ್ಷಣಕ್ಕಾಗಿ ನಿದ್ದೆಯೂ ಮಾಡದಂತೆ ಕಾತುರದಿಂದ ಕಾಯುತ್ತಿದ್ದ ಆರ್‌ಸಿಬಿ ತಂಡದ ಆಟಗಾರರು ಬೆಂಗಳೂರಿಗೆ ವಿಶೇಷ ವಿಮಾನದಲ್ಲಿ ಆಗಮಿಸಿದ್ದಾರೆ. ಬೆಂಗಳೂರಿನ ಹೆಚ್‌ಎಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರಾಟ್ ಕೊಹ್ಲಿ ಅವರನ್ನು ಬರಮಾಡಿಕೊಂಡು ಅವರ ಕೈಗೆ ಆರ್‌ಸಿಬಿ ಹಾಗೂ ಕನ್ನಡದ ಬಾವುಟವನ್ನು ಕೊಟ್ಟು ಸ್ವಾಗತಿಸಿದರು.

45

ಈ ವೇಳೆ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಿ ಕನ್ನಡದ ಹಳದಿ-ಕೆಂಪು ಬಾವುಟವನ್ನು ಹಿಡಿದು ಬೀಸುತ್ತಾ ನಗುತ್ತಲೇ ಅಭಿಮಾನಿಗಳಿಗೆ ನಮನ ಅರ್ಪಿಸಿದರು. ಈ ಕ್ಷಣವನ್ನು ಕಣ್ತುಂಬಿಕೊಂಡ ಕನ್ನಡದ ಜನತೆ ಕರಾಡತನ ಜೋರಾಗಿತ್ತು.

55

ಇದೇ ವೇಳೆ ಆರ್‌ಸಿಬಿ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮಾಜಿ ಆಟಗಾರ ದಿನೇಶ್ ಕಾರ್ತಿಕ್, ಹಾಲಿ ಆರ್‌ಸಿಬಿ ಆಟಗಾರರಾದ ಟಿಮ್ ಡೇವಿಡ್, ಕೃನಾಲ್ ಪಾಂಡ್ಯ ಸೇರಿದಂತೆ ಎಲ್ಲ ಆಟಗಾರರಿಗೆ ಹೂಗುಚ್ಛ ಕೊಟ್ಟು ಸ್ವಾಗತಿಸಿದರು.

Read more Photos on
click me!

Recommended Stories