ವಿರಾಟ್ ಕೊಹ್ಲಿ ಸ್ವಾರ್ಥಿ ನಾ? ಶತಕದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಕನ್ನಡಿಗ ಕೆ ಎಲ್ ರಾಹುಲ್..!

First Published | Oct 20, 2023, 5:00 PM IST

ಬೆಂಗಳೂರು: ಟೀಂ ಇಂಡಿಯಾ ರನ್ ಮಷೀನ್ ವಿರಾಟ್ ಕೊಹ್ಲಿ, ಏಕದಿನ ಕ್ರಿಕೆಟ್‌ನಲ್ಲಿ 48ನೇ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಕೊನೆಯಲ್ಲಿ ವಿರಾಟ್ ಕೊಹ್ಲಿ, ಶತಕ ಸಿಡಿಸಬೇಕು ಎಂಬಂತೆ ಆಡಿದರು ಎನ್ನುವ ಆರೋಪ ಸೋಷಿಯಲ್ ಮೀಡಿಯಾದಲ್ಲಿ ಕೇಳಿ ಬಂದಿದೆ. ಈ ಕುರಿತಂತೆ ಸಹ ಆಟಗಾರ ಕೆ ಎಲ್ ರಾಹುಲ್ ಪ್ರತಿಕ್ರಿಯೆ ನೀಡಿದ್ದಾರೆ. 

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಪುಣೆಯಲ್ಲಿ ನಡೆದ ಬಾಂಗ್ಲಾದೇಶ ಎದುರಿನ ಪಂದ್ಯದ ವೇಳೆ ಅಜೇಯ ಶತಕ ಸಿಡಿಸುವ ಮೂಲಕ ತಂಡಕ್ಕೆ 7 ವಿಕೆಟ್‌ಗಳ ಸುಲಭ ಗೆಲುವು ತಂದುಕೊಟ್ಟಿದ್ದಾರೆ.

ಬಾಂಗ್ಲಾದೇಶ ನೀಡಿದ್ದ ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡವು 41.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ವಿರಾಟ್ ಕೊಹ್ಲಿ ಸಿಕ್ಸರ್ ಸಿಡಿಸುವುದರ ಮೂಲಕ ಶತಕ ಪೂರೈಸುವುದರ ಜತೆಗೆ ತಂಡವನ್ನು ಗೆಲುವಿನ ದಡ ಸೇರಿಸಿದರು.
 

Latest Videos


ಬಾಂಗ್ಲಾದೇಶ ಎದುರು ಭಾರತ ಪಂದ್ಯ ಗೆಲ್ಲಲು 19 ರನ್‌ ಬೇಕಿದ್ದಾಗ, ಕೊಹ್ಲಿಯ ಶತಕಕ್ಕೂ 19 ರನ್ ಬೇಕಿತ್ತು. ಆ ಬಳಿಕ ಸತತವಾಗಿ ಸ್ಟ್ರೈಕ್‌ ತಮ್ಮಲ್ಲೇ ಉಳಿಸಿಕೊಂಡ ವಿರಾಟ್‌, ಸಿಕ್ಸರ್‌ ಮೂಲಕ ಶತಕ ಪೂರೈಸಿದರು. 
 

ಕೊನೆಯಲ್ಲಿ ವಿರಾಟ್ ಕೊಹ್ಲಿ ಸ್ಟ್ತೈಕ್ ಉಳಿಸಿಕೊಂಡಿದ್ದು, ಹಲವು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು, ಶತಕ ಗಳಿಸಿ ದಾಖಲೆ ಬರೆಯುವ ಉದ್ದೇಶದಿಂದಲೇ ಕೊಹ್ಲಿ ಸಿಂಗಲ್ಸ್ ನಿರಾಕರಿಸಿದರು ಎನ್ನುವ ಟೀಕೆ ಕೂಡಾ ವ್ಯಕ್ತವಾಗಿದೆ.
 

ಆದರೆ ಪಂದ್ಯ ಮುಕ್ತಾಯದ ಬಳಿಕ ಮಾತನಾಡಿದ ಕೆ ಎಲ್ ರಾಹುಲ್, ತಾವೇ ವಿರಾಟ್ ಕೊಹ್ಲಿ ಶತಕ ಸಿಡಿಸಲು ಮನವೊಲಿಸಿದ್ದಾಗಿ ಹೇಳಿದ್ದಾರೆ. ಇದಷ್ಟೇ ಅಲ್ಲದೇ ಸಿಂಗಲ್ಸ್‌ ಪಡೆಯುವುದನ್ನು ತಾವೇ ನಿರಾಕರಿಸಿದ್ದಾಗಿ ಒಪ್ಪಿಕೊಂಡಿದ್ದಾರೆ
 

ಅವರು ಸ್ವಲ್ಪ ಕನ್ಫೂಸ್ ಆಗಿದ್ದರು. ಸಿಂಗಲ್ಸ್‌ ಪಡೆಯದೇ ಇರುವುದನ್ನು ನೋಡುವುದಕ್ಕೆ ಸರಿ ಕಾಣುವುದಿಲ್ಲ. ಇದು ವಿಶ್ವಕಪ್ ಗೇಮ್, ನಾನು ದಾಖಲೆಗಾಗಿ ಆಡಲು ಬಯಸುವುದಿಲ್ಲ ಎಂದೆಲ್ಲ ವಿರಾಟ್ ಕೊಹ್ಲಿ ನನ್ನ ಬಳಿ ಹೇಳಿದರು.
 

ನಾನಾಗ, ನಾವು ಹೇಗೂ ನಾವು ಸುಲಭವಾಗಿ ಮ್ಯಾಚ್ ಗೆಲ್ಲುತ್ತೇವೆ. ನಿಮಗೆ ಮೈಲಿಗಲ್ಲು ನಿರ್ಮಿಸಲು ಸಾಧ್ಯವಾಗುವುದಾದರೇ ಯಾಕೆ ಪ್ರಯತ್ನಿಸಬಾರದು. ನೀವು ಶತಕ ಸಿಡಿಸಲು ಪ್ರಯತ್ನ ಪಡಿ ಎಂದು ಹೇಳಿದೆ. ಹಾಗೂ ಸಿಂಗಲ್ಸ್ ಪಡೆಯುವುದು ಬೇಡ ಎಂದು ನಾನೇ ನಿರಾಕರಿಸಿದೆ ಎಂದು ಕೆ ಎಲ್ ರಾಹುಲ್ ಹೇಳಿದ್ದಾರೆ.
 

click me!