ಈ ವರ್ಷ ಆರ್‌ಸಿಬಿ ಕಪ್ ಗೆಲ್ಲಲು ಪ್ರಮುಖ ಕಾರಣಗಳೇನು?

Published : Jun 04, 2025, 03:05 PM IST

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರ ಬೆನ್ನಲ್ಲೇ ಆರ್‌ಸಿಬಿ ಗೆಲುವಿಗೆ ಕಾರಣವೇನು ನೋಡೋಣ ಬನ್ನಿ

PREV
111

18ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಆರ್‌ಸಿಬಿ ಚಾಂಪಿಯನ್ ಆಗಲು ಕಾರಣವೇನು ಎನ್ನುವ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ

211

ಹರಾಜಿನಲ್ಲೇ ಗೆದ್ದಿದ್ದ ಆರ್‌ಸಿಬಿ. ಸ್ಟಾರ್ ಆಟಗಾರರಿಗೆ ಮಣೆ ಹಾಕದೆ, ಟೀಕೆಗಳಿಗೆ ಕಿವಿಗೊಡದೆ ಮ್ಯಾಚ್ ವಿನ್ನರ್‌ಗಳನ್ನು ಖರೀದಿಸಿದ ತಂಡ.

311

ಪ್ರತಿ ಆಟಗಾರನಿಗೂ ತಂಡದಲ್ಲಿ ಆತನ ಪಾತ್ರವೇನು ಎಂಬ ಬಗ್ಗೆ ಸ್ಪಷ್ಟತೆ ಒದಗಿಸಿದ್ದ ಕೋಚ್‌ಗಳು. ಬಹುತೇಕ ಆಟಗಾರರು ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದೇ ಯಶಸ್ಸಿಗೆ ಕಾರಣ.

411

ಕೇವಲ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ಮೇಲೆ ಅವಲಂಬಿತಗೊಳ್ಳದ ತಂಡ, 9, 10ನೇ ಕ್ರಮಾಂಕದ ವರೆಗೂ ಬ್ಯಾಟರ್‌ಗಳನ್ನು ಹೊಂದಿದ್ದ ರಿಂದ ಒತ್ತಡದ ಪರಿಸ್ಥಿತಿಗಳನ್ನು ನಿಭಾಯಿಸಲು ಸಾಧ್ಯವಾಯಿತು.

511

ಒಂದಕ್ಕಿಂತ ಹೆಚ್ಚು ಫಿನಿಶರ್‌ಗಳು ಇದ್ದಿದ್ದೇ ತಂಡ ಬಹುತೇಕ ಪಂದ್ಯಗಳಲ್ಲಿ ಮೇಲುಗೈ ಸಾಧಿಸಲು ಕಾರಣ. ಜಿತೇಶ್ ಶರ್ಮಾ, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ರೊಮಾರಿಯಾ ಶೆಫರ್ಡ್‌ರಿಂದ ಅದ್ಭುತ ಕೊಡುಗೆ

611

• ಕಪ್ ಗೆಲುವಿನ ಹಿಂದಿದೆ ಸಂಘಟಿತ ಪರಿಶ್ರಮ, ಟೂರ್ನಿಯಲ್ಲಿ ಆಡಿದ ಒಟ್ಟು 16 ಪಂದ್ಯದಲ್ಲಿ ಬೇರೆ ಆಟಗಾರರಿಗೆ ಸಿಕ್ಕಿದೆ ಪಂದ್ಯ ಶ್ರೇಷ್ಠ ಗೌರವ

711

ಟೂರ್ನಿಯಲ್ಲಿ ಆರ್‌ಸಿಬಿಯ 10 ಬ್ಯಾಟರ್‌ಗಳಿಂದ ಮೂಡಿದೆ ಅರ್ಧಶತಕ. ಐಪಿಎಲ್ ಇತಿಹಾಸದಲ್ಲೇ ಇದೊಂದು ದಾಖಲೆ.

811

ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್‌ರ ಸ್ಥಿರ ಪ್ರದರ್ಶನ. ಕೊಹ್ಲಿಯಿಂದ ದಾಖಲೆಯ 8 ಬಾರಿಗೆ ಲೀಗ್‌ನಲ್ಲಿ 500ಕ್ಕೂ ಹೆಚ್ಚು ರನ್.

911

ಟೂರ್ನಿಯುದ್ದಕ್ಕೂ ಅಮೋಘ ಬೌಲಿಂಗ್ ಪ್ರದರ್ಶನ. ತಂಡದ ಗೆಲುವಿನಲ್ಲಿದೆ ಹೇಜಲ್‌ವುಡ್, ಭುವನೇಶ್ವರ್, ಯಶ್ ದಯಾಳ್, ಸುಯಶ್ ಶರ್ಮಾ, ಕೃನಾಲ್ ಪಾಂಡ್ಯ ಪಾತ್ರ.

1011

ಆರ್‌ಸಿಬಿಯ ಪವರ್‌-ಪ್ಲೇ(ಓವರ್ 1-6), ಡೆತ್ ಓವರ್ (ಓವರ್ 17-20) ಬೌಲಿಂಗ್ ಪ್ರದರ್ಶನ 10 ತಂಡಗಳ ಪೈಕಿ ಶ್ರೇಷ್ಠ ಎನಿಸಿದೆ. ಪವರ್-ಪ್ಲೇನಲ್ಲಿ 7.75, ಡೆತ್ ಓವರ್‌ಗಳಲ್ಲಿ 10.2 ರನ್ ಎಕಾನಮಿ ರೇಟ್ ಹೊಂದಿದೆ.

1111

ತವರಿನಲ್ಲಿ ನಿರೀಕ್ಷಿತ ಯಶಸ್ಸು ಕಾಣದಿದ್ದರೂ ತವರಿನಾಚೆ ನಡೆದ ಲೀಗ್ ಹಂತದ ಎಲ್ಲಾ7 ಪಂದ್ಯದಲ್ಲೂ ಗೆದ್ದು ಹೊಸ ದಾಖಲೆ ಸೃಷ್ಟಿಸಿದ ತಂಡ. ಸ್ಥಳಾಂತರಗೊಂಡ, ಪ್ಲೇ-ಆಫ್ ಪಂದ್ಯಗಳನ್ನೂ ಪರಿಗಣಿಸಿದರೆ, ತವರಿನಾಚೆ ಆಡಿದ 10 ಪಂದ್ಯಗಳಲ್ಲಿ 9ರಲ್ಲಿ ಗೆದ್ದ ತಂಡ.

Read more Photos on
click me!

Recommended Stories